May 3, 2024

Bhavana Tv

Its Your Channel

ವಿಜಯಪೂರ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸುಜಾತಾ ಕಳ್ಳಿಮನಿಯವರು ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ವಿಜಾಪೂರ ; ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾದಲ್ಲಿ ಊರಿನ ಗ್ರಾಮ ದೇವತೆಯಾದ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಬೇಟಿ ನೀಡಿದ ನಂತರ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕಮೀಟಿ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜಾತ ಕಳ್ಳಿಮನಿ ಮಾತನಾಡಿ ಜಿಲ್ಲಾ ಪಂಚಾಯತ್ ಚುನಾವಣೆ ಎದುರಾದಾಗ ನಿಮ್ಮ ತಾಂಬಾ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶಕುಂತಲಾ ಸುಭಾಸ ಕಲ್ಲೂರವರು ಪಕ್ಷ ನಿಷ್ಠೆಯಿಂದ ನಮಗೆ ಮತದಾನ ಮಾಡಿದ ಪ್ರತಿಫಲದಿಂದ ನಾವು ಈಗ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ನಿಮ್ಮ ಮುಂದೆ ಬಂದು ನಿಲ್ಲುವಂತಾಗಿದೆ. ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಮುದಾಯ ಭವನಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾಗ ಮೊದಲು ೫೦ ಲಕ್ಷ ರೂಪಾಯಿ ಮಂಜೂರು ಮಾಡಿಸಿದ್ದೇವು .ಮತ್ತೆ ೫೦ ಲಕ್ಷದ ಕೆಲಸ ಮಂಜೂರು ಆಗಿದೆ ಶೀಘ್ರದಲ್ಲೇ ಹಣ ಬಿಡುಗಡೆ ಆಗುತ್ತದೆ. ಏನಾದರೂ ಹೆಚ್ಚಿನ ಕೆಲಸಗಳನ್ನು ನಿಮ್ಮ ಜಿಲ್ಲಾ ಪಂಚಾಯತ್ ಸದಸ್ಯರು ನಾವು ಕೂಡಿಕೊಂಡು ಹೆಚ್ಚಿನ ಕೆಲಸ ಮಾಡುತ್ತೇವೆ ಎಂದರು.

ಅಹಿಂದ ಸೋಮನಾಥ ಕಳ್ಳಿಮನಿಯವರು ಮಾತನಾಡಿ ಸರಕಾರ ಕೋಟ್ಯಂತರ ರೂ.ವೆಚ್ಚ ಮಾಡಿ ಶೈಕ್ಷಣಿಕ ಅನೇಕ ಯೋಜನೆ ಜಾರಿ ಮಾಡಿದರೂ ಗ್ರಾಮೀಣ ಮಕ್ಕಳು ಇನ್ನೂ ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಜಾರಿಯಾದರೂ ಬಡ ಮಕ್ಕಳಿಗೆ, ಪೋಷಕರಿಗೆ ಸರಿಯಾದ ಮಾಹಿತಿ ಇಲ್ಲ. ಆಧುನಿಕ ಕಾಲದಲ್ಲಿಯೂ ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಅಕ್ಷರಸ್ಥರು, ನೌಕರರು ಶಾಲೆಗೆ ಸೇರಿಸಲು ಶ್ರಮಪಡಬೇಕು ಎಂದು ಸಮಾಜ ಬಾಂಧವರಿಗೆ ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಕಾಶಿನಾಥ್ ಮಸಬಿನಾಳ ದಂಪತಿಗಳು ಜಿಲ್ಲಾ ಪಂಚಾಯತ್ ಸದಸ್ಯರ ಸುಪುತ್ರರಾದ ಅಪ್ಪಣ್ಣ ಕಲ್ಲೂರ, ತಾಲ್ಲೂಕು ಪಂಚಾಯತ್ ಸದಸ್ಯರಾದ ಪ್ರಕಾಶ್ ಮುಂಜಿ, ಗುರುಸಂಗಪ್ಪ ಬಾಗಲಕೋಟಿ , ಮಹಾಲಕ್ಷ್ಮೀ ಸೆವಾ ಸಮಿತಿಯ ಅಧ್ಯಕ್ಷರಾದ ಬೀರಪ್ಪ ಮ್ಯಾಗೇರಿ, ಕಾಂಗ್ರೆಸ್ ನಾಯಕರಾದ ಕಾಮೇಶ ಉಕ್ಕಲಿ.ಪುಟ್ಟುಗೌಡ ಪಾಟೀಲ,ಅಣ್ಣಾರಾಯ ಪಾಟೀಲ ,ಅರ್ಜನ ಪೂಜಾರಿ,ಮಾಳಪ್ಪ ತಾವರಖೇಡ ಉಪಸ್ಥಿತರಿದ್ದರು, ಶೇಖರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

error: