December 21, 2024

Bhavana Tv

Its Your Channel

ಸಾವಳಗಿ ಹೋಬಳಿ ವ್ಯಾಪ್ತಿಯಲ್ಲಿ ವಿವಿಧೆಡೆ ಸರಳ ರೀತಿಯಲ್ಲಿ ಧ್ವಜಾರೋಹಣ

ಸಾವಳಗಿ: ೭೫ ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಸಾವಳಗಿಯ ನಾಡ ಕಾರ್ಯಾಲಯದಲ್ಲಿ ಉಪತಹಶೀಲ್ದಾರ ಎ ಕೆ ಇಂಡಿಕರ, ರೈತ ಸಂಪರ್ಕ ಕೇಂದ್ರದಲ್ಲಿ ರವೀಂದ್ರ ತುಳಸಿಗೆರಿ, ಗ್ರಾಮ ಪಂಚಾಯತಿ ಆವರಣದಲ್ಲಿ ಪಿಡಿಒ ಗಿರೀಶ ಕಡಕೂಳ, ಬಾಪೂಜಿ ಸೌಹಾರ್ದ ಸಹಕಾರಿ ಶಾಖೆಯ ಮುಂಭಾಗ ಫಾರುಖ ಅಮ್ಮದ ಪಟೇಲ, ಸಾವಳಗಿ ಪೋಲಿಸ್ ಠಾಣೆಯು ಮುಂದೆ ಎಎಸೈ ಎನ ಟಿ ದಡ್ಡಿಮನಿ, ವಿಜಯ ಸೌಹಾರ್ದ ಕ್ರೇಡಿಟ್ ಸಾವಳಗಿ ಶಾಖೆಯಲ್ಲಿ ಸತಗೌಡ ನ್ಯಾಮಗೌಡ, ಪಿ ಕೆ ಪಿ ಎಸ ಹೂಸದು ಶಾಖೆಯಲ್ಲಿ ಸುಶೀಲಕುಮಾರ ಬೆಳಗಲಿ, ಡಿಸಿಸಿ ಬ್ಯಾಂಕ ಸಾವಳಗಿ ಶಾಖೆಯಲ್ಲಿ ಸಂತೋಷ ಗಾರಗೆ, ಧ್ವಜಾರೋಹಣ ನೇರವೆರಿಸಿದರು. ಗ್ರಾಮ ಪಂಚಾಯತಿ ಆವರಣದಲ್ಲಿ ಧ್ವಜಾರೋಹಣ ನೇರವೆರಸಿ ಮಾತನಾಡಿದ ಪಿಡಿಒ ಗೀರಿಶ ಕಡಕೋಳ ಪ್ರತಿವರ್ಷ ಶಾಲಾ ಮಕ್ಕಳು ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ವಿಜೃಂಭಣೆಯಿAದ ಸ್ವಾತಂತ್ರ‍್ಯೂತ್ಸವವನ್ನು ಆಚರಿಸುತ್ತಿದೆವು ಆದರೆ ಈ ಮಹಾಮಾರಿ ಕರೋನದಿಂದ ಅತಿ ಸರಳ ಮತ್ತು ಸರ್ಕಾರದ ಆದೇಶದ ಪ್ರಕಾರ ಆಚರಣೆ ಮಾಡಿದ್ದೆವೆ ಇಂತಹ ಸಮಯದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ ನಾಯಕರನ್ನು ಸ್ಮರಿಸಿಕೂಳ್ಳುತ್ತಾ ಎಲ್ಲರಿಗೂ ಸ್ವಾತಂತ್ರ‍್ಯ ದಿನಾಚರಣೆಯ ಶುಭಾಶಯಗಳು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವೈ ಎಚ ದ್ರಾಕ್ಷಿ, ಆನಂದ ರಾಥೂಡ, ರಾಜು ಮೇಲಿನಕೇರಿ, ಸುಭಾಷ ಪಾಟೂಳಿ, ಸಾಗರ ಕಾಂಬಳೆ, ಅನೇಕರು ಉಪಸ್ಥಿತರಿದ್ದರು.

ವರದಿ ಕಿರಣ ಸೂರಗೂಂಡ ಸಾವಳಗಿ

error: