December 19, 2024

Bhavana Tv

Its Your Channel

ಪಟ್ಟಣ ಪಂಚಾಯತ್ ಕಮತಗಿ ಇವರ ವತಿಯಿಂದ ‘ಸ್ವಚ್ಛತಾ ಕೇ ದೋ’ ರಂಗ ಸ್ವಚ್ಛತಾ ಅಭಿಯಾನವ

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಪಟ್ಟಣ ಪಂಚಾಯತ್ ಕಮತಗಿ ಇವರ ವತಿಯಿಂದ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳಿಂದ ಸ್ವಚ್ಛತಾ ಕೆ ದೋ ರಂಗ (ಹಸಿ ಕಸ ಹಾಗೂ ಒಣ ಕಸ) ವನ್ನೂ ಬೇರ್ಪಡಿಸುವ ಪ್ರಾಯೋಗಿಕವಾಗಿ ಕಾರ್ಯಕ್ರಮವನ್ನು ಚಾಲನೆಗೊಳಿಸಿದರು ಮುಖ್ಯಾಧಿಕಾರಿಗಳು ಮಾತನಾಡಿ ಸಾರ್ವಜನಿಕ ಮನೆಮನೆಗೆ ತೆರಳಿ ಇನ್ನು ಮುಂದೆ ಹಸಿ ಕಸವನ್ನು ಹಸಿರು ಡಬ್ಬಿಯಲ್ಲಿ ಹಾಕಿ ಒಣಕಸವನ್ನು ನೀಲಿ ಡಬ್ಬಿಯಲ್ಲಿ ಹಾಕಿ ಈ ಎರಡು ಕಸವನ್ನು ಬೇರೆ ಬೇರೆ ವಿಂಗಡಿಸಿರಿ ನಮ್ಮ ಪಂಚಾಯತಿಯ ವಾಹನವು ನಿಮ್ಮ ಮನೆ ಮನೆಗೆ ಬರುತ್ತದೆ ನೀವು ಅದರಲ್ಲಿ ಬೇರೆ ಬೇರೆ ವಿಂಗಡಿಸಿದ ಕಸವನ್ನು ಬೇರೆ ಬೇರೆ ಡಬ್ಬಿಯಲ್ಲಿ ಹಾಕಬೇಕು ಎಂದು ಸಾರ್ವಜನಿಕರಿಗೆ ಹೇಳಿದರು ಇನ್ನು ಮುಂದೆ ಗಟಾರಿನಲ್ಲಿ ಯಾವುದೇ ತರಹದ ಕಸವನ್ನು ಹಾಕಬಾರದು ಎಂದು ಹೇಳಿದರು
ಸಭೆಯಲ್ಲಿ ಪಟ್ಟಣ ಪಂಚಾಯತಿಯ 11 ನೇ ವಾರ್ಡಿನ ಸದಸ್ಯರಾದ ಮಂಜುಳಾ ನಾಗೇಶ್ ಮುರಾಳ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ಪೌರಕಾರ್ಮಿಕರು ಹಾಜರಿದ್ದರು

ವರದಿ ನಿಂಗಪ್ಪ ಕಡ್ಲಿಮಟ್ಟಿ

error: