December 21, 2024

Bhavana Tv

Its Your Channel

ಅಸ್ಪೃಶ್ಯತಾ ನಿವಾರಣೆಯ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶನ

ಬಾಗಲಕೋಟೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಬಾಗಲಕೋಟೆ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಹುನಗುಂದ, ಡಾ. ಬಿ. ಆರ್. ಅಂಬೇಡ್ಕರ ಗ್ರಾಮೀಣ ಅಭಿವೃದ್ಧಿ ವಿವಿಧೋದ್ದೇಶಗಳ ಸೇವಾ ಸಂಘ, ಕಮತಗಿ, ಇವರ ಸಂಯುಕ್ತ ಆಶ್ರಯದಲ್ಲಿ ಹುನಗುಂದ ತಾಲೂಕಿನ ಕಡಿವಾಲ ಕಲ್ಲಾಪೂರ, ಸುಲಳಿಕಲ್ಲ ಗ್ರಾಮದಲ್ಲಿ ಅಸ್ಪೃಶ್ಯತಾ ನಿವಾರಣೆಯ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶನವನ್ನು ಆಯೋಜನೆ ಮಾಡಲಾಗಿತ್ತು.

ಇದೇ ವೇಳೆ ಹುನಗುಂದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಾದ ಮಲ್ಲಿಕಾರ್ಜುನ್ ಕಟ್ಟಿಮನಿ ಮಾತನಾಡಿ ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಪಡೆದುಕೊಂಡು ಸಫಲರಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಂಕರವ್ವ ಗಾಣಿಗೇರ, ಉಪಾಧ್ಯಕ್ಷರಾದ ಪಾಂಡಪ್ಪ ಪೂಜಾರಿ, ಸದಸ್ಯರಾದ ಧರ್ಮಣ್ಣ ನಿಲುಗಲ್, ಸಂಘದ ಅಧ್ಯಕ್ಷರಾದ ರಾಘವೇಂದ್ರ ಕಟ್ಟಿಮನಿ, ಗ್ರಾಮ ಪಂಚಾಯತ ಕಾರ್ಯದರ್ಶಿ ವಾಯ್. ಎನ್. ಗೌಡರ. ಅಮೀನಗಡ ಪೊಲೀಸ್ ಠಾಣೆಯ ಎಎಸ್‌ಐ ಪಾಟೀಲ, ಎನ್.ಎಂ.ಬಾಗೇವಾಡಿ, ಚಂದ್ರಶೇಖರ ಹಾದಿಮನಿ, ಹುಲ್ಯಾಳದ ಹಂಸದ್ವನಿ ಕಲಾತಂಡ, ಮೂಗನೂರು, ಕಡಿವಾಲ ಕಲ್ಲಾಪುರ್, ಸುರಳಿಕಲ್ಲ ಗ್ರಾಮಸ್ಥರು ಇದ್ದರು.

error: