April 22, 2024

Bhavana Tv

Its Your Channel

ನಂದವಾಡಗಿ ಶಾಲೆಯಲ್ಲಿ ಬೀಳ್ಕೊಡುವ ಹಾಗೂ ದೀಪದಾನ ಸಮಾರಂಭ

ಬಾಗಲಕೋಟೆ; ಜಿಲ್ಲೆಯ ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿಯಲ್ಲಿ 2022-23 ನೇ ಸಾಲಿನ ವಿದ್ಯಾರ್ಥಿನಿಯರಿಗೆ ಬೀಳ್ಕೊಡುವ ಹಾಗೂ ದೀಪದಾನ ಸಮಾರಂಭ ಜರುಗಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಶಿಕ್ಷಕಿ ಶ್ರೀಮತಿ ವಿ ಬಿ ಕುಂಬಾರ ಮಾತನಾಡಿ, ಉತ್ತಮ ಶಿಕ್ಷಣ, ಜ್ಞಾನ ನಿಮ್ಮ ಮುಂದಿನ ಭವಿಷ್ಯಕ್ಕೆ ರೂಪಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯಅತಿಥಿ ಸ್ಥಾನವನ್ನು ನಂದವಾಡಗಿ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾದ ಎಚ್ ಎಚ್ ಬಂಡಿವಡ್ಡರ ರವರು ವಹಿಸಿಕೊಂಡು ಈ ಹಂತ ಬಹಳ ಅಮೂಲ್ಯವಾದದ್ದು, ಉನ್ನತ ಶಿಕ್ಷಣದವರೆಗೆ ನಿಮ್ಮ ಕಲಿಕಾ ಪ್ರಯಾಣ ಸಾಗಬೇಕು ಎಂದರು.

ಅತಿಥಿ ಸ್ಥಾನವನ್ನು ಮಾಜಿ ಸೈನಿಕರು ಶರಣಪ್ಪ ಕಟಾಬ್ಲಿ ರವರು ವಹಿಸಿಕೊಂಡು ಸರಕಾರಿ ಶಾಲೆಯ ಶ್ರೇಯಸ್ಸಿಗಾಗಿ ಸದಾ ಸಿದ್ಧ ಎಂದರು ಹಾಗೂ ಇದೆ ಸಂದರ್ಭದಲ್ಲಿ ಅವರು ಎಲ್ಲಾ ಶಿಕ್ಷಕರ ಬಳಗಕ್ಕೆ, ಅಡುಗೆ ಸಿಬ್ಬಂದಿರವರಿಗೆ ಸನ್ಮಾನಿಸಿದರು.
6 ಮತ್ತು 7 ನೇ ವಿದ್ಯಾರ್ಥಿನಿಯರು ಕಾರ್ಯಕ್ರಮದ ಅನಿಸಿಕೆಗಳನ್ನು ಹೇಳಿದರು. 7 ನೇ ತರಗತಿಯ ವಿದ್ಯಾರ್ಥಿನಿಯರಿಗೆ ಆನಂದ ಗಂಜಿಹಾಳ, ಅಭಿಯಂತರರು ಬೆಂಗಳೂರು ಇವರು ನೆನಪಿನ ಕಾಣಿಕೆಯನ್ನು ನೀಡಿ ಪ್ರೋತ್ಸಾಹಿಸಿದರು.

ಅಧ್ಯಕ್ಷತೆಯ ನುಡಿಯನ್ನು ಶಾಲಾ ಮುಖ್ಯ ಗುರುಗಳು ಪ್ರಭಯ್ಯ ಲೂತಿಮಠ ವಿದ್ಯಾರ್ಥಿನಿಯರ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಎಲ್ಲಾ ವಿದ್ಯಾರ್ಥಿನಿಯರಿಗೆ ಸಿಹಿ ಊಟ ನೀಡಲಾಯಿತು. ನಂತರದಲ್ಲಿ ದೀಪದಾನ ಕಾರ್ಯಕ್ರಮ ನೇರವೇರಿಸಿ, ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಸುಭಾಷಗೌಡ ರಾಯನಗೌಡ್ರು, ಮಲ್ಲನಗೌಡ,ಸದಸ್ಯರು ಭಾಗವಹಿಸಿದ್ದರು.ಗುರುಗಳಾದ ಎಸ್ ವಿ ಬಳೂಲದ, ಶ್ರೀಮತಿ ಜ್ಯೋತಿ, ವಿ ಬಿ ಕುಂಬಾರ, ಜಿ ಆರ್ ನದಾಫ್, ಗಂಗಾ ಗುರುಮಾತೆ, ಶಾರದಾ ಗುರುಮಾತೆಯರು ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.
ಬಸವರಾಜ ಬಲಕುಂದಿ ನಿರೂಪಿಸಿದರು, ಡಾ ವಿಶ್ವನಾಥ ತೋಟಿ ಸ್ವಾಗತಿಸಿದರು, ವಿದ್ಯಾರ್ಥಿನಿಯರು ವಂದಿಸಿದರು.
ವರದಿ; ನಿಂಗಪ್ಪ ಕಡ್ಲಿಮಟ್ಟಿ, ಬಾಗಲಕೋಟೆ

error: