December 19, 2024

Bhavana Tv

Its Your Channel

ಸಮಸ್ಯೆಗೆ ಸ್ಪಂದಿಸಿದ ಇಲಕಲ್ಲ ನಗರಸಭೆ

ಬಾಗಲಕೋಟೆ : ಇಲಕಲ್ಲ ನಗರದ ವಿಜಯಮಹಾಂತೇಶ್ವರ ಗದ್ದುಗೆ ಪಕ್ಕದಲ್ಲಿ ಇತಿಹಾಸವಿರುವ ಪವಿತ್ರವಾದ ಹಳ್ಳದಲ್ಲಿ ಕೋಳಿ ಪುಚ್ಚಗಳು, ಪ್ಲಾಸ್ಟಿಕ್, ಇಲಕಲ್ಲಿನಲ್ಲಿ ನವೀರಣಗೊಳ್ಳುತ್ತಿರುವ ಕಟ್ಟಡಗಳ ಕೆಲಸಕ್ಕೆ ಬಾರದ ಕಲ್ಲು ಮಣ್ಣು ಇಟ್ಟಿಗೆ ಪುಡಿ ಮುಂತಾದ ತ್ಯಾಜ್ಯ ವಸ್ತುಗಳನ್ನು ಹಾಕಲಾಗುತ್ತಿದ್ದು. ಹಳ್ಳವು ಸಂಪೂರ್ಣ
ಡಂಪ್ ಯಾರ್ಡ ಆಗಿ ಬದಲಾಗಿತ್ತು. ಈ ಕುರಿತು ಇಲಕಲ್ಲಿನ ಕರನ್ ಮನ್ನಾಪೂರ ಎಂಬುವರು ವಾಟ್ಸ್ಪ್ ಗ್ರುಪ್ ಒಂದರಲ್ಲಿ ವೀಡೀಯೋ ಮಾಡಿ ಹರಿಬಿಟ್ಟದ್ದರು. ಇದನ್ನು ನೋಡಿದ ಕೇವಲ ಒಂದು ಗಂಟೆಯಲ್ಲಿ ನಗರಸಭೆ ಅಧ್ಯಕ್ಷೆ ಶೋಭಾ ಆಮದಿಹಾಳ, ಉಪಾಧ್ಯಕ್ಷೆ ಸವಿತಾ ಆರಿ, ನಗರಸಭೆ ಸದಸ್ಯರಾದ ಲಕ್ಷ್ಮಣ ಗುರಂ, ಪೌರಾಯುಕ್ತ ಜಗದೀಶ ಹುಲಗೆಜ್ಜಿ ಸೇರಿದಂತೆ ನಗರಸಭೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದರು. ಇದೇ ಸಂದರ್ಭದಲ್ಲಿ ಕಸ ಹಾಕಲು ಬಂದಿದ್ದ ಒಂದು ಟಾಟಾ ಏಸ್ ವಾಹನವನ್ನು ನಗರಸಭೆ ವಶಕ್ಕೆ ಪಡೆದು ದಂಡ ವಿಧಿಸುವುದಾಗಿ ಹೇಳಿದರು.

ಸಮಸ್ಯೆ ಗೊತ್ತಾದ ಮರುಕ್ಷಣವೆ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸ್ಪಂದಿಸಿದ್ದಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತ ಪಡಿಸಿದರು

error: