December 20, 2024

Bhavana Tv

Its Your Channel

ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪಾದಯಾತ್ರೆ ಮಾಡುವ ಭಕ್ತರಿಗೆ ಬಸವೇಶ್ವರ ದೇವಾಲಯದಲ್ಲಿ ಅನ್ನದಾಸೋಹ

ಬಾಗಲಕೋಟೆ: ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಪಾದಯಾತ್ರೆ ಮಾಡುವ ಪಾದಯಾತ್ರಿಕರಿಗಾಗಿ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಕರಡಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಿತ್ಯ ಅನ್ನ ದಾಸೋಹವನ್ನು ಏರ್ಪಡಿಸಲಾಗಿದೆ. ಇಲ್ಲಿಗೆ ಬರುವ ಪಾದಯಾತ್ರಿಕರ ಸ್ನಾನಕ್ಕಾಗಿ ಬಿಸಿ ನೀರಿನ ವ್ಯವಸ್ಥೆ ಹಾಗೂ ಕಾಲಿಗೆ ಮಸಾಜ್ ಮಾಡಲು ಕೊಬ್ಬರಿ ಎಣ್ಣೆ ವ್ಯವಸ್ಥೆ ಮಾಡಲಾಗಿದೆ .ಪಾದಯಾತ್ರೆ ನಡೆಸುವ ಭಕ್ತಾದಿಗಳಿಗಾಗಿ ಅಡುಗೆ ತಯಾರಿಸುವ ಕೆಲಸ ದೇವರ ಕೆಲಸ ಎಂಬ ನಂಬಿಕೆಯಲ್ಲಿ ಗ್ರಾಮದ ಹಿರಿಯರಾದ ರಾಚಪ್ಪ ಗೋತಗಿ, ಶಿವಬಸಪ್ಪ ಜಾಲಿಹಾಳ.ಸಂಗಪ್ಪ ಗಾಣಿಗೇರ ನಾಗಪ್ಪ ಕೆಸರಭಾವಿ .ಶರಣಪ್ಪ ಅಂಗಡಿ , ಶರಣಪ್ಪ ಬಸನಗೌಡ . ಮಂಜು ಹೂಗಾರ .ಮಹಾಂತೇಶ ಅಂಗಡಿ ಮಹಾಂತೇಶ ಪತ್ರಿಮಠ ಈ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

error: