December 22, 2024

Bhavana Tv

Its Your Channel

ಹಕ್ಕು ಪತ್ರಗಳ ವಿತರಣೆಗಾಗಿ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಇಳಕಲ್ ನಗರದಲ್ಲಿ ಬೃಹತ್ ಪ್ರತಿಭಟನೆ

ಇಳಕಲ್:- ಹಕ್ಕು ಪತ್ರಗಳ ವಿತರಣೆಗಾಗಿ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಇಳಕಲ್ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು

ಪ್ರತಿಭಟನೆಯು ನಗರದ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಪಾದಯಾತ್ರೆ ಕಂಠಿ ವೃತ್ತ,ಮಹಾತ್ಮ ಗಾಂಧಿ ವೃತ್ತ ಮಹಾಂತೇಶ ಮಠ, ಬಸವಣ್ಣ ಗುಡಿ, ಬನ್ನಿಕಟ್ಟಿ ,ಪೊಲೀಸ ಗ್ರೌಂಡ್ ಸುಭಾಷ್ ರಸ್ತೆಯ ಮಾರ್ಗವಾಗಿ ನಗರಸಭೆ ಮುಂದಿನ ವೇದಿಕೆಗೆ ತಲುಪಿತು.

ನಂತರ ಮಾತನಾಡಿದ ನಗರದ ಮಹಾಂತ ಶಿವಯೋಗಿಗಳ ತಪೋವಣದ ಹಿಂದುಗಡೆ ಇರುವ
ಎಸ್ ಆರ್ ಕಾಶಪ್ಪನವರ ಬಡಾವಣೆ, ಗುರುಲಿಂಗಪ್ಪ ಕಾಲೋನಿ ಮತ್ತು ಕಂದಗಲ್ ರಸ್ತೆಪಕ್ಕದಲ್ಲಿರುವ 42 ಎಕರೆಯಲ್ಲಿರುವ ಪ್ಲಾಟುಗಳ ಹಕ್ಕು ಪತ್ರಗಳನ್ನು ವಿತರಿಸುವಂತೆ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಈಗಾಗಲೆ ತಮ್ಮ ತಂದೆಯವರು ಶಾಸಕ,ಆಶ್ರಯ ಕಮಿಟಿ ಅಧ್ಯಕ್ಷರಾಗಿದ್ದಾಗ ಗುರುಲಿಂಗಪ್ಪ ಕಾಲೋನಿಯ 184 ಪ್ಲಾಟಗಳು ನಮ್ಮ ತಾಯಿಯವರು ಶಾಸಕರು, ಆಶ್ರಯ ಕಮಿಟಿ ಅಧ್ಯಕ ರಾಗಿದ್ದಾಗ ಶ್ರೀ ವಿಜಯ ಮಹಾಂತ ಶಿವಯೋಗಿಗಳ ತಪೋವನದ ಹಿಂದೆ ಹನ್ನೋಂದು ಎಕರೆ ಜಾಗೆಯಲ್ಲಿ 334 ಪ್ಲಾಟಗಳನ್ನು.
ನಾನು ಶಾಸಕರು ಇದ್ದಾಗ ಆಶ್ರಯ ಕಮಿಟಿ ಆಧ್ಯಕ್ಷರಾಗಿದ್ದಾಗ 42 ಎಕರೆಯಲ್ಲಿ 1560 ಪ್ಲಾಟಗಳನ್ನು ನಿರ್ಮಾಣ ಮಾಡಲಾಗಿದೆ.
ಈ ಎಲ್ಲಾ ಪ್ಲಾಟುಗಳು ರಾಜು ಗಾಂಧಿ ವಸತಿ ನಿಗಮದಿಂದ ಒಪ್ಪಿಗೆ ಪಡೆದುಕೊಂಡಿದ್ದಲ್ಲದೆ ಅಧಿಕೃತ ಫಲಾನುಭವಿಗಳ ಹೆಸರಿನಲ್ಲಿ ಹಕ್ಕುಪತ್ರವು ಸಹ ಸಿದ್ದಗೊಂಡಿವೆ.

17-18ನೇ ಸಾಲಿನಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಂಕೇತಿಕ ವಾಗಿ ಕೆಲವರಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಿದ್ದರು ಸಹ ಉಳಿದ ಹಕ್ಕುಪತ್ರಗಳನ್ನು ನಗರ ಸಭೆಯಲ್ಲಿ ಇಟ್ಟುಕೊಂಡು ವಿತರಿಸದೆ ಇರುವುದಕ್ಕೆ ಶಾಸಕ ದೊಡ್ಡನಗೌಡ ಪಾಟೀಲರು ತಡೆ ಒಡ್ಡುತಿದ್ದಾರೆ ಮಾಜಿ ಶಾಸಕ ವಿ ಎಸ್ ಕಾಶಪ್ಪನವರು ಕಾರವಾಗಿ ಮಾತನಾಡಿದರು.

ತಾವು ಈ ನಾಲ್ಕು ತಿಂಗಳ ಹಿಂದೆ ಪ್ರತಿಭಟನೆ ಮಾಡುತ್ತೆವೆ ಎಂದಾಗ ತಮಗೆ ಬೇಕಾದ ಕೆಲವರಿಗೆ ಹಕ್ಕುಪತ್ರಗಳನ್ನು ವಿತರಿಸಿದ್ದು ಅದರಲ್ಲಿಯು ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ವಿ ಎಸ್ ಕಾಶಪ್ಪನವರು ಆಪಾದಿಸಿದರು.ಈಗಾಗಲೆ ಎಲ್ಲಾ ಹಕ್ಕುಪತ್ರಗಳು ನಗರ ಸಭೆಯಲ್ಲಿ ಇವೆ ಎಂದು ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಜಿಲ್ಲಾ ಅಧಿಕಾರಿಗಳು ಲಿಖಿತವಾಗಿ ಉತ್ತರಿಸಿದ್ದಾರೆ.ವಿಭಾಗಿಯ ಅಧಿಕಾರಿಗಳು ಮುಂದೆ ನಿಂತು ಹಕ್ಕುಪತ್ರಗಳ ವಿತರಣೆ ಮಾಡಬೇಕು ಇಲ್ಲದೆ ಹೋದಲ್ಲಿ ಜಿಲ್ಲಾಡಳಿತ ಸರಕಾರದ ವಿರುದ್ಧ ಉಗ್ರಪ್ರತಿಭಟನೆ ಕೈಗೊಳ್ಳನಾಗುವುದೆಂದು ಎಚ್ಚರಿಸಿದರು.

ಸದರಿ ಹೋರಾಟದಲ್ಲಿ ಕರವೇ ಜಿಲ್ಲಾ ಅಧ್ಯಕ್ಷರಾದ ರಮೇಶ ಬದ್ನೂರ, ಎಮ್ ಐ ಎಮ್‌ರಾಜ್ಯಾಧ್ಯಕ್ಷರಾದ ಹುಸ್ಮಾನಗಣಿ ಹುಮ್ನಾಬಾದ್, ಸರಸ್ವತಿ ಈಟಿ, ವೆಂಕಟೇಶ್ ಸಾಕ, ಶರಣಪ್ಪ ಆಮದಿಹಾಳ, ಶಾಂತಕುಮಾರ ಸುರಪುರ, ಮಹಾಂತೇಶ ಹಣಮಾನಾಳ, ಸುರೇಶ್ ಜಂಗ್ಲಿ, ಪ್ರವೀಣ್ ಹೋಳಿ,ಭಾರತಿ ಶೆಟ್ಟರ್ ಉಪಸ್ಥಿತರಿದ್ದರು .

ವರದಿ:- ವಿನೋದ ಬಾರಿಗಿಡದ ಇಳಕಲ್

error: