July 13, 2024

Bhavana Tv

Its Your Channel

ನಿಪ್ಪಾಣಿ ನಗರದ ಶ್ರೀ ಸಟವಾಯಿ ಮಂದಿರಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಬೇಟಿ

ನಿಪ್ಪಾಣಿ ; ನಿಪ್ಪಾಣಿ ನಗರದ ಶ್ರೀ ಸಟವಾಯಿ ಮಂದಿರದಲ್ಲಿ, 3 ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಪ್ರಯುಕ್ತ ಇಂದು ಮಂದಿರಕ್ಕೆ ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಯವರು ಭೇಟಿ ನೀಡಿ, ದೇವಿಯ ದರ್ಶನ ಪಡೆದು, ಶ್ರೀಮಾತೆ ಸಕಲರಿಗೂ ಸುಖ, ಶಾಂತಿ, ಸಮೃದ್ಧಿ ಮತ್ತು ನೆಮ್ಮದಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸಿದರು. ಬಳಿಕ ದೇಗುಲದ ಮಹಾಪ್ರಸಾದವನ್ನು ಭಕ್ತರಿಗೆ ನೀಡಿದರು.

ಈ ಸಂದರ್ಭದಲ್ಲಿ ದಾದಾಜಿರಾಜೆ ಸರಕಾರ, ನಗರಸಭೆ ಅಧ್ಯಕ್ಷರಾದ ಜಯವಂತ ಭಾಟಲೆ, ಸಭಾಪತಿಗಲಾದ ರಾಜು ಗುಂದೇಶಾ, ನಗರಸಭೆ ಸದಸ್ಯರು, ಗಣ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.
ವರದಿ ; ಮಹೇಶ ಶರ್ಮಾ, ಬೆಳಗಾವಿ

error: