April 27, 2024

Bhavana Tv

Its Your Channel

ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿಯವರು ತಮ್ಮ ತಂದೆ ತಾಯಿಯವರ ಹೆಸರಿನಲ್ಲಿ ನೊಂದಣಿಯಾಗಿರುವ ಸತ್ಯ ಸಂಗಮ ಸೇವಾ ಟ್ರಸ್ಟ್ ಹೆಸರಿನಲ್ಲಿ ದವಸ ಧಾನ್ಯ ವಿತರಣೆ.

ಅಥಣಿ ; ಉಪವಾಸ ಮತ್ತು ಹಸಿವು ಒಂದು ಮಹಾಪಾಪ ಕೊರೋನಾ ಮಹಾಮಾರಿ ಯನ್ನು ಹಿಮ್ಮೆಟ್ಟಿಸುವ ಸಲುವಾಗಿ ಸರ್ಕಾರ ಘೋಷಿಸಿರುವ ಲಾಕಡೌನ್ ಹಿನ್ನೆಲೆಯಲ್ಲಿ ಅಥಣಿ ಮತಕ್ಷೇತ್ರದ ಯಾರೊಬ್ಬರೂ ಕೂಡ ಹಸಿವಿನಿಂದ ನೋವನ್ನು ಅನುಭವಿಸಬಾರದು ಎಂದು ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿಯವರು ತಮ್ಮ ತಂದೆ ತಾಯಿಯವರ ಹೆಸರಿನಲ್ಲಿ ನೊಂದಣಿಯಾಗಿರುವ ಸತ್ಯ ಸಂಗಮ ಸೇವಾ ಟ್ರಸ್ಟ್ ಹೆಸರಿನಲ್ಲಿ ಅಥಣಿ ಮತಕ್ಷೇತ್ರದ ಎ.ಪಿ.ಎಲ್ ಬಿಪಿಎಲ್, ಅಂತ್ಯೋದಯ ಕಾರ್ಡುದಾರರಿಗೆ, ರೇಷನ್ ಕಾರ್ಡು ಇಲ್ಲದೆ ಇರುವವರನ್ನೂ ಒಳಗೊಂಡAತೆ ಎಲ್ಲ ಕೂಲಿ ಕಾರ್ಮಿಕರಿಗೆ ಹಾಗೂ ಕಾರ್ಡ್ ಇಲ್ಲದೆ ಇರುವ ಬಡವರಿಗೆ, ವಲಸಿಗರಿಗೆ ಸೇರಿದಂತೆ ಒಟ್ಟು 70 ಸಾವಿರ ಕುಟುಂಬಗಳ ಎರಡೂವರೆ ಲಕ್ಷ ಜನರಿಗೆ ಉಚಿತವಾಗಿ ಒಂದು ತಿಂಗಳಿಗೆ ಆಗುವಷ್ಟು 7 ಕೆಜಿ ಗೋದಿ, 1ಕೆಜಿ ಬೇಳೆ, 1ಕೆಜಿ ಸಕ್ಕರೆ,1 ಕೆಜಿ ಅವಲಕ್ಕಿ 1 ಕೆಜಿ ತೊಗರಿಬೇಳೆ, 1 ಕೆಜಿ ಕಡಲೆಬೇಳೆ,1ಕೆಜಿ ಬೆಲ್ಲ, 250 ಗ್ರಾಂ ಟೀ ಪೌಡರ್, 100 ಗ್ರಾಂ ಸಾಂಬರ್ ಪದಾರ್ಥ, 100 ಗ್ರಾಂ ಖಾರ, 180 ಗ್ರಾಂ ತೂಕದ 2 ಬಿಸ್ಕೆಟ್ ಪ್ಯಾಕೆಟ್ ಹಾಗೂ 1 ಕೆಜಿ ರವೆ ಸೇರಿದಂತೆ ದವಸ ಧಾನ್ಯಗಳನ್ನು ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಇಂದು ಅಥಣಿಯಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸತ್ಯ ಸಂಗಮ ಸೇವಾ ಟ್ರಸ್ಟ್ ನ ನಿರ್ದೇಶಕರು ಹಾಗೂ ಬಿಜೆಪಿಯ ಯುವ ಮುಖಂಡರಾದ ಚಿದಾನಂದ ಸವದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ವರದಿ ; ಮಹೇಶ ಶರ್ಮಾ, ಬೆಳಗಾವಿ.

error: