February 1, 2023

Bhavana Tv

Its Your Channel

ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಹನುಮ ಜಯಂತಿ ಆಚರಣೆ

ಗುಂಡ್ಲುಪೇಟೆ : ಪುರಸಭಾ ಅಧ್ಯಕ್ಷರಾದ ಪಿ.ಗಿರೀಶ್ ಒಡೆತನದ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನ ದಲ್ಲಿ ಸೋಮವಾರ ಅದ್ದೂರಿಯಾಗಿ ಹನುಮ ಜಯಂತಿಯನ್ನು ಅಚರಣೆ ಮಾಡಲಾಯಿತು ,

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಚಾಮರಾಜನಗರ ಜೋಡಿ ರಸ್ತೆಯ ಪಕ್ಕದಲ್ಲಿ ಇರುವ ಪಟ್ಟಣದ ದೇವಸ್ಥಾನವನ್ನು ಹನುಮ ಜಯಂತಿ ಅಂಗವಾಗಿ ತಳಿರು ತೋರಣಗಳಿಂದ ಶೃಂಗಾರ ಮಾಡಲಾಗಿತ್ತು, ದೇವರ ಮೂರ್ತಿ ಸೇರಿದಂತೆ ದೇವಸ್ಥಾನವನ್ನು ಬಗೆ ಬಗೆಯ ಹೂವಿನಿಂದ ಅಲಂಕಾರ ಮಾಡಲಾಗಿತ್ತು,

ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ರಾದ ಪಿ.ಗಿರೀಶ್ ಮುಖಂಡತ್ವದಲ್ಲಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು, ಜಯಂತಿ ಕಾರ್ಯಕ್ರಮ ದಲ್ಲಿ ಕ್ಷೇತ್ರದ ಶಾಸಕರಾದ ಸಿ.ಎಸ್.ನಿರಂಜನ್ ಕುಮಾರ್ , ಕಾಡ ಮಾಜಿ ಅಧ್ಯಕ್ಷ ಹೆಚ್.ಎಸ್.ನಂಜಪ್ಪ , ಮಾಜಿ ಪುರಸಭಅಧ್ಯಕ್ಷರಾದ ಎಲ್. ಸುರೇಶ್ , ನಾಗೇಂದ್ರ ಮಾಡ್ರಹಳ್ಳಿ,ಮುಖಂಡರು ಗಳಾದ ಅಲತ್ತೂರು ಜಯರಾಮು, ಎನ್.ಮಲ್ಲೇಶ್ .ಪಿ.ಅನಂದು , ನಂಜುAಡ ಸ್ವಾಮಿ ( ಮಾಲಿ) ಸೇರಿದಂತೆ ಪುರಸಭಾ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ವರದಿ:- ಸದಾನಂದ ಕನ್ನೆಗಾಲ

About Post Author

error: