May 11, 2024

Bhavana Tv

Its Your Channel

ಗುಂಡ್ಲುಪೇಟೆ ಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಗುಂಡ್ಲುಪೇಟೆ :- ಜೆಎಸ್‌ಎಸ್ ಮಹಾವಿದ್ಯಾಪೀಠ .ಮೈಸೂರು ಜೆಎಸ್‌ಎಸ್ ಆಸ್ಪತ್ರೆ ಮತ್ತು ಜೆಎಸ್‌ಎಸ್ ಕಲಾ ಮಂಟಪ ಮೈಸೂರು ಹಾಗೂ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಗುಂಡ್ಲುಪೇಟೆಯಲ್ಲಿ ಹಮ್ಮಿಕೊಂಡಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಜೆಎಸ್‌ಎಸ್ ರಂಗೋತ್ಸವ ಸಮಾರೋಪ ಸಮಾರಂಭ

ಗುಂಡ್ಲುಪೇಟೆ ಪಟ್ಟಣದ ಜೆಎಸ್‌ಎಸ್ ಕಾಲೇಜಿನಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ ಮೈಸೂರು ಜೆಎಸ್‌ಎಸ್ ಆಸ್ಪತ್ರೆ ಮತ್ತು ಜೆಎಸ್‌ಎಸ್ ಕಲಾಮಂಟಪ ಹಾಗೂ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ಹಮ್ಮಿಕೊಂಡಿರುವ ಬೃಹತ್ ಮಟ್ಟದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಜೆಎಸ್‌ಎಸ್ ರಂಗೋತ್ಸವ 2022 ರ ಉದ್ಘಾಟನೆಯನ್ನು ಸಾಹಿತಿಗಳು ಹಾಗೂ ಮಾಜಿ ಸಚಿವೆ ಯಾದ ಗೀತಾ ಮಹದೇವ ಪ್ರಸಾದ್ ರವರು ಉದ್ಘಾಟನೆಯನ್ನು ನೆರವೇರಿಸಿದರು. ನಂತರ ಮಾತನಾಡಿದ ಅವರು ಮೆಡಿಕಲ್ ಕ್ಯಾಂಪ್ ಮಾಡಬೇಕಾದರೆ ಬಹಳ ಕಷ್ಟ ಈಗಿನ ಕಾಲದಲ್ಲಿ ನಮ್ಮ ಸಂಸ್ಥೆ ಜೆಎಸ್‌ಎಸ್ ಸಂಸ್ಥೆ ಈ ಒಂದು ದೊಡ್ಡ ಬೃಹತ್ ಮಟ್ಟದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಇದರ ಸದುಪಯೋಗವನ್ನು ನಮ್ಮ ಗುಂಡ್ಲುಪೇಟೆ ತಾಲೂಕಿನ ಸಾರ್ವಜನಿಕರು ಪಡೆದುಕೊಳ್ಳಿ ಎಂದರು
ಶಿಬಿರದಲ್ಲಿ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಲಭ್ಯ ಇರುವ ಚಿಕಿತ್ಸಾ ಸೇವೆಗಳಾದ ಬಿಪಿ, ಶುಗರ್ ಹಾಗೂ ಇಸಿಜಿ ಸಿಬಿಜಿ ,ಹಾರ್ಟ್ ಸ್ಕ್ಯಾನ್, ತುರ್ತು ಚಿಕಿತ್ಸೆ ,ಸಾಮಾನ್ಯ ರೋಗ ,ವಿವಿಧ ಎಲ್ಲಾ ಶಸ್ತ್ರ ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ ಗಳು, ಕೀಲು ಮತ್ತು ಮೂಳೆ ,ಹಾಗೂ ಚರ್ಮ ರೋಗಗಳಿಗೆ ಸಂಬAಧಪಟ್ಟ ವೈದ್ಯರುಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಹಾಗಾಗಿ ಬರುವ 2023ರ ಮುಂದಿನ ವರ್ಷ ಪ್ರತಿ ತಿಂಗಳಿಗೊಮ್ಮೆ ಒಂದು ದಿನ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಇದರ ಉಪಯೋಗವನ್ನು ಪಡೆದುಕೊಳ್ಳಿ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಿಗೆ ಸನ್ಮಾಇಸಲಾಯಿತು, ಡಾ. ಎಚ್ ಬಸವನಗೌಡಪ್ಪ ಪ್ರಾಂಶುಪಾಲರು ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು, ಚಂದ್ರಶೇಖರ ಸಂಚಾಲಕರು ಜೆಎಸ್‌ಎಸ್ ಕಲಾ ಮಂಟಪ ಮೈಸೂರು, ಶಾಸಕ ಸಿ ಎಸ್ ನಿರಂಜನ್ ಕುಮಾರ್, ಯುವ ಮುಖಂಡ ಎಚ್. ಎಮ್. ಗಣೇಶ್ ಪ್ರಸಾದ್, ವೈ ಎಂ ಪುಟ್ಟಣ್ಣಯ್ಯ ಹಾಗೂ ಮಾಜಿ ಸಚಿವೆ ಗೀತಾ ಮಹದೇವ್ ಪ್ರಸಾದ್, ಪ್ರೊಫೆಸರ್ ಎಸ್ .ಪಿ. ಮಂಜುನಾಥ್ ಕಾರ್ಯದರ್ಶಿಗಳು ಜೆಎಸ್‌ಎಸ್ ಮಹಾವಿದ್ಯಾಪೀಠ ಮೈಸೂರು, ಹಾಗೂ ಮರಿ ಸೋಮಪ್ಪ ಪ್ರಾಂಶುಪಾಲರು ಜೆಎಸ್‌ಎಸ್ ಕಾಲೇಜು ಗುಂಡ್ಲುಪೇಟೆ ಮತ್ತು ಹೆಚ್ ಎಸ್ ಸಿದ್ದ ಮಲ್ಲಿಕಾರ್ಜುನ ಸ್ವಾಮಿ ಕನ್ನಡ ವಿಭಾಗ, ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿರುವ ಮುಖಂಡರುಗಳು ಹಾಗೂವಿದ್ಯಾರ್ಥಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಸದಾನಂದ ಕನ್ನೆಗಾಲ ಗುಂಡ್ಲಪೇಟೆ

error: