May 20, 2024

Bhavana Tv

Its Your Channel

ಆರೋಗ್ಯ ಸಿಬ್ಬಂದಿ ಕಾಣಿಸಿದರೆ ಹೆದರಿ ಓಡುವ ಜನ..! : ಅಪನಂಬಿಕೆ, ತಿಳುವಳಿಕೆ ಲಸಿಕೆ ಅಭಿಯಾನಕ್ಕೆ ಹಿನ್ನಡೆ

ಬಾಗೇಪಲ್ಲಿ: ತಾಲ್ಲೂಕಿನ ಗೂಳೂರು ಹೋಬಳಿಯ ಪಾರ್ವತಿಪುರ ತಾಂಡದಲ್ಲಿ ಇರುವ ೧೮ ವರ್ಷ ಮೇಲ್ಪಟ್ಟವರ ಸಂಖ್ಯೆ ೨೫೯. ಈ ಪೈಕಿ ಕೇವಲ ೬ ಮಂದಿ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಹಾಕಿಸಿದರೆ ಜ್ವರ ಬರುತ್ತದೆ, ಮೈ-ಕೈ ನೋವಾತ್ತದೆ, ಮದ್ಯಪಾನ ಬಿಡಬೇಕು ಎಂದು ಜನರಲ್ಲಿ ಸುಳ್ಳು ವದಂತಿ, ಅಪನಂಬಿಕೆ ಮೂಡಿರುವುದೇ ಲಸಿಕೆ ಅಭಿಯಾನದ ಹಿನ್ನಡೆಗೆ ಕಾರಣವಾಗಿದೆ.

ಗೂಳೂರು ಕೇಂದ್ರದಿAದ ೪ ಕಿ.ಮೀ ದೂರ ಕ್ರಮಿಸಿದರೆ ಪಾರ್ವತಿಪುರ ತಾಂಡ ಸಿಗುತ್ತದೆ. ತಾಲ್ಲೂಕಿನ ಸದ್ದಪಲ್ಲಿ ತಾಂಡ, ಪಾರ್ವತಿಪುರ ತಾಂಡ, ಟೆಂಪಯ್ಯಕುAಟ ತಾಂಡ, ಬೂರಗಮಡುಗು ತಾಂಡ ಸೇರಿದಂತೆ ಕೆಲವು ತಾಂಡಗಳು ಬೆಟ್ಟಗುಡ್ಡಗಳ ಅಕ್ಕಪಕ್ಕದಲ್ಲಿದ್ದು, ಲಂಬಾಣಿ ಸಮುದಾಯದವರು ವಾಸವಾಗಿದ್ದಾರೆ. ಹಳೆಯ ಸಂಪ್ರದಾಯಗಳನ್ನು ಇಂದಿಗೂ ಅವರು ಅನುಸರಿಸುತ್ತಾರೆ. ಕೆಲವರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಮತ್ತೆ ಕೆಲವರು ತಾಂಡಗಳನ್ನು ತೊರೆದು ಉದ್ಯೋಗ ಅರಸಿ ಬೆಂಗಳೂರು, ಬಾಂಬೆ, ದೆಹಲಿಗೆ ಹೋಗಿದ್ದಾರೆ.ಪಟ್ಟಣ ಪ್ರದೇಶಗಳಲ್ಲಿ ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

ಪಾರ್ವತಿಪುರ ತಾಂಡದಲ್ಲಿ ೮೦ ಮನೆಗಳಿವೆ. ಮೊದಲ ಅಲೆಯಲ್ಲಿ ಈ ತಾಂಡದಲ್ಲಿ ೧೮ ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಗ್ರಾಮ ಪಂಚಾಯಿತಿ ಸದಸ್ಯರೊಬ್ಬರಿಗೆ ಸೋಂಕು ಹರಡಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಇದನ್ನೇ ಇಲ್ಲಿನ ಜನರು ನೆಪ ಮಾಡಿಕೊಂಡು ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತದೆ, ಮೈ-ಕೈ ನೋವಾಗುತ್ತದೆ ಎಂದು ಸುಳ್ಳು ವದಂತಿ ನಂಬಿಕೊAಡು ಕಾಲದೂಡುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವಂತೆ ತಾಲ್ಲೂಕು ಆರೋಗ್ಯಾಧಿಕಾರಿ, ಆರೋಗ್ಯ ಸಿಬ್ಬಂದಿ ತಾಂಡಗೆ ಭೇಟಿ ನೀಡಿದರೆ ಜನರು ಹೆದರಿ ಓಡಿಹೋಗಿ ಅಕ್ಕಪಕ್ಕದ ಬೆಟ್ಟಗುಡ್ಡಗಳಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದಾರೆ.

ಸ್ಥಳೀಯ ಆಡಳಿತ ಹಾಗೂ ಕಾರ್ಯಪಡೆ ಜನರಲ್ಲಿ ಪರಿಣಾಮಕಾರಿಯಾಗಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಹಿಂದೇಟು ಹಾಕಿದೆ ಎಂಬುದು ಸಾಮಾನ್ಯ ಆರೋಪ.

‘ನಾನು ಪಾರ್ವತಿಪುರ ತಾಂಡ ನಿವಾಸಿ. ಲಸಿಕೆ ಹಾಕಿಸಿಕೊಂಡು, ಜನರು ಲಸಿಕೆ ಹಾಕಿಸಿಕೊಳ್ಳುವಂತೆ ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಯುವಕರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಅಪನಂಬಿಕೆ ಹಾಗೂ ಸುಳ್ಳು ವದಂತಿಗೆ ಕಿವಿಕೊಡದೆ ಲಸಿಕೆ ಹಾಕಿಸುವಂತೆ ಪ್ರತಿನಿತ್ಯ ಮನೆ ಮನೆಗೂ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದೇನೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ವೆಂಕಟರಾಮನಾಯಕ್ ತಿಳಿಸಿದರು.

‘ಆರೋಗ್ಯ ಸಿಬ್ಬಂದಿ ಕಾಣಿಸಿದರೆ ಜನರು ಹೆದರಿ ಓಡುತ್ತಿದ್ದಾರೆ. ಜಾಗೃತಿ ಮೂಡಿಸಲು ಕ್ರಮ ವಹಿಸಲಾಗಿದೆ. ಕೆಲವರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ’ ಎಂದರು.

ವರದಿ:-ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು

error: