May 17, 2024

Bhavana Tv

Its Your Channel

ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಹಾಗೂ ಗ್ರಾಹಕರ ರಕ್ಷಣಾ ದಳ ಬಾಗೇಪಲ್ಲಿ ತಾಲ್ಲೂಕು ಘಟಕ ಸ್ಥಾಪನೆ

ಬಾಗೇಪಲ್ಲಿ:- ಪಟ್ಟಣದ ನ್ಯಾಷನಲ್ ಕಾಲೇಜು ರಸ್ತೆಯಲ್ಲಿರುವ ಜ್ಞಾನ ದೀಪ್ತಿ ಶಾಲೆಯ ಮುಂದೆ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಹಾಗೂ ಗ್ರಾಹಕರ ರಕ್ಷಣಾ ದಳ ತಾಲ್ಲೂಕು ಘಟಕ ಹಾಗೂ ಕಛೇರಿಯನ್ನು ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಹಾಗೂ ಗ್ರಾಹಕರ ರಕ್ಷಣಾ ದಳ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಸಂಪAಗಿ ಶ್ರೀನಿವಾಸಲು ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಿ ಅವರಿಗೆ ಗುರುತಿನ ಚೀಟಿ ನೀಡುವ ಮೂಲಕ ಜವಬ್ದಾರಿಗಳನ್ನು ವಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿ ದೇಶದ ಪ್ರಗತಿಗಾಗಿ ಭ್ರಷ್ಟಚಾರ ನಿಮೂರ್ಲನೆ ಅತಿ ಅವಶ್ಯವಾಗಿದ್ದು, ಲಂಚ ತೆಗೆದುಕೊಳ್ಳುವುದು ಎಷ್ಟು ಅಪರಾಧವು ಲಂಚ ಕೊಡುವುದು ಕೂಡ ಅಪರಾಧ ಆದ್ದರಿಂದ ನಮ್ಮ ಸಂಸ್ಥೆ ಸುಮಾರು ೫ ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತದೆ
ಭ್ರಷ್ಟಾಚಾರ ಎಲ್ಲಿ ನೋಡಿದರೂ ತಾಂಡವಾಡುತ್ತಿದೆ ಹಳ್ಳಿಯಿಂದ ಡೆಲ್ಲಿಯ ವರಿಗೆ ಯಾವ ಕಛೇರಿ ಗೆ ಹೋದರೂ ಲಂಚ ಇಲ್ಲದೆ ಯಾವ ಕೆಲಸ ನಡೆಯುವುದಿಲ್ಲ ಜನನ ಪತ್ರದಿಂದ ಮರಣ ಪತ್ರದ ವರೆಗೆ ಲಂಚ ಇಲ್ಲದೆ ಕೆಲಸ ನಡೆಯುವುದಿಲ್ಲ. ಆದ್ದರಿಂದ ನಮ್ಮ ಸಂಸ್ಥೆ ಜೊತೆಗೆ ಎಲ್ಲರೂ ಕೈ ಜೋಡಿಸಿದರೆ ಸಂಪೂರ್ಣವಾಗಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ತಾಲ್ಲೂಕು ಘಟಕದ ಅದ್ಯಕ್ಷ ಜಿ.ಎಂ.ಅನ್ಸಾರಿ ಪಾಷಾ ಮಾತನಾಡಿ ಭ್ರಷ್ಟಾಚಾರವು ದೊಡ್ಡ ಸಾಮಾಜಿಕ ಪಿಡುಗು ಯುವಕ ಯುವತಿಯರು ಸಂಘ ಸಂಸ್ಥೆಗಳು ಭ್ರಷ್ಟಾಚಾರ ನಿಯಂತ್ರಣ ಬಗ್ಗೆ ಅರಿವು ಮೂಡಿಸುವ ಮೂಲಕ ಸಾಮಾಜಿಕ ಬದಲಾವಣೆ ಮಾಡಬೇಕು. ಲಂಚ ಪಡೆಯುವ ಭ್ರಷ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಭಯದ ವಾತಾವರಣ ಸೃಷ್ಟಿಸಬೇಕು. ಸರ್ಕಾರಿ ಕೆಲಸ ಮಾಡಲು ಹಿಂದೇಟು ಹಾಕುವುದು ಅಧಿಕಾರಿ ವರ್ಗದವರು ವಿರುದ್ಧ ಕಾನೂನು ಪ್ರಕಾರ ಹೋರಾಟ ನಡೆಸಿ ಸಂಸ್ಥೆ ಹಾಗೂ ಜನರಲ್ಲಿ ನಂಬಿಕೆ ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಹಸಿರು ಸೇನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಪದಾಧಿಕಾರಿಗಳಾದ ಸಿ ಉಮಾ ಹಾಗೂ ಲಕ್ಷ್ಮಣ್ ರೆಡ್ಡಿ ಮಾತನಾಡಿ ಮೊದಲು ಪದಾಧಿಕಾರಿಗಳಿಗೆ ಶುಭಾಶಯಗಳು ತಿಳಿಸಿ ಬಾಗೇಪಲ್ಲಿ ಪಟ್ಟಣದಲ್ಲಿ ಇಂತಹ ಸಂಸ್ಥೆಗಳು ಸ್ಥಾಪನೆಯಾಗಿರುವುದು ತುಂಬಾ ಸಂತಸದ ಸಂಗತಿಯಾಗಿದೆ ಮಂದಿನ ದಿನಗಳಲ್ಲಿ ನಮ್ಮ ಕರ್ನಾಟಕ ರಾಜ್ಯ ಹಸಿರು ಸೇನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ನಿಮ್ಮ ಜೊತೆ ಕೈ ಜೋಡಿಸಿ ಹೋರಾಟ ಮಾಡುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಹಾಗೂ ಗ್ರಾಹಕರ ರಕ್ಷಣಾ ದಳ ರಾಷ್ಟ್ರೀಯ ಕಾರ್ಯದರ್ಶಿ ರವಿ ಕುಮಾರ್ ರೆಡ್ಡಿ, ವಕೀಲರಾದ ಕೆ.ಟಿ.ಅಂಜನ ಮೂರ್ತಿ, ರಾಜ್ಯ ಕಾರ್ಯದರ್ಶಿ ಜಮೀರ ಬಾಬು ಚಿಕ್ಕಬಳ್ಳಾಪುರ ಜಿಲ್ಲೆಯ ಅದ್ಯಕ್ಷ ಮಹಮ್ಮದ್ ಪಾಷಾ, ಬಾಗೇಪಲ್ಲಿ ಘಟಕದ ಮಹಿಳಾ ಅದ್ಯಕ್ಷೆ ಆಶೀರ್ವಾದಮ್ಮ, ಉಪಾಧ್ಯಕ್ಷೆ ಶಾಂತಿ,ಪ್ರಧಾನ ಕಾರ್ಯದರ್ಶಿ ಅಸ್ಪೀಯಾ ಬಾಗೇಪಲ್ಲಿ ತಾಲ್ಲೂಕು ಅಲ್ಪಸಂಖ್ಯಾತ ಅಧ್ಯಕ್ಷ ನಿಜಾಮ್ ಉದ್ದೀನ್ ಬಾಬು ಹಾಗೂ ಇನ್ನೂ ಪ್ರಮುಖರು ಪಾಲ್ಗೊಂಡಿದ್ದರು.

ವರದಿ:- ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು

error: