May 17, 2024

Bhavana Tv

Its Your Channel

ಅವಿಶ್ವಾಸಕ್ಕೆ ಸೋಲು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳು ನಿರಾಳ

ಬಾಗೇಪಲ್ಲಿ: ಪಟ್ಟಣದ ಹೊರವಲಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮಂಡಿಸಲಾದ ಅವಿಶ್ವಾಸ ನಿರ್ಣಯಕ್ಕೆ ಯಾವುದೇ ರೀತಿಯ ಬೆಂಬಲವಿಲ್ಲದೆ ಸೋತು ಹೋಯಿತು.
ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ೧೯೬೬ ರ ಹಾಗೂ ೧೯೬೮ ರ ನಿಯಮ ೪೯ (೧) ರಂತೆ ನಿಗಧಿತ ಸಮೂನೆ ೨೭ ರಲ್ಲಿ ಕಾರಣಗಳನ್ನು ಸೂಚಿಸಿ, ಸಮಿತಿಯ ಅಧ್ಯಕ್ಷರಾದ ಎಸ್. ಸೋಮಶೇಖರ್‌ರೆಡ್ಡಿ ಅವರ ವಿರುದ್ಧ ಕಳೆದ ದಿನಾಂಕ ೨೯/೦೭/೨೦೨೧ ರಂದು ಉಪಾಧ್ಯಕ್ಷ ಕೆ.ಆರ್.ಅಂಜಿನಪ್ಪ ಸಲ್ಲಿಸಿರುವ ಅವಿಶ್ವಾಸ ಸೂಚನೆಯ ನೋಟಿಸ್ ಮಂಡನೆಯAತೆ ಇಂದು ಅಧ್ಯಕರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು.
ಸಭೆಯಲ್ಲಿದ್ದ ಒಟ್ಟು ೧೩ ಸದಸ್ಯರ ಪೈಕಿ ಐದು ಜನ ಸದಸ್ಯರಾದ ಟಿ.ನರಸಿಂಹಪ್ಪ ಜಿ.ಎನ್. ರಾಮಚಂದ್ರಪ್ಪ ಮಂಗೇನಾಯಕ್, ಪಿ.ರಾಮಚಂದ್ರರೆಡ್ಡಿ ಹಾಗೂ ಬಿ. ನಾರಾಯಣರೆಡ್ಡಿ ರವರು ಅವಿಶ್ವಾಸದ ಪರ ಮತ ಚಲಾಯಿಸಿದರು. ಆದರೆ ನಮೂನೆ ೨೭ ರಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿರುವAತೆ ಒಟ್ಟು ಐದು ಜನ ಸಮಿತಿಯ ಸದಸ್ಯರು ಮಾತ್ರ ಅಧ್ಯಕ್ಷ ಎಸ್.ಸೋಮಶೇಖರರೆಡ್ಡಿ ಅವಿಶ್ವಾಸ ಸೂಚನೆಯ
ಪರವಾಗಿ ಮತ ಚಲಾಯಿಸಿರುವುದರಿಂದ ಸಮಿತಿಯ ಒಟ್ಟು ಸದಸ್ಯರ ೨/೩ ಸಂಖ್ಯೆ ಸದಸ್ಯರು ಅವಿಶ್ವಾಸ ಗೊತ್ತುವಳಿ ಸೂಚನೆ ಪರವಾಗಿ ಸಮರ್ಥಿಸಿಲ್ಲದ ಕಾರಣ ಸದರಿ ಎಸ್.ಸೋಮಶೇಖರ್ ಅಧ್ಯಕ್ಷರ ವಿರುದ್ಧ ಮಂಡಿಸಿದ ಅವಿಶ್ವಾಸ ಗೊತ್ತುವಳಿ ಸೂಚನೆ ಅಂಗೀಕಾರವಾಗಿರುವುದಿಲ್ಲ ಎಂದು ತೀರ್ಮಾನಿಸಲಾಯಿತು.
ಇದೇ ರೀತಿಯಲ್ಲಿ ಈ ಹಿಂದೆ ಉಪಾಧ್ಯಕ್ಷ ಕೆ.ಆರ್. ಅಂಜಿನಪ್ಪ ಅವರ ವಿರುದ್ಧ ಕಳೆದ ೦೬/೦೭/೨೦೨೧ ರಂದು ಅಧ್ಯಕ್ಷ ಎಸ್.
ಸೋಮಶೇಖರ್ ಮಂಡಿಸಲಾದ ಅವಿಶ್ವಾಸಕ್ಕೆ ವೆಂಕಟರೆಡ್ಡಿ, ವೈ, ಅಶ್ವತ್ಥರೆಡ್ಡಿ, ಇಂದಿರಾ ಹಾಗೂ ನಾರಾಯಣಮ್ಮ ಸೇರಿದಂತೆ ನಾಲ್ಕು ಜನ ಸದಸ್ಯರು
ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ನಮೂನೆ ೨೭ ರಂತೆ ೨/೩ ಸದಸ್ಯ ಬಲವಿಲ್ಲದೆ ಅವಿಶ್ವಾಸ ಗೊತ್ತುವಳಿಗಳು ಬಿದ್ದುಹೋಗಿ ಯಥಾ ಸ್ಥಿತಿಯಾಗಿ
ಅಧ್ಯಕ್ಷ ಎಸ್, ಸೋಮಶೇಖರ್ ಹಾಗೂ ಉಪಾಧ್ಯಕ್ಷ ಕೆ.ಆರ್. ಅಂಜಿನಪ್ಪರವರುಗಳೆ ಮಂದುವರೆದರು.
ಸಭಾಧ್ಯಕ್ಷರಾಗಿ ಜಂಟಿ ನಿರ್ದೇಶಕರು ಮತ್ತು ಕಾರ್ಯದರ್ಶಿ ಹಣ್ಣು ಹೂವು ತರಕಾರಿ ಕೃಉ.ಮಾ.ಸ. ಬೆಂಗಳೂರು ಹಾಗು ಕೃಉ.ಮಾ.ಸ. ಬಾಗೇಪಲ್ಲಿ ಸಮಿತಿಯ ಸಿ. ರಾಮದಾಸು ಕಾರ್ಯದರ್ಶಿ ಹಾಗೂ ಜಗನ್ನಾಥ ಉಪಕಾರ್ಯದರ್ಶಿಯಾಗಿ ಇಂದು ನಡೆದ ಸಭೆಯ ಕಲಾಪಗಳ ಬಗ್ಗೆ ಕಾರ್ಯನಿರ್ವಹಿಸಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: