May 17, 2024

Bhavana Tv

Its Your Channel

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಒತ್ತಾಯ

ವರದಿ:ಗೋಪಾಲ ರೆಡ್ಡಿ ಬಾಗೇಪಲ್ಲಿ

ಬಾಗೇಪಲ್ಲಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ವಿಪರೀತವಾದಂತಹ ಕಸ ತುಂಬಿದ್ದು, ಕೊಳೆತು ದುರ್ನಾಥ ಬೀರುತ್ತಿದೆ, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಸ್ವಚ್ಛತೆಯನ್ನು ಕಾಪಾಡಬೇಕೆಂದು ಸಂಬAಧಿಸಿದ ಅಧಿಕಾರಿಗಳಲ್ಲಿ ರೈತರು,ಸಾರ್ವಜನಿಕರು ಹಾಗೂ ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ಬಾಗೇಪಲ್ಲಿ ತಾಲ್ಲೂಕು ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟವಾಗದೆ ಬಿಸಾಡಿದ ತರಕಾರಿಗಳು, ಪ್ಯಾಕಿಂಗ್‌ನಲ್ಲಿ ಅಲ್ಲಲ್ಲಿ ಚೆಲ್ಲಿ ಹಾಳಾದ ಟೊಮೋಟೊಗಳಿಂದ ತರಕಾರಿಗಳಿಂದ ಮತ್ತಿತರೆ ರಾಡಿಯಿಂದ ಕೊಳೆತು ನಾರುತ್ತಿದೆ. ಇದರಿಂದ ದುರ್ನಾಥ ಬೀರುತ್ತಿದ್ದು ತರಕಾರಿಗಳನ್ನು ಕೊಳ್ಳುವವರು ಮತ್ತು ಮಾರುವವರು ಈ ಕೆಟ್ಟ ಗಾಳಿಯನ್ನು ಉಸಿರಾಡುತ್ತಾ ರೋಗ ರುಜಿನಗಳಿಗೆ ಈಡಾಗುತ್ತಿದ್ದಾರೆ ಎಂದಿದ್ದಾರೆ.
ವಿಪರೀತವಾದAತಹ ಕಸಕಡ್ಡಿ ಶೇಖರಣೆಯಾಗಿದ್ದು, ಇದರಿಂದ ಸೊಳ್ಳೆ, ಹೆಗ್ಗಣ,ಇಲಿ, ನೊಣ ಮತ್ತಿತರೆ ಉಪಟಳ ನೀಡುವ ಕ್ರಿಮಿಕೀಟಗಳ ಉತ್ಪತ್ತಿ ತಾಣವಾಗಿದೆ. ಮಳೆ ಬಂದಾಗಲAತೂ ಇಡೀ ಮಾರುಕಟ್ಟೆ ಪ್ರಾಂಗಣ ಕಸದ ಜೊತೆಗೆ ಕೆಸರಿನ ಗದ್ದೆಯಂತಾಗುತ್ತದೆ. ಹೆಸರಿಗೆ ಮಾತ್ರ ಕಸ ವಿಲೇವಾರಿ ಮಾಡಲಾಗುತ್ತಿದ್ದರೂ ಕಸಮುಕ್ತವಾಗಿಲ್ಲ. ಆದ್ದರಿಂದ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ ಪ್ರತಿದಿನ ಈ ಕಸವನ್ನು ಪರಿಣಾಮಕಾರಿಯಾಗಿ ವಿಲೇವಾರಿ ಮಾಡಿ, ಅಸ್ವಚ್ಛವಾದ ಮಾರುಕಟ್ಟೆ ಪ್ರಾಂಗಣವನ್ನು, ಸ್ವಚ್ಛ ಮತ್ತು ಸುಂದರ ಮಾರುಕಟ್ಟೆಯನ್ನಾಗಿ ರೂಪಿಸಲು ಶ್ರಮಿಸಬೇಕು, ಅದೇ ರೀತಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಕುಡಿಯುವ ನೀರು, ಶೌಚಾಲಯ, ವಿಶ್ರಾಂತ ಕೊಠಡಿ, ಉತ್ತಮವಾದ ರಸ್ತೆಗಳನ್ನು ನಿರ್ಮಾಣ ಮಾಡಿ, ಸ್ವಚ್ಛ ಹಾಗೂ ಆರೋಗ್ಯಪೂರ್ಣವಾದ ವಾತಾವರಣವನ್ನು ನಿರ್ವಹಣೆ ಮಾಡಬೇಕೆಂದು ಈ ಮೂಲಕ ಸಾರ್ವಜನಿಕರು ಒತ್ತಾಯಿಸಿದ್ದಾರೆ.

error: