April 26, 2024

Bhavana Tv

Its Your Channel

ಮನೆ, ನಿವೇಶನ, ನರೇಗಾ ಹಾಗೂ ಸ್ಥಳೀಯ ಸಮಸ್ಯೆಗಳ ಈಡೇರಿಕೆಗಾಗಿ ಪ್ರಜಾ ಸಂಘರ್ಷ ಸಮಿತಿಯಿಂದ ಬೃಹತ್ ಪ್ರತಿಭಟನೆ

ಬಾಗೇಪಲ್ಲಿ: ಅರ್ಹ ಫಲಾನುಭವಿಗಳಿಗೆ ಮನೆ, ನಿವೇಶನ ನೀಡಬೇಕು, ನರೇಗಾದಲ್ಲಿ ಆಗುತ್ತಿರುವ ವ್ಯಾಪಕ ಭ್ರಷ್ಟಾಚಾರವನ್ನು ತಡೆಗಟ್ಟಬೇಕು ಹಾಗು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಪ್ರಜಾ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಅವರ ನೇತೃತ್ವದಲ್ಲಿ ಇಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಬಾರಿ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮೊದಲಿಗೆ ಪ್ರಜಾ ಸಂಘರ್ಷ ಸಮಿತಿ ವತಿಯಿಂದ ಪಟ್ಟಣದ ಚಿತ್ರಾವತಿ ಸೇತುವೆಯಿಂದ ಪ್ರಾರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಪಟ್ಟಣದ ರಾಜಬೀದಿಯಲ್ಲಿ ಸಂಚರಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ತಾಲ್ಲೂಕು ಪಂಚಾಯಿತಿ ಕಛೇರಿಯ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ವೇದಿಕೆಯ ಮುಂಭಾಗಕ್ಕೆ ಪ್ರತಿಭಟನಾ ಮೆರವಣಿಗೆ ಸೇರಿಕೊಂಡಿತು. ಸಭೆಯಲ್ಲಿ ಚನ್ನರಾಯಪ್ಪ ತಂಡದವರು ಕ್ರಾಂತಿ ಗೀತೆಗಳನ್ನು ಹಾಡುವುದರ ಮುಖಾಂತರ ಸಭೆಯನ್ನು ಪ್ರಾರಂಭಿಸಿದರು, ಕ್ರಾಂತಿಗೀತೆಗಳ ಮುಖಾಂತರ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿನ ಜನಸಾಮಾನ್ಯರ ಬದುಕುಗಳು, ಕೂಲಿಕಾರ್ಮಿಕರ ಜೀವನಗಳು, ಬಡತನ ಇತ್ಯಾದಿಗಳನ್ನು ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ಪ್ರಜಾ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಹಾಗು ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾ, ದುಡಿಯುವ ಕೈಗಳಿಗೆ ಕೆಲಸ ನೀಡಬೇಕಾಗಿದ್ದ ನರೇಗಾ ಯೋಜನೆ, ಇಂದು ಅಧಿಕಾರಿಗಳ ಕುಮ್ಮಕ್ಕಿನಿಂದ ಯಂತ್ರಗಳನ್ನು ಇಟ್ಟು ಕೆಲಸ ಮಾಡುತ್ತಿದ್ದು, ವ್ಯಾಪಕ ಭ್ರಷ್ಟಾಚಾರ ಎಸಗಲಾಗುತ್ತಿದೆ. ಇದರಿಂದ
ನಿಜವಾದ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ, ಸರಿಯಾದ ಕೂಲಿ ಇಲ್ಲದೆ ಪರಿತಪಿಸುವಂತಾಗಿದೆ. ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ, ಮನೆಗಳನ್ನು ನೀಡಬೇಕು, ಕುಡಿಯುವ ನೀರು, ನೈರ್ಮಲ್ಯ ಬೆಳಕು ರಸ್ತೆಗಳು ಇತ್ಯಾದಿ ಮೂಲಭೂತ ಸೌಕರ್ಯಗಳು ಎಲ್ಲರಿಗು ಸಿಗಬೇಕು ಎಂದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪ್ರತಿ ಕುಟುಂಬಕ್ಕೂ ೧೦೦ ದಿನ ಕೆಲಸ ಕಡ್ಡಾಯವಾಗಿ ನೀಡಬೇಕೆಂಬ ಕಾನೂನು ಇದ್ದರೂ ಇಲ್ಲಿನ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಿAದ ಆಗುತ್ತಿಲ್ಲ, ಗ್ರಾಮ ಪಂಚಾಯಿತಿಗಳಲ್ಲಿ ಕೂಲಿಕಾರರು ನಮೂನೆ ೬ ನ್ನು ನೀಡಿದರೆ, ಅದಕ್ಕೆ ಸ್ವೀಕೃತಿ ನೀಡುತ್ತಿಲ್ಲ, ಕೆಲವು ಪಂಚಾಯಿತಿಗಳಲ್ಲಿ ಕೆಲಸ ಕೊಡಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ.
ಅರ್ಹ ಫಲಾನುಭವಿಗಳಿಗೆ ಖಾಲಿ ನಿವೇಶನಗಳು ಮಂಜೂರು ಆಗಿಲ್ಲ, ಮನೆಗಳು ಮಂಜೂರು ಆಗಿಲ್ಲ, ಮನೆಗಳನ್ನು ಕಟ್ಟಲು ಪ್ರಾರಂಭಿಸಿದವರಿಗೆ ಬಿಲ್‌ಗಳನ್ನು ನೀಡುತ್ತಿಲ್ಲ, ಮನೆ ಪಡೆದುಕೊಳ್ಳಬೇಕೆಂದರೆ ರುಷವತ್ತು ನೀಡಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಇದೆ. ಒಟ್ಟಾರೆ ತಾಲ್ಲೂಕಿನ ಪ್ರತಿಯೊಂದು ಕಛೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ ಎಂದರು.
ಸರ್ಕಾರದಿAದ ಮನೆ ಕಟ್ಟಿಕೊಳ್ಳಲು ಸುಮಾರು ೧.೬೦ ಲಕ್ಷ ರೂ. ನೀಡಲಾಗುತ್ತಿದ್ದು, ಈ ಚಿಕ್ಕ ಮೊತ್ತದಲ್ಲಿ ಮನೆ ಕಟ್ಟಲು ಸಾಧ್ಯವೆ? ಎಂದು ಪ್ರಶ್ನಿಸಿದ ಅವರು, ಆ ಹಣದಲ್ಲಿ ಮನೆಗಳು ಅಪೂರ್ಣವಾಗಿದ್ದು ಎಲ್ಲಿಯೂ ಸಲ್ಲದವರಾಗಿ ಗ್ರಾಮೀಣ ಭಾಗದ ಜನರ ಸ್ಥಿತಿ ತೀರ ದಯನೀಯವಾಗಿದೆ, ಈಗ ಬಿಲ್ ಹಣ ಎಷ್ಟು ಜನಕ್ಕೆ ನೀಡಬೇಕು, ಎಷ್ಟು ಹಣವಿದೆ, ಇತ್ಯಾದಿ ಎಲ್ಲಾ ಪ್ರಶ್ನೆಗಳಿಗೆ ಸಂಬAಧಿಸಿ ಅಧಿಕಾರಿಗಳು ಉತ್ತರಿಸಬೇಕು, ಇತರೆ ಸಮಸ್ಯೆಗಳು ಇತ್ಯರ್ಥ ಮಾಡುವವರೆಗೂ ಯಾರು ಇಲ್ಲಿಂದ ಏಳುವುದಿಲ್ಲ ಎಂದರು. ಮನೆ ಕಟ್ಟಿಕೊಳ್ಳಲು ಕನಿಷ್ಠ ೧೦ ಲಕ್ಷ ರೂ. ಮಂಜೂರು ಮಾಡಬೇಕು, ಇತ್ಯಾದಿ ಸುಮಾರು ೧೨ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥಸ್ವಾಮಿ ಪ್ರತಿಭಟನಾಕಾರರಿಂದ ಮನವಿಯನ್ನು ಪಡೆದುಕೊಂಡು, ಸಮಸ್ಯೆಗಳನ್ನು ಒಂದು ತಿಂಗಳ ಒಳಗೆ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಮುಕ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಜಿ ಎಂ ರಾಮಕೃಷ್ಣ ಪ್ಪ ಎಚ್.ಎನ್ ಚಂದ್ರಶೇಖರೆಡ್ಡಿ ಆರ್. ಚಂದ್ರಶೇಖರೆಡ್ಡಿ ಎಲ್. ವೆಂಕಟೇಶ್ ಟಿ.ಎಲ್. ವೆಂಕಟೇಶ್ ಚನ್ನರಾಯಪ್ಪ ನಾರಾಯಣ ಸ್ವಾಮಿ. ಸಿ ಕೆ ನರಸಿಂಹಪ್ಪ. ರಾಮಾಂಜಿನಪ್ಪ ಬಾಷಾ ಸಾಬ್ ,ಜಾಬೀರ್ ಅಹಮ್ಮದ್ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರು ಗೋಪಾಲಕೃಷ್ಣ ಬೈರಾರೆಡ್ಡಿ ಪೆದ್ದ ಮುನಿಯಪ್ಪ. ಪ್ರೆಮೀಳಮ್ಮ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: