April 26, 2024

Bhavana Tv

Its Your Channel

ಬಾಗೇಪಲ್ಲಿ : ಸೆ. ೨೭ ರಂದು ಬಂದ್ ಗೆ ಪ್ರಗತಿಪರ ಸಂಘಟನೆಗಳ ಬೆಂಬಲ ನೀಡುವ ಮೂಲಕ ಕರೆ

ಬಾಗೇಪಲ್ಲಿ:- ತಾಲೂಕಿನ ವಿವಿಧ ಸಂಘಟನೆಗಳ ಸಹಯೋಗದಲ್ಲಿ,ಸೆ೨೭ರಂದು ನಡೆಯುವ ಭಾರತ್ ಬಂದ್ ಹಿನ್ನಲೆಯಲ್ಲಿ ವಿವಿಧ ಸಂಘಟನೆಗಳಿoದ ಬಾಗೇಪಲ್ಲಿ ಬಂದ್ ಕರೆ ನೀಡಲಾಗಿದೆ. ರೈತ ಸಂಘ ಹಾಗೂ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಡೆಯುವ ಬಂದ್ ಕರೆ ಯಶಸ್ವಿಗೊಳಿಸಲು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರವಾಸಿ ಮಂದಿರದಲ್ಲಿ. ಸೆ೨೩ ರಂದು ಪೂರ್ವಭಾವಿ ಸಭೆ ಜರುಗಿಸಲಾಯಿತು,ಸಭೆಯಲ್ಲಿ ಕನ್ನಡಪರ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿ ಬೆಂಬಲ ಸೂಚಿಸಿದರು. ಈ ಮೂಲಕ ಬಂದ್ ಯಶಸ್ಸುಗೊಳಿಸಲು ಸರ್ವರು ಒಮ್ಮತದ ನಿರ್ಣಯ ಕೈಗೊಂಡರು,
ರೈತ ಸಂಘದ ಮುಖಂಡರಾದ ಲಕ್ಷ್ಮಣ್ ರೆಡ್ಡಿ ಮಾತನಾಡಿ, ಜನ ವಿರೋಧಿ ನೀತಿಯ ಕಾಯ್ದೆಗಳನ್ನು ರದ್ದುಗೊಳಿಸುವಂತೆ ರೈತ ಸಂಘಟನೆಗಳು ಸುಮಾರು ೧೦ ತಿಂಗಳಿನಿAದ ರೈತ ವಿರೋಧಿ ಕೃಷಿ ಮಸೂದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ.ಬೆಂಬಲ ವ್ಯಕ್ತಪಡಿಸಿ ಕರೆ ನೀಡಿರುವ ಭಾರತ ಬಂದ್ ಕರೆ ಹಿನ್ನಲೆಯಲ್ಲಿ,ರೈತ ಸಂಘ ಹಾಗೂ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆಯುವ ಬಾಗೇಪಲ್ಲಿ ತಾಲ್ಲೂಕು ಬಂದ್‌ಗೆ ಸಾರ್ವಜನಿಕರು ಸಹಕರಿಸಬೇಕು ಹಾಗೂ ಅಂಗಡಿ ಮುಂಗಟ್ಟುಗಳು ಹಾಗೂ ಹೋಟೆಲ್ ಮಾಲೀಕರು ವಾಹನಗಳ ಕಾರ್ಮಿಕರು, ಬಂದ್‌ನಲ್ಲಿ ಭಾಗವಹಿಸಿ ಯಷಸ್ಸು ಗೊಳಿಸಬೇಕೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆ.ಆರ್.ಪಿ.ಎಸ್ ಮುಖಂಡ ಮಂಜುನಾಥ ರೆಡ್ಡಿ ಸಿಪಿಐಎಂ ಪಕ್ಷದ ಮುಖಂಡರಾದ ಅಶ್ವಥಪ್ಪ,ಶ್ರೀರಾಮಪ್ಪ, ಶ್ರೀರಾಮ ನಾಯಕ್ ಸಿಐಟಿಯು ಮುಖಂಡ ಆಂಜನೇಯ ರೆಡ್ಡಿ,ಮಹಮ್ಮದ್ ಅಕ್ರಂ, ಪಿ.ಎಸ್. ಎಸ್.ಮುಖಂಡ ಚನ್ನರಾಯಪ್ಪ,ಕರವೇ ಹರೀಶ್, ಎಸ್.ಎಫ್. ಐ ಮುಖಂಡ ಸತೀಶ್ ,ಕರವೇ ಸ್ವಾಭಿಮಾನ ಬಣ ಜಬೀವುಲ್ಲಾ, ಆದಿನಾರಾಯಣಪ್ಪ, ಜನವಾದಿ ಮಹಿಳಾ ಸಂಘದ ಅಧ್ಯಕ್ಷೆ ಸರಸ್ವತಮ್ಮ ,ರೈತ ಸಂಘದ ಮಹಿಳಾ ಸಿ.ಉಮಾ, ಹಸಿರು ಸೇನೆ ಅದ್ಯಕ್ಷ ಲಕ್ಷ್ಮಣ್ ರೆಡ್ಡಿ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: