April 27, 2024

Bhavana Tv

Its Your Channel

ಅಂಗವಿಕಲರ ಕುರಿತು ಹೆಚ್ಚಿನ ಅನುಕಂಪ ತೋರಿಸುವುದು ಬೇಡ. ಅಧಿಕಾರಿಗಳು ನಿಯಮಾನುಸಾರ ಸವಲತ್ತು ಒದಗಿಸಿದರೆ ಸಾಕು-ರಾಜ್ಯ ಕಾರ್ಯದರ್ಶಿ ಕಿರಣ್ ನಾಯಕ್. ಬಿ

ಬಾಗೇಪಲ್ಲಿ:- ಅಂಗವಿಕಲರ ಕುರಿತು ಹೆಚ್ಚಿನ ಅನುಕಂಪ ತೋರಿಸುವುದು ಬೇಡ. ಅಧಿಕಾರಿಗಳು ನಿಯಮಾನುಸಾರ ಸವಲತ್ತು ಒದಗಿಸಿದರೆ ಸಾಕು ಅನುಕೂಲವಾಗುತ್ತದೆ. ಪ್ರತಿಯೊಂದಕ್ಕೂ ಹೋರಾಟ ಮಾಡಿ ಪಡೆದುಕೊಳ್ಳಬೇಕಾಗಿದೆ ಎಂದು ಕರ್ನಾಟಕ ವಿಕಲಚೇತನರ ಸಂಸ್ಥೆ ರಾಜ್ಯ ಕಾರ್ಯದರ್ಶಿ ಕಿರಣ್ ನಾಯಕ್. ಬಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅವರು ತಾಲ್ಲೂಕು ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಾಗೇಪಲ್ಲಿ ತಾಲ್ಲೂಕು ವಿಕಲಚೇತನರ ತಾಲ್ಲೂಕು ಘಟಕ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿ ನಿಜವಾದ ವಿಕಲಚೇತನರಿಗೆ ಸರ್ಕಾರಿ ಸೌಲಭ್ಯ ಹಾಗೂ ಸರ್ಕಾರಿ ಯೋಜನೆಗಳು ಸಿಗುತ್ತಿಲ್ಲ ಮಧ್ಯವರ್ತಿಗಳಿಂದ ಇತರರಿಗೆ ಯೋಜನೆಗಳು ಸಿಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿಯಮಾನುಸಾರ ಸರ್ಕಾರದ ಅನುದಾನದಲ್ಲಿ ಶೇ.೫ ಹಣವನ್ನು ಅಂಗವಿಕಲರ ಕಲ್ಯಾಣಕ್ಕೆ ಖರ್ಚು ಮಾಡಲು ಆಸಕ್ತಿ ತೋರುತ್ತಿಲ್ಲ. ಗ್ರಾಪಂ, ತಾಪಂ, ಜಿಪಂ, ವಿವಿಧ ಇಲಾಖೆ, ಶಾಸಕರು ಮತ್ತು ಸಂಸದರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಕಡ್ಡಾಯವಾಗಿ ಶೇ.೩ ಅನುದಾನವನ್ನು ಅಂಗವಿಕಲರಿಗೆ ಮೀಸಲಿಡಬೇಕೆಂಬ ನಿಯಮವಿದೆ. ಇದನ್ನು ಇತ್ತಿಚೀಗೆ ಕೇಂದ್ರ ಸರ್ಕಾರ ಶೇ.೫ಕ್ಕೆ ಏರಿಸಿದೆ. ಈ ಹಣದಲ್ಲಿ ಅಂಗವಿಕಲರ ಸ್ವಯಂ ಉದ್ಯೋಗಕ್ಕೆ ನೆರವು, ವಿದ್ಯಾರ್ಥಿ ವೇತನ, ಆರೋಗ್ಯ ಶಿಬಿರ, ಕೌಶಲ ತರಬೇತಿ ಮತ್ತು ಅಗತ್ಯ ಸಲಕರಣೆಗಳ ವಿತರಣೆ ಸೇರಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ಅಂಗವಿಕಲರ ಅನುದಾನವನ್ನು ಇತರೆ ಕೆಲಸಗಳಿಗೆ ಬಳಕೆ, ಖರ್ಚು ಮಾಡದೆ ಸರ್ಕಾರಕ್ಕೆ ವಾಪಸ್ ಕಳುಹಿಸುವುದು, ಕಾಟಾಚಾರಕ್ಕೆ ಕೆಲವರಿಗೆ ಮಾತ್ರ ಸವಲತ್ತು ವಿತರಣೆ ಮಾಡುವ ಮೂಲಕ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ವಿಕಲಚೇತನರ ಸಂಸ್ಥೆ ೨೦೧೨ ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಾರಂಭಿಸಿದ್ದು ವಿಕಲಚೇತನರಿಗೆ ಸಮಾಜದ ಮುಖ್ಯ ವಾಹಿನಿಗೆ ತರಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಾಗೇಪಲ್ಲಿ ತಾಲ್ಲೂಕಿನಲ್ಲಿ ಸುಮಾರು ೪೫೦೦ ವಿಕಲಚೇತನರಿದ್ದಾರೆ, ಇದರಲ್ಲಿ ಶೇ.೫೦ ಮಂದಿಗೂ ಸವಲತ್ತು ಸಿಗುತ್ತಿಲ್ಲ. ಪ್ರಭಾವಿಗಳ ನಡುವೆ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗದೆ ಅನೇಕರು ಎಲ್ಲ ರೀತಿಯಲ್ಲೂ ಹಿಂದುಳಿದು ತೊಂದರೆ ಅನುಭವಿಸುತ್ತಿದ್ದಾರೆ. ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ರ್ಯಾಂಪ್ ಗಳನ್ನು ನಿರ್ಮಿಸಿ ಹಾಗೂ ವಿಶೇಷ ಶೌಚಾಲಯಗಳನ್ನು ನಿರ್ಮಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಘಟಕ ಪಟ್ಟಿ ಬಿಡುಗಡೆ ಮಾಡಲಾಯಿತು. ಅಧ್ಯಕ್ಷರಾಗಿ ಟಿ.ಆದಿನಾರಾಯಣಪ್ಪ,ಉಪಾಧ್ಯಕ್ಷ ವೈ.ವಿ.ವೆಂಕಟೇಶ್, ಕಾರ್ಯದರ್ಶಿ ಯಾಗಿ ಎನ್.ವೆಂಕಟರವಣಪ್ಪ,ಖಜಾAಚಿ ಯಾಗಿ ಎನ್.ರಘು, ಸಂಚಾಲಕರಾಗಿ ಕೆ.ವಿ.ಶ್ರೀನಿವಾಸ್ ಪಿ.ನಂಜುAಡಪ್ಪ,ರಾಜಪ್ಪ,ಎಸ್.,ರವಿಚAದ್ರ, ಮಹಿಳಾ ಸಂಚಾಲಕರಾಗಿ ಲಕ್ಷ್ಮೀ, ಗಂಗರತ್ನಮ್ಮ,ಸುಧಾ, ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆಯಾದ್ದರೆ ಎಂದು ರಾಜ್ಯ ಅದ್ಯಕ್ಷ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯಾದ್ಯಕ್ಷ ಕೆ.ಜಿ.ಸುಬ್ರಹ್ಮಣ್ಯಂ, ರಾಜ್ಯ ಉಪಾಧ್ಯಕ್ಷ ಜಿ.ವಿ.ವೆಂಕಟಶಿವಪ್ಪ,ರಾಜ್ಯ ಸಂಘಟನೆ ಸಂಚಾಲಕರಾದ ನಸಿಂಹ ಮೂರ್ತಿ, ಮಂಜುನಾಥ ಹಾಗೂ ಇತರರು ಹಾಜರಿದ್ದರು.
ವರದಿ: ಗೋಪಾಲಿ ರೆಡ್ಡಿ ಬಾಗೇಪಲ್ಲಿ

error: