April 26, 2024

Bhavana Tv

Its Your Channel

ಚೆಕ್ ಡ್ಯಾಂಗಳು ಒತ್ತುವರಿ ಗ್ರಾಮಸ್ಥರಿಂದ ದೂರು: ತೆರವುಗೊಳಿಸಲು ಒತ್ತಾಯ

ಬಾಗೇಪಲ್ಲಿ ತಾಲ್ಲೂಕಿನ ಪರಗೋಡು ಸಮೀಪದ ಹೆದ್ದಾರಿ ೭ ಕ್ಕೆ ಹೊಂದಿಕೊAಡಿರುವ ಪರಗೋಡು ಮತ್ತು ಮಂಗಸAದ್ರ ಸರ್ವೆ ನಂಬರುಗಳಲ್ಲಿರುವ ಚೆಕ್ ಡ್ಯಾಂಗಳನ್ನು ಒಳಗೊಂಡAತೆ ಹಳ್ಳವನ್ನೇ ನುಂಗಲು ಬೆಂಗಳೂರಿನ ವ್ಯಕ್ತಿಯೊಬ್ಬರು ಮುಂದಾಗಿದ್ದು ಇದಕ್ಕೆ ವಿರೋಧಿಸಿದ ಸ್ಥಳೀಯ ರೈತರು ಮತ್ತು ಧನಗಾಹಿಗಳಿಗೆ ಬೆದರಿಕೆಯನ್ನು ಒಡ್ಡಿರುವ ಬಗ್ಗೆ ವರದಿಯಾಗಿದೆ.

ಭೂಗಳ್ಳರಿಗೆ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಳ್ಳುವುದೆಂದರೆ ಇನ್ನಿಲ್ಲದ ಇಷ್ಟ. ಅದು ಪಾರ್ಕ ಜಾಗವಾಗಿರಲಿ, ರಾಜಕಾಲುವೆಯಾಗಿರಲಿ, ಗೋಮಾಳವಾಗಿರಲಿ, ಶಾಲಾ-ಕಾಲೇಜು ಆವರಣವಿರಲಿ ಒತ್ತುವರಿ ಮಾಡಿಕೊಂಡರೆ ಅದರಲ್ಲಿ ಹೆಚ್ಚಿನ ಸಂತೃಪ್ತಿಯನ್ನು ಪಡೆದುಕೊಳ್ಳುತ್ತಾರೆ! ಅಧಿಕಾರಿಗಳ ಹಾಗೂ ಸಾರ್ವಜನಿಕರ ನಿರ್ಲಕ್ಷ್ಮ ಪ್ರಮುಖ ಕಾರಣವಾಗಿರುತ್ತದೆ. ಈಗ ಇಲ್ಲೊಂದು ಖಾಸಗಿ ಸಂಸ್ಥೆ ಚೆಕ್ ಡ್ಯಾಂಗಳನ್ನು ಸೇರಿದಂತೆ
ಹಳ್ಳವನ್ನೇ ನುಂಗಿಹಾಕಲು ಸ್ಕೆಚ್ ಹಾಕಿರುವುದು ಕುತೂಹಲವನ್ನು ಕೆರಳಿಸಿದೆ!?.
ನಿಮಗೆ ಆಶ್ಚರ್ಯವಾದರು ಈ ಸುದ್ದಿಯೊಂದಿಗಿನ ಚಿತ್ರಗಳನ್ನು ಗಮನಿಸಿದಾಗ ಸತ್ಯದ ಅರಿವಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ೭ ರ ಪರಗೋಡು ಸಮೀಪದ ಸಾಲುಮರದ ತಿಮ್ಮಕ್ಕ ಉದ್ಯಾನವಲದ ಎದುರು ಇರುವ ಕೋಟ್ಯಾಂತರ ಬೆಲೆ ಬಾಳುವ ಸರ್ಕಾರಿ ಗೋಮಾಳ ಹಾಗು ಅದರಲ್ಲಿ ಹಾಕು ಹೋಗುವ ಹಳ್ಳ ಒತ್ತುವರಿಯಾಗಿರುವ ಪ್ರದೇಶ. ಸ್ಥಳೀಯ ರೈತರು ಹಾಗು ದನಗಾಹಿಗಳ ಪ್ರಕಾರ ಸುಮಾರು ೧೦ ಎಕರೆಯಷ್ಟು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಗೋಮಾಳವನ್ನು ಬೆಂಗಳೂರಿನ ಬಲಾಢ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಳ್ಳಲು
ಸಿದ್ಧತೆಗಳನ್ನು ಮಾಡಿಕೊಂಡಿದ್ದು ಸನಂ ೩೦೧ ರಲ್ಲಿನ ಗೋಮಾಳ ಮತ್ತು ೩ ಚೆಕ್ ಡ್ಯಾಂ ಹಾಗು ಹಳ್ಳ ಪ್ರದೇಶವನ್ನು ತನ್ನ ಒಡಲಿಗೆ ಹಾಕಿಕೊಂಡು ಬೇಲಿ ಹಾಕಲು ಸರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಹೆದ್ದಾರಿ ಅಕ್ಕಪಕ್ಕದಲ್ಲಿ ಈಗ ಭೂಮಿಗೆ ಚಿನ್ನದ ಬೆಲೆ ಇದೆ. ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡರೆ ಯಾರು ಕೇಳುವುದಿಲ್ಲ ಎಂಬ ದಿಮಾಕಿನಿಂದ ರಾಜಾರೋಷವಾಗಿ ಫೆನ್ಸಿಂಗ್ ಹಾಕಲು ಸಿದ್ದತೆಗಳು ನಡೆದಿದೆ.
ಪರಗೋಡು, ದೇವರೆಡ್ಡಿಪಲ್ಲಿ ಗ್ರಾಮಗಳ ದನಕರುಗಳು, ಕುರಿ-ಮೇಕೆಗಳನ್ನು ಇದೇ ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಮೇವಿನ ಆಶ್ರಯವಾಗಿ ಬಳಸಲಾಗುತ್ತಿದೆ. ದೇವರೆಡ್ಡಿಪಲ್ಲಿ ಮಂಗಸAದ್ರ ಕರೆಕೋಡಿಯಿಂದ ಬರುವ ನೀರು ಹಾಗು ಸಾಲುಮರದ ತಿಮ್ಮಕ್ಕ ಉದ್ಯಾನವನ ಅದರ ಸುತ್ತಮುತ್ತಲ ಪ್ರದೇಶದಿಂದ ಹರಿದು ಬರುವ ನೀರು ಇದೇ ಹಳ್ಳದ ಮೂಲಕ ಪರಗೋಡು ಹೊಸಕರೆಗೆ ಬಂದು ನಂತರ ಚಿತ್ರಾವತಿ ನದಿ ಪಾತ್ರ ಸೇರುತ್ತದೆ. ಸದರಿ ಹಳ್ಳದಲ್ಲಿ ಸರ್ಕಾರ ಈಗಾಗಲೇ ೩ ಚೆಕ್ ಡ್ಯಾಂಗಳನ್ನು ನಿರ್ಮಿಸಿದೆ. ಭೈಫ್ ಸಂಸ್ಥೆ ದನ-ಕರುಗಳಿಗೆ ನೀರು
ಸಿಗುವ ನಿಟ್ಟಿನಲ್ಲಿ ದೊಡ್ಡದಾಗಿ ನೀರು ನಿಲ್ಲುವ ವ್ಯವಸ್ಥೆ ಮಾಡಿದೆ. ಈಗ ಇವೆಲ್ಲವನ್ನು ಬಲಾಡ್ಯರು ಒತ್ತುವರಿ ಮಾಡಿಕೊಳ್ಳುತ್ತಿರುವುದನ್ನು ನೋಡಿದ ಧನಗಾಹಿಗಳು ಮತ್ತು ರೈತರು ಪ್ರಶ್ನಿಸಿದರೆ ನಮ್ಮನ್ನು ನೋಡಿಕೊಳ್ಳುತ್ತೇವೆ, ಪೊಲೀಸರ ಮೂಲಕ ಕೇಸ್ ಹಾಕಿಸುತ್ತೇವೆ. ಡಿವೈಎಸ್‌ಪಿ ಗೆಹೇಳಿ ಮುಗಿಸಿಬಿಡುತ್ತೇವೆ ಎಂದು ಬೆದರಿಕೆಯನ್ನು ಹಾಕುತ್ತಿದ್ದಾರ. ಇದರ ಜೊತೆಗೆ ಸ್ಥಳೀಯ ಕೆಲ ವ್ಯಕ್ತಿಗಳ ಮೂಲಕ ಬೆದರಿಕೆಗಳನ್ನು ಹಾಕುವುದರ ಮೂಲಕ ಬಡಪಾಯಿ ರೈತರಬಾಯಿಮುಚ್ಚಿಸುವ ಕೆಲಸವನ್ನು ಮಾಡಲಾಗುತ್ತಿದೆ, ಫೆನ್ಸಿಂಗ್ ಮುಗಿದರೆ ನಾನು ದನ
ಕರುಗಳಿಗೆ ನೀರು ಉಣಿಸುವುದಕ್ಕೆ ಸ್ಥಳವೇ ಇಲ್ಲದಂತಾಗುತ್ತದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ಹೆದ್ದಾರಿ ಪಕ್ಕದಲ್ಲಿಯೇ ಇರುವ ಸರ್ಕಾರಿ ಭೂಮಿಯನ್ನು ಅದರಲ್ಲಿಯೂ ಚೆಕ್ ಡ್ಯಾಂಗಳನ್ನೂ ಸೇರಿದಂತೆ ನೀರಿನ ಹಳ್ಳವನ್ನೇ ರಾಜಾರೋಷವಾಗಿ ಒತ್ತುವರಿ ಮಾಡಿಕೊಂಡಿರುವುದು ಆಶ್ಚರ್ಯವನ್ನುಂಟು ಮಾಡಿದ್ದು ಅಧಿಕಾರಿಗಳು ತಕ್ಷಣ ಇದರ ಬಗ್ಗೆ ತುರ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಪರಗೋಡು ಗ್ರಾಪಂ ಸದಸ್ಯ
ಡಿ.ಎನ್.ಸುಧಾಕರರೆಡ್ಡಿ ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದರು.
ನನ್ನ ತಾತ-ಮುತ್ತಾತರ ಕಾಲದಿಂದಲೂ ಈ ಪ್ರದೇಶದಲ್ಲಿ ನಾವು ದನಕರುಗಳನ್ನು ಮೇಯಿಸುತ್ತಾ, ಇಲ್ಲಿಯೇ ನೀರು ಉಣಿಸುತ್ತಾ ಬರಲಾಗುತ್ತಿದೆ. ಈಗ ಅದಕ್ಕೆ ಅವಕಾಶವಿಲ್ಲದಂತೆ ಕಾಂಪೌAಡ್ ಹಾಕಲಾಗುತ್ತಿದ್ದು ಮುಂದೆ ನಮ್ಮ ಪರಿಸ್ಥಿತಿ ಏನಾಗುತ್ತದೋ ಎಂತ ಆತಂಕ ಮನೆ ಮಾಡಿದೆ. ನಮ್ಮ ಜಾಗ ನಮಗೆ ಬಿಡಿಸಿಕೊಡಿ ಎನ್ನುತ್ತಾರೆ ಧನಗಾಹಿ ದೇವರೆಡ್ಡಿಪಲ್ಲಿಯ ನಾರಾಯಣಪ್ಪ. ತಾಲ್ಲೂಕು ಆಡಳಿತ ಇದರ ಬಗ್ಗೆ ಎಷ್ಟರ ಮಟ್ಟಿಗೆ ತುರ್ತು ಕ್ರಮ ಜರುಗಿಸಿ ಒತ್ತುವರಿಯನ್ನು ತೆರವುಗೊಳಿಸುತ್ತದೆಯೋ ಕಾದುನೋಡಬೇಕಾಗಿದೆ.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: