May 3, 2024

Bhavana Tv

Its Your Channel

ತಾಲ್ಲೂಕು ಹಾಗೂ ಜಿಲ್ಲಾಡಳಿತ ಆಡಳಿತದ ಕಾರ್ಯವೈಖರಿ ವಿರುದ್ಧ ದ.ಸಂ.ಸ. ಪ್ರತಿಭಟನೆ

ಬಾಗೇಪಲ್ಲಿ: ತಾಲ್ಲೂಕು ಡಾ.ಬಿ.ಆರ್.ಅಂಬೇಡ್ಕರ್ ಭವನ ಮತ್ತು ವಾಲ್ಮೀಕಿ ಭವನ ನಿರ್ಮಾಣ ಮಾಡುವಲ್ಲಿ ತಾಲ್ಲೂಕು ಹಾಗೂ ಜಿಲ್ಲಾಡಳಿತ ವಿಪುಲ ಸೇರಿದಂತೆ ನೀರು, ನಿವೇಶನ, ಸ್ಮಶಾನ, ಸರ್ಕಾರಿ ಸುಸಜ್ಜಿತ ಆಸ್ಪತ್ರೆ, ಸೂಕ್ತ ಚಿಕಿತ್ಸೆ, , ಭೂ ಮಂಜೂರಾತಿ ಹಾಗೂ ಇನ್ನಿತರ ಸಮಸ್ಯೆಯನ್ನು ಪರಿಹರಿಸಲು ತಾಲ್ಲೂಕು ಹಾಗೂ ಜಿಲ್ಲಾಡಳಿತ ವಿಫಲವಾಗಿದೆ ಎಂದು ಒತ್ತಾಯಿಸಿ ಗುರುವಾರ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗೂಳೂರು ವೃತ್ತದಿಂದ ತಾಲ್ಲೂಕು ಪಂಚಾಯತಿ ವರಿಗೆ ಪ್ರತಿಭಟನಾ ರ್ಯಾಲಿ ಹೊರಟು ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಮತ್ತು ತಾಲೂಕು ಆಡಳಿತದ ನಿರ್ಲಕ್ಷ್ಯದಿಂದ ಅಂಬೇಡ್ಕರ್ ಭವನ ಮತ್ತು ವಾಲ್ಮೀಕಿ ಭವನ ಕಾಮಗಾರಿ ನನೆಗುದಿಗೆ ಬಿದ್ದಿದೆ. ಎರಡು ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಕೋಟ್ಯಾಂತರ ರೂ.ಅನುದಾನ ಬಿಡುಗಡೆ ಮಾಡಿದ್ದರೂ ಅಧಿಕಾರಿಗಳು ಸ್ಥಳ ಗುರುತಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಮುಖಂಡ ಬಿ.ವಿ.ವೆಂಕಟರವಣ ಆರೋಪಿಸಿದರು.
ಅಧಿಕಾರಿಗಳನ್ನು ನಾವು ಅವರ ಸ್ವಂತ ಆಸ್ತಿ ಕೇಳುತ್ತಿಲ್ಲ, ಅಂಬೇಡ್ಕರ್ ಭವನ ಹಾಗೂ ವಾಲ್ಮೀಕಿ ಭವನ ನಿರ್ಮಾಣ ಮಾಡಲು ೪ ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ, ಆದರೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪೈಪಾಳ್ಯ ರವಿ ಮಾತನಾಡಿ ತಾಲ್ಲೂಕಿನಾದ್ಯಂತ ದಲಿತರ ಹಾಗೂ ಎಲ್ಲಾ ಜಾತಿಯ ಬಡವರಿಗೆ ಪ್ರತಿ ಗ್ರಾಮದಲ್ಲಿ ಸ್ಮಶಾನ ಜಾಗ ಗುರ್ತಿಸಿ ಅದರ ಸುತ್ತಲೂ ಬೇಲಿ ಹಾಕಬೇಕು, ದಲಿತರ ಹಾಗೂ ಬಡವರಿಗೆ ಮೂಲ ಸೌಕರ್ಯಗಳು ಸೇರಿದಂತೆ ರಸ್ತೆ, ಚರಂಡಿ, ಭೂ ಮಂಜೂರಾತಿ, ಹಾಗೂ ನಿವೇಶನ ಹಕ್ಕು ಪತ್ರಗಳು ಹಾಗೂ ಹೊಸ ರಾಷ್ಟ್ರೀಯ ಶಿಕ್ಷಣವನ್ನು ರದ್ದುಗೊಳಿಸಿ ಹಾಲಿ ಶಿಕ್ಷಣ ಪದ್ದತಿಯನ್ನು ಅನುಸರಿಸಬೇಕು,ಪ್ರತಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಲ್.ಎನ್.ನರಸಿಂಹಯ್ಯ, ಕೆ.ಸಿ.ರಾಜಾಕಾಂತ್,ಕೋಟಪ್ಪ,ಡಿ.ಕೆ.ರಮೇಶ್, ಪಿ.ನಾಗಪ್ಪ, ಜಿ.ಗಂಗಾಧರ, ಎ.ಪ್ರಕಾಶ್, ಎಂ.ವಿ.ನರಸಿAಹಪ್ಪ, ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: