May 3, 2024

Bhavana Tv

Its Your Channel

ಸೈಬರ್ ಕ್ರೈಮ್,ಬಾಲಾಪರಾಧ ಹಾಗೂ ಬಾಲ್ಯ ವಿವಾಹ ಬಗ್ಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಿದೆ:-ಗೋಪಾಲ ರೆಡ್ಡಿ

ಬಾಗೇಪಲ್ಲಿ:-ಸೈಬರ್ ಕ್ರೈಮ್, ಬಾಲಾಪರಾಧ ಮತ್ತು ಬಾಲ್ಯ ವಿವಾಹಗಳ ಬಗ್ಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಬಾಗೇಪಲ್ಲಿ ತಾಲ್ಲೂಕು ಪೋಲಿಸ್ ಠಾಣೆಯ ಆರಕ್ಷಕ ಉಪ ನಿರೀಕ್ಷರು ಗೋಪಾಲ ರೆಡ್ಡಿ ಹೇಳಿದರು.

ಅವರು ಬಾಗೇಪಲ್ಲಿ ಕಸಬಾ ಹೋಬಳಿ ಸರ್ಕಾರಿ ಪ್ರೌಢಶಾಲೆ ಘಂಟAವಾರಿಪಲ್ಲಿ ಶಾಲೆಯಲ್ಲಿ ಸೈಬರ್ , ಬಾಲ ಅಪರಾಧ ಹಾಗೂ ಬಾಲ್ಯ ವಿವಾಹದ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿ

ಈ ಹಿಂದೆ ಪೊಲೀಸ್ ಇಲಾಖೆಯಿಂದ ಶಾಲಾ-ಕಾಲೇಜುಗಳಲ್ಲಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಸಲಾಗುತ್ತಿತ್ತು. ಕೋವಿಡ್ ಬಳಿಕ ಶಾಲಾ ಕಾಲೇಜುಗಳು ಬಂದ್ ಆಗಿದ್ದರಿಂದ ಇಂತಹ ಕಾರ್ಯಕ್ರಮಗಳು ನಿಂತಿದ್ದವು. ಪ್ರಸಕ್ತ ಶಾಲಾ ಕಾಲೇಜುಗಳು ಆರಂಭಗೊAಡಿದ್ದು ಪ್ರತೀ ಶಾಲಾ ಕಾಲೇಜುಗಳಲ್ಲಿ ಸೈಬರ್ ಕ್ರೈಮ್ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಹೆಚ್ಚು ಸುಲಭವಾಗಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ಬೇರೆಲ್ಲೋ ಕುಳಿತ ಸೈಬರ್ ಕಳ್ಳರು ವಂಚನೆ ಎಸಗುತ್ತಿದ್ದಾರೆ. ಅಮಾಯಕರು ಇಂತಹ ಸೈಬರ್ ಕಳ್ಳರಿಂದ ಲಕ್ಷಾಂತರ ರೂ. ಹಣ ಕಳೆದುಕೊಳ್ಳುತ್ತಿದ್ದಾರೆ. ದೂರು ನೀಡಿದ ನಂತರ ಪೊಲೀಸರು ಅವರನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ.ಮೊಬೈಲ್??ಗೆ ಬರುವ ಕರೆಗಳು ಮೆಸೇಜ್?ಗಳಿಗೆ ಅಥವಾ ಅಪರಿಚಿತರೊಂದಿಗೆ ಬ್ಯಾಂಕ್ ಸಂಬAಧ ಪಟ್ಟ ದಾಖಲೆಗಳ ನೀಡುವುದನ್ನು ತಡೆಯಬೇಕು. ಬ್ಯಾಂಕಿAಗ್ ವ್ಯವಹಾರ ಸಂಬAಧ ಪಟ್ಟ ಮಾಹಿತಿಗಳನ್ನ ಹಂಚಿಕೊಳ್ಳದAತೆ ಜನರಲ್ಲಿ ತಿಳಿಹೇಳುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಫೇಸ್‌ಬುಕ್, ವಾಟ್ಸಾಪ್, ಒಎಲ್‌ಎಕ್ಸ್/ಕ್ವಿಕರ್, ಬ್ಯಾಂಕಿAಗ್, ಆನ್‌ಲೈನ್‌ನಲ್ಲಿ ಲಾಟರಿ/ಗಿಫ್ಟ್ ಆಫರಿಂಗ್, ಜಾಬ್ ಆಫರಿಂಗ್, ಮಾಡುವುದು, ಕಡಿಮೆ ಬಡ್ಡಿ ಸಾಲ ಕೊಡಿಸುವುದಾಗಿ ಹೇಳುವುದು, ಆನ್‌ಲೈನ್ ಶಾಪಿಂಗ್, ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ನಡೆಯುವ ಅಪರಾಧ ಚಟುವಟಿಕೆಗಳು ಸೈಬಲ್ ಕ್ರೆ?ಂ ವ್ಯಾಪ್ತಿಗೆ ಬರಲಿವೆ. ಹೀಗಾಗಿ ಈ ಮಾದರಿಗಳಲ್ಲಿ ವ್ಯವಹಾರ ನಡೆಸುವಾಗ ಸಾರ್ವಜನಿಕರು ಎಚ್ಚರ ವಹಿಸಬೇಕೆಂಬ ಸಲಹೆಗಳನ್ನು ಪೊಲೀಸ್ ಇಲಾಖೆ ನೀಡುತ್ತಿದೆ
ಅದೇ ರೀತಿ ಬಾಲ್ಯ ವಿವಾಹ ಮತ್ತು ಬಾಲಾಪರಾಧ ಬಗ್ಗೆ ಪೋಷಕರು ಜಾಗೃತಿ ವಹಿಸಿ ಇವುಗಳನ್ನು ತಡೆಯುವ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಘಂಟAವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆ ಯ ಮುಖ್ಯ ಶಿಕ್ಷಕಿ ರಾಮಸುಬ್ಬಮ್ಮ. ಜಿ.ಸಹ ಶಿಕ್ಷಕರಾದ ಎನ್.ಎನ್ ಸಂಧ್ಯಾ,ಎನ್.ಶ್ರೀನಿವಾಸ್, ಎನ್.ನಾರಾಯಣ ಸ್ವಾಮಿ, ಸಿ.ಎನ್.ನಾರಾಯಣ ಸ್ವಾಮಿ,ಎಲ್.ರವಿ,ಎಸ್. ವರಲಕ್ಷ್ಮೀ ಹಾಗೂ ರಾಮಚಂದ್ರಪ್ಪ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: