May 3, 2024

Bhavana Tv

Its Your Channel

ಹೂ ಗುಚ್ಛ ಮತ್ತು ಸಿಹಿ ನೀಡಿ ಮಕ್ಕಳನ್ನು ಸ್ವಾಗತಿಸಿದ ಬಿಇಓ ಎಸ್ ಸಿದ್ದಪ್ಪ

ಬಾಗೇಪಲ್ಲಿ:- ಮಹಾಮಾರಿ ಕೊರೊನಾದಿಂದ ರಾಜ್ಯಾದ್ಯಂತ ಮುಚ್ಚಲ್ಪಟ್ಟ ಶಾಲೆಗಳು ೨೦ ತಿಂಗಳ ಬಳಿಕ ಇಂದು ಮತ್ತೆ ಓಪೆನ್ ಆಗಿವೆ. ಸೋಮವಾರದಿಂದ ೧ ರಿಂದ ೫ ನೇತರಗತಿಗಳು ಆರಂಭವಾಗಿದ್ದು, ಖುಷಿಯಿಂದ ಶಾಲೆಗಳತ್ತ ಮಕ್ಕಳು ಬರುತ್ತಿದ್ದಾರೆ.

ಕೊರೊನಾದ ಮುಂಜಾಗ್ರತಾ ಕ್ರಮಗಳ ಜೊತೆ ವಿದ್ಯಾರ್ಥಿಗಳು ಶಾಲೆ ಮುಖ ಮಾಡಿದ್ದ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಸಿದ್ದಪ್ಪ ರವರು ಬಾಗೇಪಲ್ಲಿ ಕಸಬಾ ಹೋಬಳಿ ದೇವರಗುಡಿಪಲ್ಲಿ ಸಂಪನ್ಮೂಲ ಕೇಂದ್ರ ವ್ಯಾಪ್ತಿಯ ಮಲ್ಲಸಂದ್ರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಹೂ ಗುಚ್ಛ ಮತ್ತು ಸಿಹಿ ನೀಡುವ ಮೂಲಕ ಸ್ವಾಗತ ಕೋರಿದರು. ಇಪ್ಪತ್ತು ತಿಂಗಳ ನಂತರ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದು ತಮ್ಮ ಸ್ನೇಹಿತರನ್ನು, ಕೊಠಡಿ, ಶಿಕ್ಷಕರನ್ನು ನೋಡಿ ಸಂತಸಗೊoಡಿದ್ದಾರೆ ಹಾಗೂ ಗುರುಗಳಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಹೆಚ್ಚು ಕಡಿಮೆ ಸ್ಥಗಿತಗೊಂಡಿರುವ ಶೈಕ್ಷಣಿಕ ಚಟುವಟಿಕೆಗಳು ೧ರಿಂದ ೫ನೇ ತರಗತಿ ಶುರುವಾಗವಾಗಿವೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತವಾಗಬಾರದು ಕರ್ನಾಟಕ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ಕೋವಿಡ್ ಮೊದಲ ಅಲೆ ಪ್ರಾರಂಭಗೊAಡಾಗ ಶಾಲೆಗಳು ಮುಚ್ಚಲಾಗಿತ್ತು. ಶಾಲೆಗಳು ಬಂದ್ ಆಗಿದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ತಲೆನೋವಾಗಿ ಪರಿಣಮಿಸಿತ್ತು. ಸೋಮವಾರದಿಂದ ಶಾಲೆಗಳು ಆರಂಭವಾಗುತ್ತಿದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕೋವಿಡ್ ಮಾರ್ಗಸೂಚಿ ಅನ್ವಯ ಶಾಲೆಗಳು ನಡೆಯುತ್ತಿದೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ದೈಹಿಕ ಶಿಕ್ಷಣಾಧಿಕಾರಿ ಕೆ.ಸಿ.ಅಶ್ವಥಪ್ಪ, ಇಸಿಓ ಗಳಾದ ಆರ್.ಹನುಮಂತ ರೆಡ್ಡಿ, ಕೆ.ಬಿ.ಆಂಜನೇಯ ರೆಡ್ಡಿ, ಸಿ ಆರ್ ಸಿ ಆರ್ .ವೆಂಕಟೇಶ್ ಮುಖ್ಯ ಶಿಕ್ಷಕಿ ಪ್ರಮೀಳಾ,ವರಲಕ್ಷ್ಮೀ ಭಾಸ್ಕರ್, ರಾಮಾ ದೇವಿ, ಹಾಗೂ ಸಿಬ್ಬಂದಿ ವರ್ಗ ಎಸ್ಡಿಎಂಸಿ ಅದ್ಯಕ್ಷರು ಸದಸ್ಯರು ಹಾಜರಿದ್ದರು

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: