May 3, 2024

Bhavana Tv

Its Your Channel

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ತಾಲ್ಲೂಕು ಶಾಖೆಯಿಂದ ಆಯೋಜಿಸಿದ್ದ ೪೮ ದಿನಗಳ ೬ ನೇ ಹೊಸ ವರ್ಗದ ಯೋಗ ತರಗತಿ

ಬಾಗೇಪಲ್ಲಿ:-ಸರ್ವ ರೋಗಕ್ಕೆ ಮುದ್ದು ಯೋಗ ಎನ್ನುವಂತೆ ಮುಂಜಾವಿನ ಸಮಯದಲ್ಲಿ ಏಕಾಗ್ರತೆಯಿಂದ ಯೋಗದ ವಿವಿಧ ಆಸನಗಳನ್ನು ರೂಢಿ ಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ರೋಗ ನಮ್ಮತ್ತ ಸುಳಿಯುವದಿಲ್ಲ. ದೈನಂದಿನ ಜಂಜಾಟದ ಬದುಕಿನಲ್ಲಿ ಒಂದಿಷ್ಟು ನೆಮ್ಮದಿಯೂ ಮೂಡುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣ ರೆಡ್ಡಿ ಹೇಳಿದರು.

ಪಟ್ಟಣದ ಗಾನ ಕಲ್ಯಾಣ ಮಂಟಪದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ತಾಲ್ಲೂಕು ಶಾಖೆಯಿಂದ ಆಯೋಜಿಸಿದ್ದ ೪೮ ದಿನಗಳ ೬ ನೇ ಹೊಸ ವರ್ಗದ ಯೋಗ ತರಗತಿಗಳನ್ನು ಉದ್ಘಾಟಸಿ ಮಾತನಾಡಿದರು.

ಮಾನಸಿಕ ಒತ್ತಡದಲ್ಲಿ ನಾವು ಜೀವನ ಸಾಗಿಸುತ್ತಿದ್ದೇವೆ. ಎಲ್ಲರಿಗೂ ಅತ್ಯವಶ್ಯಕವಾಗಿ ಯೋಗವೇ ಅದರ ಮಾರ್ಗವಾಗಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಬೆಳಗಿನ ಸಮಯದಲ್ಲಿ ನಾವು ಇಂದಿಷ್ಟು ಯೋಗಾಭ್ಯಾಸದ ಕಡೆ ಸಮಯ ನಿಗದಿಪಡಿಸಿ ಅದರಲ್ಲಿ ಮಗ್ನರಾದರೆ ಮತ್ತಷ್ಟು ಆರೋಗ್ಯ ಸುಧಾರಿಸುವುದೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಮನ್ವಯ ಅಧಿಕಾರಿ ವೆಂಕಟರಾಮಪ್ಪ ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಎಚ್.ಎಸ್. ಮದನ ಮೋಹನ್, ಯೋಗ ಶಿಕ್ಷಕರಾದ ಎಸ್. ಮುನಿರಾಮಯ್ಯ,ನಾರಾಯಣ ಸ್ವಾಮಿ, ರಾಮಚಂದ್ರಪ್ಪ,ಸನತ್ ಕುಮಾರ್, ಮುನಿರಾಜು, ಅಶ್ವಥಪ್ಪ, ಮರಿರಾಜು,ಸಂಜೀವಪ್ಪ,ನಿಡುಮಾಮಿಡಪ್ಪ,ಚAದ್ರೇ ನಾಯಕ್,ಸುಧಾಮಣಿ,ರಾಧಮ್ಮ, ಸರಸ್ವತಮ್ಮ ಇದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: