May 3, 2024

Bhavana Tv

Its Your Channel

ಕರವೇ ಬಾಗೇಪಲ್ಲಿ ತಾಲ್ಲೂಕು ಘಟಕದ ವತಿಯಿಂದ ಚಿತ್ರಾವತಿ ನದಿ ಡ್ಯಾಂ ಗೆ ಬಾಗೀನ ಅರ್ಪಣೆ

ಬಾಗೇಪಲ್ಲಿ:-ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಕರೆಗಳಿಗೆ ಜೀವಕಳೆ ಬಂದಿದೆ ಬಾಗೇಪಲ್ಲಿ ತಾಲ್ಲೂಕು ಐತಿಹಾಸಿಕ ಚಿತ್ರಾವತಿ ಡ್ಯಾಂ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಕರವೇ ತಾಲ್ಲೂಕು ಘಟಕ ಹಾಗೂ ಕಾರ್ಯಕರ್ತರು ಮಂಗಳವಾರ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಕೆರೆಗೆ ನವಧಾನ್ಯ, ಬಳೆ ಬಿಚ್ಚೋಲೆ, ರವಿಕೆ ಕಣ, ಹರಿಶಿನ ಕುಂಕುಮ ಹಾಗೂ ತಾಂಬೂಲ ಮೂಲಕ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಸಮರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಕೆ.ಎನ್.ಹರೀಶ್ ಮಾತನಾಡಿ ಸರ್ಕಾರ ಕೆರೆಗಳ ಹೂಳು ತೆಗೆದು ನಾಲೆಗಳ ದುರಸ್ತಿ ಮಾಡಲು ಮೊದಲ ಆದ್ಯತೆ ನೀಡಬೇಕು. ಕೆರೆಗಳಲ್ಲಿ ಹೂಳು ತುಂಬಿದ್ದು, ಅದನ್ನು ತೆರವುಗೊಳಿಸಿ ಅಂತರ್ಜಲ ಹೆಚ್ಚಳ ಮಾಡಬೇಕು, ಚಿತ್ರಾವತಿ ಡ್ಯಾಂ ಅನ್ನು ಪ್ರವಾಸೋದ್ಯಮ ಯನ್ನಾಗಿ ಮಾಡಬೇಕು ಎಂದು ಒತ್ತಾಯಸಿದರು.

ಕರವೇ ಗೂ ಚಿತ್ರಾವತಿ ಅಣೆಕಟ್ಟುಗೂ ಅವಿನಾಭಾವ ಸಂಬAಧವಿದೆ. ೨೦೦೧ರಲ್ಲಿ ಅಣೆಕಟ್ಟು ಕಟ್ಟುವ ಸಂದರ್ಭದಲ್ಲಿ ಆಂಧ್ರಪ್ರದೇಶದ ಸರ್ಕಾರ ಕಟ್ಟಲು ಅಡ್ಡಿಯನ್ನು ಪಡಿಸುತ್ತು ಈ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ್ರು ಬೆಂಗಳೂರು ನಗರದಿಂದ ಬಾಗೇಪಲ್ಲಿ ಭಾಗ್ಯನಗರ ವರೆಗೂ ಸಾವಿರಾರು ಕರವೇ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ಬಂದು ಬಾಗೇಪಲ್ಲಿ ತಾಲ್ಲೂಕು ಆಡಳಿತಕ್ಕೊ ಮತ್ತು ಸ್ಥಳೀಯ ಜನರಿಗೆ ಧೈರ್ಯ ತುಂಬಿದ ಪ್ರತಿಫಲವಾಗಿ ಇಲ್ಲಿ ಅಣೆಕಟ್ಟು ಕಟ್ಟಲು ಸಹಕಾರಿಯಾಯಿತು ಎಂದು ಹೇಳಿದರು

ಈ ಸಂದರ್ಭದಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಿಯಾಜ್ ಉಲ್ಲಾ , ಜಿಲ್ಲಾ ಉಪಾಧ್ಯಕ್ಷ ರಾಮರೆಡ್ಡಿ , ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ , ತಾಲ್ಲೂಕು ಖಜಾಂಚಿ ನಾರಾಯಣ ಸ್ವಾಮಿ , ನಗರ ಘಟಕದ ಅಧ್ಯಕ್ಷ ಕೆ.ಶ್ರೀನಿವಾಸ್ , ತಾಲ್ಲೂಕು ಮುಖಂಡರಾದ ಲಾಡ್ಜ್ ಮಂಜು , ಶಿವಕುಮಾರ್ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: