April 28, 2024

Bhavana Tv

Its Your Channel

ಕಸ,ತ್ಯಾಜ್ಯ ನಿರ್ವಹಣೆಯಲ್ಲಿ ಪುರಸಭೆ ಸಂಪೂರ್ಣ ವಿಫಲ, ಸಾರ್ವಜನಿಕರ ಆಕ್ರೋಶ

ಬಾಗೇಪಲ್ಲಿ: ಪುರಸಭೆ ವ್ಯಾಪ್ತಿಯ ೯ ನೇ ವಾಡ್ ðನ ರಸ್ತೆಗಳ ಅಭಿವೃದ್ದಿ ಹಾಗೂ ಸ್ವಚ್ಚತೆ ವಿಚಾರದಲ್ಲಿ ಕಣ್ಣಿದ್ದರೂ ಕುರುಡುತನ ಪ್ರದರ್ಶಿಸುತ್ತಿರುವ ಪುರಸಭೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ತಾತ್ಸಾರ ಧೋರಣೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಕನಿಷ್ಠ ಮೂಲ ಭೂತಸೌಲಭ್ಯಗಳು ಕಲ್ಪಿಸುವಂತೆ ಪುರಸಭೆಯನ್ನು ಒತ್ತಾಯಿಸಿದ್ದಾರೆ.
ಪುರಸಭೆ ವ್ಯಾಪ್ತಿಯ ೨೩ ವಾರ್ಡ್ಗಳ ಸ್ವಚ್ಚತೆ, ರಸ್ತೆ ನಿರ್ವಹಣೆ, ಪೌರ ಕಾರ್ಮಿಕರ ನಿರ್ವಹಣೆ ವೆಚ್ಚ, ಕುಡಿಯವ ನೀರು ಸರಬರಾಜು, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಇತರೆ ತೆರಿಗೆ ವೆಚ್ಚಗಳನ್ನು ಸೇರಿಸಿಕೊಂಡು ವರ್ಷದ ಏಪ್ರಿಲ್ ತಿಂಗಳಲ್ಲಿ ಕಡ್ಡಾಯವಾಗಿ ಸಾರ್ವಜನಿಕರಿಂದ ಕಂದಾಯ ರೂಪದಲ್ಲಿ ತೆರಿಗೆ ಹಣ ವಸೂಲಿ ಮಾಡುತ್ತಿರುವ ಪುರಸಭೆ ಆಡಳಿತ ಮಂಡಳಿ ಪಟ್ಟಣದ ನಾಗರೀಕರಿಗೆ ಮೂಲಭೂತ ಸೌಲಭ್ಯಗಳು ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು,
ಪಟ್ಟಣದ ೯ ನೇ ವಾರ್ಡ್ನ ಸಬ್ ರಿಜಿಸ್ಟಾರ್ ಕಚೇರಿ ಪಕ್ಕದ ರಸ್ತೆ ಹಾಗೂ ಬಿಜಿಎಸ್ ಶಾಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿರುವ ರಸ್ತೆ ಹಾಗೂ ಮನೆ ಅಂಗಳಗಳಿಗೆ ಚರಂಡಿಗಳ ಕೊಳಚೆ ನೀರು ನುಗ್ಗಿ ರಸ್ತೆಗಳು ಸಂಪೂರ್ಣ ಹದಗೆಟ್ಟು ಕೆಸರು ಗದ್ದೆಗಳಾಗಿವೆ. ಚರಂಡಿಯ ನೀರು ರಸ್ತೆ ಹಾಗೂ ಮನೆಗಳ ಮುಂಭಾಗದಲ್ಲಿ ಶೇಖರಣೆಗೊಂಡು ರಸ್ತೆಗಳು ಸಂಪೂರ್ಣ ಕೊಳಚೆ ನೀರಿನಿಂದ ಜಲಾವೃತಗೊಂಡು ಗಬ್ಬು ವಾಸನೆ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳ ತಾಣವಾಗುತ್ತಿವೆ. ಕೆಸರು ಮಯವಾಗಿರುವ ರಸ್ತೆಯಲ್ಲಿ ವಾಹನ ಚಲಾಯಿಸಲು ಕಷ್ಟವಾಗಿದ್ದು, ಈ ಭಾಗದಲ್ಲಿರುವ ನಿವಾಸಿಗಳು ಹಾಗೂ ಬಿಜಿಎಸ್ ಶಾಲೆ ಮತ್ತು ವರದಾಧ್ರಿ ಕಾಲೇಜುಗೆ ಹೋಗುವ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದ್ದು ಸುತ್ತಿ ಬಳಸಿ ಮನೆ ಮತ್ತು ಶಾಲಾ ಕಾಲೇಜುಗಳಿಗೆ ಹೋಗುವ ದುಸ್ಥಿತಿ ಎದುರಾಗಿದೆ.
ಪಟ್ಟಣದ ೯ ನೇ ವಾರ್ಡ್ನಲ್ಲಿರುವ ರಸ್ತೆ ಹಾಗೂ ಕೊಳಚೆ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರು ಜಿಲ್ಲಾಧಿಕಾರಿಗಳಾದ ಆರ್.ಲತಾ ಹಾಗೂ ವಾರ್ಡ್ನ ಪುರಸಭೆ ಸದಸ್ಯರಾದ ಎ.ನರಸಿಂಹಮೂರ್ತಿ ಗಮನಕ್ಕೂ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರ ಆರೋಪವಾಗಿದೆ.
ಪಟ್ಟಣದ ೮ ಮತ್ತು ೯ ನೇ ವಾರ್ಡನಲ್ಲಿರುವ ಕಾಲುವೆ ಮತ್ತು ಚರಂಡಿ ನಿರ್ವಹಣೆಯಲ್ಲಿ ಪುರಸಭೆ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದ್ದು, ಕಾಲುವೆಗಳ ಮೂಲಕ ಹರಿಯಬೇಕಾಗಿರುವ ಕೊಳಚೆ ನೀರು ರಸ್ತೆಗಳಿಗೆ ಬಂದು ನಿಲ್ಲುತ್ತಿವೆ, ಓಳಚರಂಡಿ ಕಾಮಗಾರಿ ನಡೆಸುವ ಸಮಯದಲ್ಲಿ ರಸ್ತೆಗಳನ್ನು ಜೆಸಿಬಿಗಳಿಂದ ಹಗೆದು ಹಾಳು ಮಾಡಿ ರಸ್ತೆಗಳನ್ನು ದುರಸ್ಥಿಗೊಳಿಸದ ಕಾರಣ ರಸ್ತೆಗಳು ಹದೆಗೆಟ್ಟಿವೆ. ಸಂಬoಧಪಟ್ಟ ಅಧಿಕಾರಿಗಳು ಕಾಲುವೆಗಳ ಸ್ವಚ್ಚತೆ ಹಾಗೂ ರಸ್ತೆಗಳ ದುರಸ್ಥಿಗೆ ಮುಂದಾಗಬೇಕಾಗಿದೆ ಎಂದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: