April 28, 2024

Bhavana Tv

Its Your Channel

ಭರದಿಂದ ಸಾಗಿದ “ಪಾಲಾರ್” ಸಿನಿಮಾದ ಚಿತ್ರೀಕರಣ

ಬಾಗೇಪಲ್ಲಿ: ತಾಲ್ಲೂಕಿನ ಗುಂಡ್ಲಪಲ್ಲಿ, ಜಿಲಕರಪಲ್ಲಿ, ಗಡಿದಂ ಸೇರಿದಂತೆ ಹಲವು ಗ್ರಾಮಗಳಲ್ಲಿ ಕನ್ನಡ ಸಿನಿಮಾವೊಂದರ ಚಿತ್ರೀಕರಣ ಭರದಿಂದ ಸಾಗಿದೆ. ಮಹಿಳಾ ಪ್ರಧಾನವಾದ ಚಿತ್ರ ಇದಾಗಿದ್ದು, ಬಾಗೇಪಲ್ಲಿ ಜನರ ಬದುಕಿನ ಬಗೆಯನ್ನು ತೋರಿಸುವ ಚಿತ್ರವಾಗಲಿದೆ ಎಂದು ಮೂಲಗಳು ತಿಳಿಸಿವೆ. ಬಾಗೇಪಲ್ಲಿ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು ಮೂರ್ನಾಲ್ಕು ದಶಕಗಳ ಹಿಂದೆ ವರ್ಗೀಕೃತ ಸಮಾಜ ಹೇಗೆ ಇತ್ತು. ನಿತ್ಯವೂ ತಳಸಮುದಾಯಗಳ ಜನರ ಬದುಕಿನ ಬಂಡಿ ಹೇಗೆ ಉರುಳುತ್ತಿತ್ತು ಎಂಬುದರ ಬಗ್ಗೆ ಸಿನಿಮಾ ಒಳಗೊಳ್ಳಲಿದೆ ಎನ್ನಲಾಗಿದೆ.

ಇತಿಹಾಸದಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಜನರ ಬದುಕು,ಬವಣೆಗಳನ್ನೆ ಮುಂದಿಟ್ಟುಕೊAಡು ಸಿನಿಮಾ ಮಾಡುತ್ತಿರುವುದು ಇದೇ ಮೊದಲು. ಈ ಸಿನಿಮಾದಲ್ಲಿ ನಟಿಸುತ್ತಿರುವವರು ಬಹುತೇಗ ಕಲಾವಿದರು ಅವಿಭಜಿತ ಕೋಲಾರ ಜಿಲ್ಲೆಯವರು ಸೇರಿದಂತೆ ಹೆಚ್ಚಿನವರು ಬಾಗೇಪಲ್ಲಿ ತಾಲ್ಲೂಕಿನವರೇ ಆಗಿರುವುದು ಈ ಚಿತ್ರದ ಮತ್ತೊಂದು ವಿಶೇಷ.

ಈ ಸಿನಿಮಾ ಚಿತ್ರೀಕರಣಕ್ಕೆ ಕಲಾವಿದರ ಆಯ್ಕೆಗಾಗಿ ಮೊದಲು ಬಾಗೇಪಲ್ಲಿಯನ್ನೆ ಕೇಂದ್ರವಾಗಿಟ್ಟುಕೊoಡು ಆಡಿಷನ್ ಮಾಡಿದ ಹೆಗ್ಗಳಿಕೆಯೂ ಈ ಚಿತ್ರತಂಡಕ್ಕೆ ಸಲ್ಲುತ್ತದೆ. ಕಳೆದ ಅಕ್ಟೊಬರ್ ೦೩ ರಂದು ಪಟ್ಟಣದ ವಿಕಾಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆಸಲಾಗಿತ್ತು. ಸ್ಥಳೀಯ ಕಲಾ ಪ್ರತಿಭೆಗಳಿಗೆ ಮೊದಲ ಪ್ರಾಶಸ್ತ್ಯ ನೀಡಿ ಆಯ್ಕೆ ಪ್ರಕ್ರಿಯೆ ನಡೆದಿತ್ತು. ನಂತರ ಅಕ್ಟೋಬರ್ ೧೦ ರಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಿ ಸುಮಾರು ೨೦ ಕ್ಕೂ ಹೆಚ್ಚು ದಿನಗಳ ಕಾಲ ನಡೆಯಿತು.

ಈ ಚಿತ್ರಕ್ಕೆ “ಪಾಲಾರ್” ಎಂದು ಹೆಸರಿಡಲಾಗಿದೆ. ಇದು ಸೌನವಿ ಕ್ರಿಯೇಷನ್ಸ್ ಬ್ಯಾನರ್ ನ ಅಡಿಯಲ್ಲಿ ನಡೆಯುತ್ತಿದೆ. ಪಾಲಾರ್ ಎಂಬುದು ನದಿಯ ಹೆಸರಾಗಿದ್ದು,ಈ ಹೆಸರೂ ಕೂಡ ಸ್ಥಳೀಯತೆಯನ್ನು ತೋರಿಸುತ್ತದೆ. ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರುವುದು ಗೌರಿಬಿದನೂರಿನ ನವೀನ್ ಕುಮಾರ್ ನಾಯಕ. ಚಿತ್ರಕ್ಕೆ ಕತೆ, ಚಿತ್ರಕತೆ ,ನಿರ್ದೇಶನದ ಜವಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಇವರು ನಿರ್ದೇಶನ ಮಾಡುತ್ತಿರುವ ೨ ನೇ ಚಿತ್ರ ಇದಾಗಿದೆ. ಈಗಾಗಲೇ ಬಿಡುಗಡೆಗೆ ಸಿದ್ದವಾಗಿರುವ “ನೈಟ್ಮೇರ್ ” ಚಿತ್ರದ ನಾಯಕನಟ ಹಾಗೂ ನಿರ್ದೇಶಕರೂ ಆಗಿರುವ ನವೀನ್ ಕುಮಾರ್ ನಾಯಕರವರಿಗೆ ಅವಿಭಜಿತ ಕೋಲಾರ ಜಿಲ್ಲೆಯ ಬಗೆಗಿನ ಅತೀವ ಪ್ರೀತಿ ಹಾಗೂ ಇಲ್ಲಿನ ಜನರ ಬದುಕನ್ನು ಸಿನಿಮಾ ಮಾಡುತ್ತಿರುವುದಕ್ಕೆ ಹಲವು ಸಂಘಟನೆಗಳ ಮುಖಂಡರಿAದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರ ಚಿತ್ರವೂ ಬೇಗ ಚಿತ್ರೀಕರಣ ಮುಗಿಸಿಕೊಂಡು, ಚಿತ್ರಮಂದಿರಗಳಿಗೆ ಬಿಡುಗಡೆಯಾಗಿ ಭರ್ಜರಿ ಗೆಲುವನ್ನು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.

ಚಿತ್ರತಂಡದಲ್ಲಿ ನಾಯಕನಟ ತಿಲಕ್, ಗಾಯಕಿಯಾಗಿರುವ ನಾಯಕನಟಿ ವೈ.ಜಿ ಉಮಾ, ಛಾಯಗ್ರಾಹಕ ಆಸೀಫ್, ಪರಮ್ ,ವಿಜಯ್, ಕಪಿಲ್, ಬಾಲಾಜಿ, ಹರಿಕೃಷ್ಣ, ಸುಷ್ಮಿತ, ಗಣೇಶ್ , ಅನಿಲ್ , ಪರಮೇಶ್ ,ಸನುಪ್ ಮತ್ತಿತರ ಕಲಾವಿದರು, ತಂತ್ರಜ್ಞರು ಭಾಗವಹಿಸಿದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: