May 3, 2024

Bhavana Tv

Its Your Channel

ಡಾ.ರಂಗಾರೆಡ್ಡಿ ಕೋಡಿರಾಂಪುರ ನುಡಿ ನಮನ

ಬಾಗೇಪಲ್ಲಿ : ಪಟ್ಟಣದ ಪ್ರಥಮದರ್ಜೆ ಕಾಲೇಜಿನಲ್ಲಿ ದಿವಂಗತ ರಂಗಾರೆಡ್ಡಿ ಕೋಡಿರಾಂಪುರo ರವರು ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು,
ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ. ನಯಾಜ್ ಪ್ರಾಸ್ತಾವಿಕ ಭಾಷಣ ಮಾತನಾಡಿ, ತಾನು ಪಿಎಚ್.ಡಿ. ಮಾಡುವ ಸಂದರ್ಭದಲ್ಲಿ ಜಾತಿ, ಧರ್ಮದ ಕಾರಣಕ್ಕೆ ನಾನು ಅಲ್ಪಸಂಖ್ಯಾತ ಆಗಿದ್ದರಿಂದ ನನಗೆ ಪಿಎಚ್ ಡಿ ಪದವಿಗೆ ಮಾರ್ಗದರ್ಶನ ಮಾಡಲು ಬಹಳಷ್ಟು ಜನ ನಿರಾಕರಿಸಿದಾಗ ನನ್ನ ಜೀವನದ ಉತ್ಸಾಹವೇ ಕುಂದು ಹೋಗಿತ್ತು.
ಅಂತಹಾ ಸಂಕಷ್ಟದ ಸಮಯದಲ್ಲಿ ನನ್ನ ಕೈ ಹಿಡಿದು ಸತತ ೫ ವರ್ಷಗಳ ಕಾಲ ನನ್ನ ಸಂಶೋಧನೆಗೆ ಮಾರ್ಗದರ್ಶನ ಮಾಡಿ ಪಿ ಎಚ್ ಡಿ ಪದವಿ ಕೊಡಿಸಿ ನನಗೆ ಮಾರ್ಗದರ್ಶನ್ನು ನೀಡಿದರು.
ನನಗಷ್ಟೇ ಅಲ್ಲ ನನ್ನಂತಹ ಹಲವಾರು ಹಿಂದುಳಿದ, ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ತಾವು ಮಾಡಿದ ಸಹಾಯ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.
ಡಾ. ರಂಗಾರೆಡ್ಡಿ ಕೋಡಿರಾಂಪುರರವರೆ ನನ್ನ ಕೀರ್ತಿ, ಸಾಧನೆ ಎಲ್ಲವೂ ನಿಮ್ಮದೆ ಎಂದು ನುಡಿ ನಮನ ಸಲ್ಲಿಸಿದರು.
ನ್ಯಾಷನಲ್ ಕಾಲೇಜು ನಿವೃತ್ತ ಕನ್ನಡ ವಿಭಾಗದ ಮುಖ್ಯಸ್ಥ ಎ.ಕೆ.ನಿಂಗಪ್ಪ ಮಾತನಾಡಿ
ಸಾಹಿತಿ ರಂಗಾರೆಡ್ಡಿ ಕೋಡಿರಾಂಪುರ ರವರು

ಕನ್ನಡ ಸಾಹಿತಿ,ಜನಪದ ತಜ್ಞ, ಪ್ರಗತಿಪರ ಚಿಂತಕ,ಹೋರಾಟಗಾರ ಪ್ರಾಧ್ಯಾಪಕರಾದ ರಂಗಾರೆಡ್ಡಿ ಕೋಡಿರಾಂಪುರ ರವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಕೋಡಿರಾಂಪುರದ ಅವರು ಗೌರಿಬಿದನೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಿವೃತ್ತಿ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು.
ಜನಪದ ಸಂಸ್ಕೃತಿ, ಸಾಲು ಹೊಂಗೆಯ ತಂಪು, ಬಂಡಾಯ ಜನಪದ, ನನ್ನೂರ ಹಾಡು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದರು.
ಚಿಕ್ಕಬಳ್ಳಾಪುರದಲ್ಲಿ ೨೦೧೫ರಲ್ಲಿ ನಡೆದ ಚಿಕ್ಕಬಳ್ಳಾಪುರ ಜಿಲ್ಲಾ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಯಕ್ಷಗಾನ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಜಾನಪದ ಅಕಾಡೆಮಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ ಎಂದು ಹೇಳಿದರು
ಎ.ಜಿ. ಸುಧಾಕರ್ ಮಾತನಾಡಿ, ಗುರು ಆದವರು ರಂಗಾರೆಡ್ಡಿ ಕೋಡಿರಾಂಪುರA ರವರಂತೆ ಇರಬೇಕು ಎಂದರು. ಬಿ.ಆರ್. ಕೃಷ್ಣ ಮಾತನಾಡಿ ರಂಗಾರೆಡ್ಡಿ ಕೋಡಿರಾಂಪುರA ರವರು ವೈಚಾರಿಕ ತತ್ವ ಸಿದ್ಧಾಂತಗಳ ನೆಲೆಗಟ್ಟಿನಲ್ಲಿ ಕೆಲಸ ಮಾಡಿದವರು ಎಂದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ನಾರಾಯಣಪ್ಪ, ವೆಂಕಟರಾಮರೆಡ್ಡಿ,ಹಸಿರು ಸೇನೆ ರೈತ ಮುಖಂಡೆ ಸಿ.ಉಮಾ,ಪತ್ರಕರ್ತರಾದ ಪಿ.ಎಸ್. ರಾಜೇಶ್,ರಾ.ನ.ಗೋಪಾಲ ರೆಡ್ಡಿ, ಆಸ್ಪಿಯಾ ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.
ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: