May 3, 2024

Bhavana Tv

Its Your Channel

ಮಕ್ಕಳ ಗ್ರಾಮ ಸಭೆ ನಡೆಸುವ ಹಿನ್ನೆಲೆ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಪೂರ್ವಭಾವಿ ಸಭೆ

ಬಾಗೇಪಲ್ಲಿ:– ಪ್ರತಿ ವರ್ಷ ಮಕ್ಕಳ ಗ್ರಾಮ ಸಭೆ ನಡೆಸುವ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂ ಗಣದಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಯಿತು.

ಘಂಟAವಾರಿಪಲ್ಲಿ ಗ್ರಾಮ ಪಂಚಾಯತಿ ಪಿಡಿಒ ನಾರಾಯಣ ಸ್ವಾಮಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಮಕ್ಕಳ ಸ್ಥಿತಿ-ಗತಿ ಕುರಿತು ಚರ್ಚಿಸಿ, ವಿಶ್ಲೇಷಿಸಿ ಪಂಚಾಯಿತಿ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸರಕಾರ ಕಳೆದ ಮೂರು ವರ್ಷದಿಂದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ಹಮ್ಮಿಕೊಂಡಿದೆ ಮುಂದಿನ ತಿಂಗಳು ನವೆಂಬರ್ ನಲ್ಲಿ ಎಲ್ಲಾ ಗ್ರಾಮ ಪಂಚಾಯತಿಯಲ್ಲಿ ಮಕ್ಕಳ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು ಈ ಪೂರ್ವಭಾವಿ ಸಭೆಯಲ್ಲಿ ನಲ್ಲಪ್ಪರೆಡ್ಡಿ ಪಲ್ಲಿ,ಗೂಳೂರು,
ತಿಂಮ್ಮAಪಲ್ಲಿ,ಗೊರ್ತಪಲ್ಲಿ,ಪರಗೋಡು, ದೇವರಗುಡಿಪಲ್ಲಿ, ಯಲ್ಲಂಪಲ್ಲಿ, ಮಾರ್ಗಾನುಕುಂಟೆ,ಪಾತಪಾಳ್ಯ, ತೊಳ್ಳಪಲ್ಲಿ ಗ್ರಾಮ ಪಂಚಾಯತಿ ಗಳ ಪಿಡಿಓಗಳು,ಸಿ.ಆರ್.ಸಿ.ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಈ ಸಭೆ ಯಲ್ಲಿ ಪಾಲ್ಗೊಂಡು ಮಾಹಿತಿಯನ್ನು ಪಡೆದರು.
ಈ ಸಂದರ್ಭದಲ್ಲಿ ಬಿಇಓ ಎಸ್ ಸಿದ್ದಪ್ಪ, ಸಿ.ಆರ್.ಸಿ.ಬಾಲರಾಜು,ಘಂಟAವಾರಿಪಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ರಾಮಸುಬ್ಬಮ್ಮ .ಜಿ,
ಶಿಲ್ಪಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಇತರರು ಇದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: