May 3, 2024

Bhavana Tv

Its Your Channel

ಮಾತೃಭಾಷೆಯಲ್ಲಿ ವ್ಯವಹರಿಸಿದಾಗ ಮಾತ್ರ ಭಾಷೆ ಉಳಿವು:-ಬಿ.ಟಿ. ಶ್ರೀನಿವಾಸ್

ಬಾಗೇಪಲ್ಲಿ:- ವರ್ಷಕ್ಕೊಮ್ಮೆ ರಾಜ್ಯೋತ್ಸವದ ಹೆಸರಿನಲ್ಲಿ ಹಬ್ಬ ಆಚರಿಸಿದ ಮಾತ್ರಕ್ಕೆ ಭಾಷೆ ಉಳಿಯುವುದಿಲ್ಲ. ಬದಲಿಗೆ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಮಾತನಾಡುವುದು ಸೇರಿದಂತೆ ಮಾತೃಭಾಷೆಯಲ್ಲಿ ವ್ಯವಹರಿಸಿದಾಗ ಮಾತ್ರ ಭಾಷೆ ಉಳಿಯುತ್ತದೆ ಎಂದು ಕರವೇ ಸ್ವಾಭಿಮಾನ ಬಣ ಬಾಗೇಪಲ್ಲಿ ತಾಲ್ಲೂಕು ಘಟಕ ಅದ್ಯಕ್ಷ ಬಿ.ಟಿ.ಶ್ರೀನಿವಾಸ್ ಹೇಳಿದರು

ಆವರು ಬಾಗೇಪಲ್ಲಿ ಪಟ್ಟಣದ ಪುರಸಭೆ ಮುಂಭಾಗದಲ್ಲಿ ೬೬ ನೇ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜ್‌ಕುಮಾರ್ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪುನೀತ್ gಜ್ಜ್ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಮನೋಜ್ಞ ನಟನೆ, ಸರಳತೆ ಹಾಗು ಆತ್ಮೀಯ ಗುಣಗಳಿಂದ ಪುನೀತ್ ರಾಜ್‌ಕುಮಾರ್ ನಾಡಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದಿಗೆ ಅಪ್ಪು ಇಹಲೋಕವನ್ನಗಲಿ ೧೧ ದಿನಗಳು ಕಳೆದಿದ್ದು, ಕುಟುಂಬಸ್ಥರು ಪುಣ್ಯತಿಥಿ ಆಚರಿಸಿದರು. ರಾಜ್ಯದ ನಾನಾಕಡೆಗಳಲ್ಲೂ ಪುಣ್ಯಸ್ಮರಣೆ ಕಾರ್ಯಕ್ರಮಗಳು ನಡೆಯುತ್ತಿದ್ದು ಕರವೇ ಸ್ವಾಭಿಮಾನ ಬಣ ಬಾಗೇಪಲ್ಲಿ ತಾಲ್ಲೂಕು ಘಟಕ ವತಿಯಿಂದ ಪುನೀತ್ ರಾಜ್‌ಕುಮಾರ್ ನುಡಿ ನಮನ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಪುನೀತ್ gಜ್ಜ್ಕುಮಾರ್ ರವರ ಪುಣ್ಯಸ್ಮರಣೆ ಅಂಗವಾಗಿ ಕರವೇ ಸ್ವಾಭಿಮಾನ ಬಣ ಬಾಗೇಪಲ್ಲಿ ತಾಲ್ಲೂಕು ಘಟಕ ವತಿಯಿಂದ ಕನ್ನಡ ನೆಲ ಜಲ ಬಾಷೆ,ಸಂಸ್ಕೃತಿ ಹಾಗೂ ವಿವಿಧ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಸಾಧಕರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು, ಪುನೀತ್ ರಾಜ್‌ಕುಮಾರ್ ರವರ ಪುಣ್ಯ ತಿಥಿ ಅಂಗವಾಗಿ
ಅನ್ನಸAತರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ ಕಲಿಕಾ ಉಪಕರಣಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನ ವೇದಿಕೆ ಪ್ರಧಾನ ಕಾರ್ಯದರ್ಶಿ ಜಬೀವುಲ್ಲಾ ಖಾನ್ , ನಗರ ಘಟಕ ಅಧ್ಯಕ್ಷರು ಸುರೇಶ್ ಬಾಬು, ವಿದ್ಯುತ್ ತಂತಿ ರಿಪೇರಿ ಗಾರರ ಘಟಕ ಅಧ್ಯಕ್ಷರು ಅಬ್ದುಲ್ ಮುಜೀಬ್, ದ್ವಿಚಕ್ರ ವಾಹನ ರಿಪೇರಿಗಾಗಿ ಅಧ್ಯಕ್ಷರು ಜಾವೀದ್, ರವಿ ಯಾದವ್, ಚಂದ್ರು, ರೇವಣ್ಣ, ನಾರಾಯಣ ರೆಡ್ಡಿ ವಿಮಲಾ ಚಂದ್ರಶೇಖರ್ ಮುಂತಾದವರು ಭಾಗವಹಿಸಿದ್ದರು.

ವರದಿ: ಗೋಪಾಲರೆಡ್ಡಿ ಬಾಗೇಪಲ್ಲಿ

error: