December 9, 2022

Bhavana Tv

Its Your Channel

ಎಡಬಿಡದೆ ಸುರಿಯುತ್ತಿರುವ ಮಳೆಯ ಹಿನ್ನೆಲೆ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ೨ ದಿನ ರಜೆ ಘೋಷಣೆ

ಬಾಗೇಪಲ್ಲಿ:- ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಪ್ರಸ್ತುತ ಎಡಬಿಡದೆ ವ್ಯಾಪಕವಾಗಿ ಮಳೆ ಯಾಗುತಿದ್ದು, ಹಾಗೂ ಹವಾಮಾನ ಇಲಾಖೆಯ ವರದಿಯಂತೆ ಇನ್ನೂ ಎರಡು ದಿನಗಳ ಕಾಲ ಸತತವಾಗಿ ಮಳೆ ಮುಂದುವರೆಯುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಲು ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ
ಚಿಕ್ಕಬಳ್ಳಾಪುರ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಆರ್.ಲತಾ ಮೌಖಿಕ ಆದೇಶ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಾನ್ಯ ಉಪ ನಿರ್ದೇಶಕರಾ ಎಂ.ಜಯರಾಮ ರೆಡ್ಡಿ ಸತತವಾಗಿ ಮಳೆ ಬೀರುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶಾಲೆಗೆ ಹಾಜರಾಗಲು ಸಾಧ್ಯ ವಿಲ್ಲದ ಕಾರಣ ಮಕ್ಕಳ ಹಿತದೃಷ್ಟಿಯಿಂದ ದಿನಾಂಕ ೧೯ /೧೧/ ೨೦೨೧ ಹಾಗೂ ೨೦/ ೧೧/ ೨೦೨೧ ರಂದು ಎರಡು ದಿನಗಳ ಕಾಲ ಜಿಲ್ಲೆಯ ಎಲ್ಲಾ ಶಾಲಾಗಳಿಗೆ ರಜೆ ಘೋಷಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಗೊಳಪಡುವ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಎರಡು ದಿನ ರಜೆಯನ್ನು ಘೋಷಿಸಲಾಗಿದೆ,

ಈ ಎರಡು ದಿನಗಳ ರಜಾ ಅವಧಿಯನ್ನು ಮುಂದೆ ಯಾವುದಾದರೂ ಎರಡು ರಜಾ ದಿನಗಳುಂದು ಸರಿದೂಗಿಸಿಕೊಳ್ಳುವ ಈ ಮೂಲಕ ಸೂಚಿಸುತ್ತದೆ.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

About Post Author

error: