May 23, 2024

Bhavana Tv

Its Your Channel

ಮಂಕಿಯಲ್ಲಿ ತಾಲ್ಲೂಕ ಯುವಕ ಸಂಘಗಳ ಅಭಿವೃದ್ಧಿ ಶಿಬಿರ

ಹೊನ್ನಾವರ: ಯುವಕರು ಇಂದಿನ ಸ್ಪರ್ಧಾತ್ಮಕ ಪರಿಕ್ಷೆಗಳಲ್ಲಿ ಬರೆದು ಹೆಚ್ಚಿನ ಉದ್ಯೋಗವಕಾಶಗಳನ್ನು ಪಡೆದುಕೊಳ್ಳಬೇಕು ಎಂದು ಮಂಕಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಸುರೇಶ ಖಾರ್ವಿಯವರು ತಿಳಿಸಿದರು .
ಅವರು ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಕಾರವಾರ , ತಾಲೂಕಾ ಯುವ ಒಕ್ಕೂಟ ಹೊನ್ನಾವರ ಹಾಗೂ ನಿಲುಮೆ ಯುವ ವೇದಿಕೆ ಮಂಕಿ ದೇವರಗದ್ದೆ ಇದರ ಸಂಯುಕ್ರ ಆಶ್ರಯದಲ್ಲಿ ಕೊಂಕಣಖಾರ್ವಿ ಸಭಾಭವನದಲ್ಲಿ ನಡೆದ ತಾಲೂಕ ಯುವಕ ಸಂಘಗಳ ಅಭಿವೃದ್ಧಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರಿಗೆ ಸರಿಯಾದ ಉದ್ಯೋಗವಕಾಶಗಳು ದೊರೆಯಬೇಕಾದರೆ ಕಠಿಣ ಪರಿಶ್ರಮ ಅತ್ಯಂತ ಅವಶ್ಯವಾಗಿದೆ, ಕೇವಲ ಪದವಿ ಶಿಕ್ಷಣ ಮಾತ್ರ ಪಡೆದು ಸುಮ್ಮನಿರದೆ ಬ್ಯಾಂಕಿAಗ ಹಾಗೂ ಇನ್ನಿತರ ಸರ್ಕಾರಿ ಒದ್ಯೋಗವಕಾಶಗಳನ್ನು ಪಡೆಯಲು ಸ್ಪಧಾತ್ಮಕ ಪರಿಕ್ಷೆ ಬರೆಯುವುದು ಅವಶ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ ಪತ್ರಕರ್ತ ವೆಂಕಟೇಶ ಮೇಸ್ತರವರು ಮಾತನಾಡಿ ಯುವಕ ಸಂಘಗಳಿಗೆ ಸ್ವ ಉದ್ಯೋಗವಕಾಶ ಸೇರಿದಂತೆ ಇನ್ನಿತರ ಉದ್ಯೋಗವಕಾಶಗಳನ್ನು ಪಡೆಯಲು ದೋರೆಯಬೇಕಾದ ಮಾಹಿತಿ ಕಾರ್ಯಕಾರ ಹಾಗೂ ತರಬೇತಿ ಶಿಬಿರಗಳನ್ನು ನೀಡುವುದು ಉತ್ತಮ ಎಂದು ತಿಳಿಸಿದರು.
ಹೊನ್ನಾವರ ತಾಲ್ಲೂಕ ಯುವ ಒಕ್ಕೂಟದ ಅಧ್ಯಕ್ಷ ವಿನಾಯಕ ನಾಯ್ಕರವರು ಮಾತನಾಡಿ ಸರ್ಕಾರದಿಂದ ಯುವಕ ಸಂಘಗಳಿಗೆ ದೊರೆಯುವ ಯುವ ಸೌಲಭ್ಯಗಳ ಕುರಿತು ವಿವರಿಸಿದರು. ಮುಖ್ಯ ಅತಿಥಿಯಾಗಿ ಗ್ರಾಮಪಂಚಾಯತ ಸದಸ್ಯೆ ಶ್ರಿಮತಿ ಗಂಗೆ ಖಾರ್ವಿ ಆಗಮಿಸಿದ್ದರು.ನಿಲುಮೆ ವೇದಿಕೆಯ ಅಧ್ಯಕ್ಷ ದಿನೇಶ ಖಾವಿಯವರು ಸ್ವಾಗತಿಸಿದರು. ರಾಘು ಖಾರ್ವಿ ವಂದಿಸಿದರು. ರವಿ ವೆಂಕಟೇಶ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು. ನೆಹರು ಯುವ ಕೇಂದ್ರದ ಕಾರ್ಯಕರ್ತ ಶಿವರಾಜ ನಾಯ್ಕ ಉಪಸ್ಥಿತರಿದ್ದರು

error: