ಬದುಕು ಹಸನಾಗಬೇಕಾದರೆ ಸಾಹಿತ್ಯದ ಓದು ಅಗತ್ಯ ಎಂದು ಜಾನಪದ ವಿದ್ವಾಂಸ ಡಾ: ಎನ್.ಆರ್.ನಾಯಕ ಹೇಳಿದರು. ಇತ್ತಿಚಿಗೆ ಕಲ್ಕಟ್ಟು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಾಹಿತ್ಯ ವೇದಿಕೆಯಿಂದ ಏರ್ಪಡಿಸಿದ ಮಕ್ಕಳ ಸಾಹಿತ್ಯ ರಚನಾ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ಪಾಲಕರಿಗೆ ಸಾಹಿತ್ಯದ ಒಲವಿದ್ದರೆ ಮಕ್ಕಳ ಅಭಿರುಚಿ ಗುರುತಿಸಿ ಪ್ರೇರೆಪಿಸಬಲ್ಲರು ಎಂದರು.
ಸಾಹಿತಿ ಸುಮುಖಾನಂದ ಜಲವಳ್ಳಿಯವರ “ಪಾಲಕರ ಮುಂದೆ ಒಂದೆರಡು ಮಾತು” ಕೃತಿ ಬಿಡುಗಡೆಗೊಳಿಸಿದ ಜಿಲ್ಲೆಯ ಉಪನಿರ್ದೇಶಕರಾದ ಹರೀಶ ಲಕ್ಷö್ಮಣ ಗಾಂವಕರ ಮಾತನಾಡಿ ಮಕ್ಕಳು ಕ್ರೀಯಶೀಲವಾಗಲು ದುರಾಭ್ಯಾಸದಿಂದ ದೂರ ಉಳಿಯಲು ಪುಸ್ತಕಗಳನ್ನು ಓದಬೇಕು. ಈ ಕೃತಿಯು ಪಾಲಕರಿಗೆ ಮಾರ್ಗದರ್ಶನ ನೀಡುವ ಸಂಗ್ರಹ ಯೋಗ್ಯ ಕೃತಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಮಕ್ಕಳ ಸುಪ್ತ ಪ್ರತಿಭೆಗೆ ಬಾಲ್ಯದಿಂದಲೇ ಇಂತಹ ಸಾಹಿತ್ಯ ಚಟುವಟಿಕೆ ಓದಿನೆÀಡೆಗೆ ಆಸಕ್ತಿ ಹೆಚ್ಚಿಸಲು ಸಾಧ್ಯ ಎಂದರು. ಓದು ಜ್ಞಾನದ ವಿಸ್ತಾರದೊಂದಿಗೆ ಉತ್ತಮ ಪ್ರಜೆಯಾಗಿ ಸಮಾಜಕ್ಕೆ ಮಾದರಿಯಾಗಬಲ್ಲ ಎಂದರು.
ಇನ್ನೊರ್ವ ಮುಖ್ಯ ಅತಿಥಿ ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಮಾತನಾಡಿ ಪುಸ್ತಕವೆಂದರೆ ಸಾವಿಲ್ಲದ ಬಂಧುಗಳAತೆ. ಪುಸ್ತಕ ಪ್ರೀತಿಯೇ ಮಕ್ಕಳನ್ನು ಸೃಜನಶೀಲರನ್ನಾಗಿ ಮಾಡಲು ಸಾಧ್ಯ. ಮಕ್ಕಳ ಸಾಹಿತ್ಯ ವೇದಿಕೆಯ ಮೂಲಕ ನಡೆಯುತ್ತಿರುವ ಇಂತಹ ಕಾರ್ಯ ಶ್ಲಾಘನೀಯ ಎಂದರು.
ಗ್ರಾಮ ಪಂಚಾಯತ ಅಧ್ಯಕ್ಷೆ ಗುಣಮಾಲ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳ ಆಸಕ್ತಿಯನ್ನು ಅರ್ಥೈಯಿಸಿಕೊಂಡು ಅವರ ಸ್ವತಂತ್ರ ಬದುಕಿಗೆ ಪಾಲಕರು ಮಾರ್ಗದರ್ಶನ ನೀಡಬೇಕು ಎಂದರು.
“ಪಾಲಕರ ಮುಂದೆ ಒಂದೆರಡು ಮಾತು” ಕೃತಿಯನ್ನು ಶಿಕ್ಷಕ, ಸಾಹಿತಿ ಪಿ.ಆರ್.ನಾಯ್ಕ ಪರಿಚಯಿಸಿದರು. ಸಾಹಿತಿ ಸುಮುಖಾನಂದ ಜಲವಳ್ಳಿ ಪ್ರಾಸ್ತಾವಿಕ ಮಾತನಾಡಿದರು.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.