April 24, 2024

Bhavana Tv

Its Your Channel

ಕರೋನಾ ಮುಂಜಾಗ್ರತೆ ಹಾಗೂ ಕೈಗೊಳ್ಳಬೇಕಾದ ಕ್ರಮದ ಕುರಿತು ಶಾಸಕ ಸುನೀಲ ನಾಯ್ಕ ಶನಿವಾರ ಪರಿಶೀಲನೆ

ಹೊನ್ನಾವರ ಪಟ್ಟಣ ಹಾಗೂ ಗ್ರಾಮಂತರ ಭಾಗಗಳಲ್ಲಿ ಕರೋನಾ ನಿಭಾಯಿಸಲು ಕೈಗೊಂಡ ಕ್ರಮ ಹಾಗೂ ಮುಂದಿನ ದಿನದಲ್ಲಿ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮದ ಕುರಿತು ತಹಶೀಲ್ದಾರ ವಿವೆರಕ ಶೆಣ್ವೆಯೊಂದಿಗೆ ಸಮಾಲೋಚನೆ ನಡೆಸಿದರು.
ನಂತರ ಭಾವನ ವಾಹಿನಿಯೊಂದಿಗೆ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಮಾತನಾಡಿ ದೇಶದಲ್ಲಿ ಕರೋನಾ ನಿಯಂತ್ರಿಸಲು ಪ್ರಧಾನಿ ಮೋದಿಯವರು ದೇಶದೆಲ್ಲಡೆ ಲಾಕ್ ಡೌನ ಘೋಷಿಸಿದೆ. ನನ್ನ ಕ್ಷೇತ್ರದಲ್ಲಿ ಭಟ್ಕಳ ತಾಲೂಕಿನಲ್ಲಿ ಈ ಪ್ರಕರಣ ಪತ್ತೆಯಾಗಿದ್ದು ಹೊನ್ನಾವರದಲ್ಲಿ ಸದ್ಯ ಸಮಸ್ಯೆ ಇಲ್ಲ ಮುಂಬರುವ ದಿನದಲ್ಲಿ ಹೊನ್ನಾವರಕ್ಕೆ ಇದು ಹಬ್ಬದಂತೆ ಅಧಿಕಾರಿಗಳು ಮುಂಜಾಗ್ರತೆ ಕ್ರಮ ಕೈಗೊಳ್ಳುತ್ತಿದ್ದಾರೆ. ಅಲ್ಲದೆ ದಿನಸಿ ತರಕಾರಿ ವಿತರಣೆಗೆ ಹೊನ್ನಾವರ ಪಟ್ಟಣದಲ್ಲಿ ಅಧಿಕಾರಿಗಳು ವ್ಯವಸ್ಥೆ ಕಲ್ಪಿಸಿದ್ದಾರೆ. ಅದೇ ರೀತಿಯಲ್ಲಿ ಗ್ರಾಮಸ್ಥರಿಗೂ ಅನೂಕೂಲವಾಗಲು ಗ್ರಾಮವಾರು ಅಂಗಡಿ ತೆರೆಯಲು ವ್ಯವಸ್ಥೆ ಕೈಗೊಳ್ಳಲಾಗಿದೆ. ಕ್ಷೇತ್ರದ ಸಾರ್ವಜನಿಕರಲ್ಲಿ ಕೈ ಮುಗಿದು ಕೇಳಿಕೊಳ್ಳುದೇನೆಂದರೆ ಮನೆಯಿಂದ ಹೊರಬರಬೇಡಿ, ದಿನಸಿ ತರಕಾರಿ ಮನೆಯ ಸಮೀಪದ ಅಂಗಡಿಯಲ್ಲಿ ಖರಿದೀಸಿ ಸರ್ಕಾರ ಅಧಿಕಾರಿಗಳ ಸಲಹೆಯನ್ನು ಅನುಸರಿಸಿ ಒಗ್ಗಟ್ಟಾಗಿ ಇದನ್ನು ನಿಯಂತ್ರಿಸೋಣ ಎಂದರು. ಅಲ್ಲದೆ ನಮ್ಮ ಪಕ್ಷದ ವತಿಯಿಂದ ಮೆಡಿಕಲ್ ವ್ಯವಸ್ಥೆಗೆ ಕಾರ್ಯನಿರ್ವಹಿಸುತ್ತಿದ್ದು ನಿಮಗೆ ಅಗತ್ಯವಿರುವ ಔಷಧಿಗಳ ಬಗ್ಗೆ ವಾಟ್ಸಪ್ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ನಮ್ಮ ಪಕ್ಷದ ಕಾರ್ಯಕರ್ತರು ಮಾಡುತ್ತಾರೆ. ಅಲ್ಲಿ ಔಷಧಿ ವೆಚ್ಚ ನೀಡಿ ಔಷಧಿ ಪಡೆದುಕೊಳ್ಳುವಂತೆ ಸೂಚಿಸಿದರು. ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಎನ್.ಎಮ್.ಮೇಸ್ತ ಜೊತೆ ಪಟ್ಟಣ ವ್ಯಾಪ್ತಿಯ ಕೈಗೊಂಡ ಕ್ರಮ ಪೋಲಿಸ್ ಸಬ್ ಇನಸ್ಪೆಕ್ಟರ್ ಶಶಿಕುಮಾರ್ ಜೊತೆ ಕಾನೂನು ಕ್ರಮ ಹಾಗೂ ಅಗತ್ಯ ವಸ್ತು ಸರಬರಾಜು ಮಾಡಲು ಪಾಸ್ ವ್ಯವಸ್ಥೆ ಪೂರೈಸುವ ಬಗ್ಗೆ ಚರ್ಚೆ ನಡೆಸಿ ಸಲಹೆಗಳನ್ನು ನೀಡಿದರು‌.

error: