ಕುಮಟಾ : ಈ ವೇಳೆ ಮಾತನಾಡಿದ ಎಪಿಎಂಸಿ ಅಧ್ಯಕ್ಷ ರಾಮನಾಥ ಶ್ರೀಧರ ಶಾನಭಾಗ, ಕುಮಟಾ ಎಪಿಎಂಸಿ ವತಿಯಿಂದ ತಾಲೂಕಿನ ರೈತರಿಗಾಗಿ ಒಂದು ಸಾವಿರಕ್ಕೂ ಹೆಚ್ಚು ಮಾಸ್ಕಗಳನ್ನು ಖರೀದಿಸಿ ತಾಲೂಕಾಡಳಿತಕ್ಕೆ ನೀಡಿದ್ದೇವೆ. ಮಾಸ್ಕಗಳ ಸರಿಯಾದ ಬಳಕೆಯಾಗಲಿ. ಹಾಗೆಯೇ ೧೫ ಲಕ್ಷರೂ ಚೆಕ್‌ನ್ನು ಕರೊನಾ ತಡೆಗಟ್ಟುವ ಕಾರ್ಯದಲ್ಲಿ ಸಹಕಾರವಾಗುವಂತೆ ರಾಜ್ಯ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಮರ್ಪಿಸಿದ್ದೇವೆ. ಕರೊನಾ ವಿರುದ್ಧದ ಹೋರಾಟದಲ್ಲಿ ಕುಮಟಾ ಎಪಿಎಂಸಿಯ ಚಿಕ್ಕ ಸೇವೆ ಇದಾಗಿದೆ ಎಂದರು.
ಎಪಿಎಂಸಿ ಉಪಾಧ್ಯಕ್ಷ ರಾಮಚಂದ್ರ ವಿ.ಹೆಗಡೆ ನಂದಯ್ಯನ್, ಸದಸ್ಯ ಅರವಿಂದ ಕೆ. ಪೈ, ರಾಯೇಶ ಎಂ. ಬಾಳಗಿ, ಕಾರ್ಯದರ್ಶಿ ಎಂ.ಸಿ.ಪಡಗಾನೂರ, ಉಪವಿಭಾಗಾಧಿಕಾರಿ ಕಾರ್ಯಾಲಯ ವ್ಯವಸ್ಥಾಪಕ ವಿ.ಆರ್.ನಾಯ್ಕ ಇದ್ದರು.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ