ಭಟ್ಕಳ: ಪಟ್ಟಣದ ಇನ್ನೋರ್ವ ಯುವಕನಲ್ಲಿ ಕೋವಿಡ್- ಸೋಂಕು (ಸೋಂಕಿತ ಸಂಖ್ಯೆ- ೭೬) ಇರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಭಟ್ಕಳ ಮೂಲದವರಲ್ಲಿ ಇದೀಗ ಒಟ್ಟು ಎಂಟಕ್ಕೆ (೭+೧) ಏರಿಕೆ ಆದಂತಾಗಿದೆ.
ಈತ (ಸೋಂಕಿತ ಸಂಖ್ಯೆ- ೭೬) ಮಂಗಳೂರಿನಿAದ ಮಾ.೨೦ರಂದು ಭಟ್ಕಳಕ್ಕೆ ಆಗಮಿಸಿದ್ದ ಸೋಂಕಿತ ಸಂ.೩೫ರ ಸ್ನೇಹಿತನಾಗಿದ್ದಾನೆ. ಜಿಲ್ಲೆಯ ಮೊದಲ ಸೋಂಕಿತನಾದ ಸಂ.೩೫ನ್ನು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡು, ಭಟ್ಕಳಕ್ಕೆ ಈತ ತನ್ನ ಕಾರಿನಲ್ಲಿ ಕರೆದುಕೊಂಡು ಬಂದಿದ್ದ. ಬಳಿಕ ಆತನ ಮನೆಗೂ ತೆರಳಿ ಸೋಂಕಿತ ಸಂ.೩೫ನ್ನು ಬಿಟ್ಟು ಬಂದಿದ್ದ.
ಇದಾದ ನಂತರ ಅರ್ಧ ಗಂಟೆಯಲ್ಲೇ ಸೋಂಕಿತ ಸಂ.೩೫ ಅನುಮಾನದ ಮೇಲೆ ಆಸ್ಪತ್ರೆಗೆ ಸೇರಿದಾಗ ಆತನಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅನುಮಾನದ ಮೇಲೆ ಈ ಸ್ನೇಹಿತನ ಸೋಂಕಿತ ಸಂಖ್ಯೆ- ೭೬) ಗಂಟಲು ದ್ರವವನ್ನೂ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಈ ಸ್ನೇಹಿತನಿಗೂ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.
source- NUDIJENU
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ