July 14, 2024

Bhavana Tv

Its Your Channel

ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಅನಂತಕುಮಾರ ಬಗ್ಗೆ ಮಾತನಾಡುವ ಯಾವ ಶ್ರೇಷ್ಠ ಗುಣಗಳಿಗೂ ಯೋಗ್ಯತೆ ಇಲ್ಲ ಎಂದು ಕುಮಟಾ ಬಿ ಜೆ ಪಿ ಮಂಡಳ ಅದ್ಯಕ್ಷ ಹೇಮಂತ ಗಾಂವ್ಕರ ತಿರುಗೇಟು

ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಅನಂತಕುಮಾರ ಬಗ್ಗೆ ಮಾತನಾಡುವ ಯಾವ ಶ್ರೇಷ್ಠ ಗುಣಗಳಿಗೂ ಯೋಗ್ಯತೆ ಇಲ್ಲ ಎಂದು ಕುಮಟಾ ಬಿ ಜೆ ಪಿ ಮಂಡಳ ಅದ್ಯಕ್ಷ ಹೇಮಂತ ಗಾಂವ್ಕರ ತಿರುಗೇಟು ನೀಡಿದ್ದಾರೆ

ಅನಂತ ಕುಮಾರ ಹೆಗಡೆ ಯಾವುದೇ ರೀತಿಯ ರಾಜಕೀಯ ಪ್ರಭಾವ ಅಥವಾ ದುಡ್ಡಿನ ಮದದಿಂದ ಈ ರೀತಿ ಆರು ಬಾರಿ ಉತ್ತರ ಕನ್ನಡ ಜಿಲ್ಲೆಯ ಸಂಸದರಾಗಿ ಆಯ್ಕೆಯಾದವರಲ್ಲ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿ ಧರ್ಮದ ಆಧಾರದ ಮೇಲೆ ಜನಪ್ರತಿನಿಧಿಯ ಮನ್ನಣೆಗಳಿಸಿಕೊಂಡವರೆAದು ಶ್ರೀಮತಿ ಶಾರದ ಶೆಟ್ಟಿಯವರು ತಿಳಿದುಕೊಂಡು ಮಾತನಾಡಲಿ.
ತಾನು ಮಾಜಿ ಶಾಸಕಿ ಯಾಕಾದೆನೆಂಬ ಅರಿವಿಲ್ಲದೇ ಮಾತನಾಡುವ ಕುಮಟಾ ಕ್ಷೇತ್ರದಿಂದ ಆರಿಸಿ ಬಂದ ನೀವೂ ಸಂಘಟನೆಯ ವಿಚಾರದಲ್ಲಿ ಸೊನ್ನೆ ಅಭಿವೃದ್ಧಿಯ ವಿಚಾರದಲ್ಲಿ ಸೊನ್ನೆ ಹೀಗಾಗಿಯೆ ನಿಮ್ಮನ್ನು ಕ್ಷೇತ್ರದ ಜನತೆ ಸೋಲಿಸಿದ್ದಾರೆ ಎಂಬುದು ನೆನಪಿರಲಿ. ಕೇವಲ ಪತಿಯ ನಾಮಬಲದಿಂದ ರಾಜಕಾರಣ ಮಾಡುವ ನಿಮ್ಮ ಅಸ್ತಿತ್ವ ಎಲ್ಲಿದೆ ಎಂಬುದನ್ನು ಅರಿತುಕೊಂಡು ಬಿಜೆಪಿಯ ಸಂಘಟನೆಯ ಬಗ್ಗೆ ಮಾತನಾಡುವುದು ಓಳಿತು. ಈಗಲೂ ಭಾರತೀಯ ಜನತಾ ಪಕ್ಷದ ಪರವಾಗಿ ಬಹಿರಂಗವಾಗಿ ನಿಮಗೆ ಸವಾಲೊಂದನ್ನು ನೀಡುತ್ತಿದ್ದೇವೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ ನಿಮ್ಮ ಕ್ಷೇತ್ರದಲ್ಲಿ ನಿರ್ನಾಮವಾಗದಂತೆ ಕಾಪಾಡಿಕೊಳ್ಳಿ.ಆ ನಂತರ ಉಳಿದ ಪಕ್ಷಗಳ ಬಗ್ಗೆ ಅಲ್ಲಿನ ಜನಪ್ರತಿನಿಧಿಗಳ ಬಗ್ಗೆ ಮಾತನಾಡುವುದು ಒಳಿತು ಎಂದರು.

error: