April 24, 2024

Bhavana Tv

Its Your Channel

. ಸಂವಿಧಾನ ಹಾಗೂ ಸ್ವಾತಂತ್ರö್ಯ ಹೋರಾಟಗಾರರಿಗೆ ಗೌರವ ನೀಡದ ಸಂಸದರನ್ನು ಸಂಸತ್ತಿನ ಒಳಗೆ ಪ್ರವೇಶಕ್ಕೆ ಅವಕಾಶ ನೀಡಬಾರದು. ಅನಂತಕುಮಾರ ಒರ್ವ ನಾಲಾಯಕ್ ಸಂಸದ-ಜಗದೀಪ ತೆಂಗೇರಿ

ಬೆಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ರಾಷ್ಟçಪಿತ ಮಹಾತ್ಮಾ ಗಾಂಧಿ ಮತ್ತು ಸ್ವಾತಂತ್ರ‍್ಯ ಹೋರಾಟಗಾರರ ಬಗ್ಗೆ ಅವಹೇಳನವಾಗಿ ಮಾತಾಡಿರುವ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಯನ್ನ ವಿರೋಧಿಸಿ ಹೊನ್ನಾವರ ಮಂಕಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಹೊನ್ನಾವರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣ ಪಂಚಾಯತ ಸಭಾಭವನದಲ್ಲಿ ಇರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ನಡೆಸಿ ಅನಂತಕುಮಾರ ವಿರುದ್ದ ಘೋಷಣೆ ಕೂಗುತ್ತಾ ತಹಶೀಲ್ದಾರ ಕಛೇರಿಗೆ ಆಗಮಿಸಿದರು. ತಹಶೀಲ್ದಾರ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಿದರು. ತಹಶೀಲ್ದಾರ ವಿವೇಕ ಶೇಣ್ವೆ ಮನವಿ ಸ್ವೀಕರಿಸಿದರು.
ನಂತರ ಮಾಧ್ಯಮದವರೊಂದಿಗೆ ಹೊನ್ನಾವರ ಬ್ಲಾಕ್ ಅಧ್ಯಕ್ಷ ಜಗದೀಪ ತೆಂಗೇರಿ ಮಾತನಾಡಿ ಅನಂತಕುಮಾರ್ ಹೆಗಡೆಯವರು ದೇಶದ ಇತಿಹಾಸ ಓದಿದ್ದರೆ ಹೀಗೆಲ್ಲ ಮಾತಾಡುತ್ತಿರಲಿಲ್ಲ, ಬಿಜೆಪಿಗರಿಗೆ ದೇಶದ ಇತಿಹಾಸ ಗೊತ್ತಿಲ್ಲ. ಸಂವಿಧಾನ ಹಾಗೂ ಸ್ವಾತಂತ್ರö್ಯ ಹೋರಾಟಗಾರರಿಗೆ ಗೌರವ ನೀಡದ ಸಂಸದರನ್ನು ಸಂಸತ್ತಿನ ಒಳಗೆ ಪ್ರವೇಶಕ್ಕೆ ಅವಕಾಶ ನೀಡಬಾರದು. ಅನಂತಕುಮಾರ ಒರ್ವ ನಾಲಾಯಕ್ ಸಂಸದ. ಬಿಜೆಪಿಯವರು ಅವರ ಹೇಳಿಕೆ ಸಮರ್ಥನೆ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ಈಗ ರಾಜ್ಯ ಕೇಂದ್ರದಲ್ಲಿ ಇವರದ್ದೆ ಸರ್ಕಾರವಿದೆ ಆಗ ಬಂದು ಬೊಬ್ಬೆ ಎರೆದವರು ಈಗ ನ್ಯಾಯ ಕೊಡಿಸಲಿ ಪರೇಶ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಲಿ. ಎಂದು ಆಗ್ರಹಿಸಿದರು

ಮಂಕಿ ಬ್ಲಾಕ್ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ ಸಂಸದನಾದವರಿಗೆ ದೇಶದ ಅಭಿವೃದ್ದಿ ಜಿಲ್ಲೆಯ ಅಭಿವೃದ್ದಿ ಬಗ್ಗೆ ಚಿಂತನೆ ನಡೆಸುದನ್ನು ಬಿಟ್ಟು ವಿವಾದಾತ್ಮಕ ಹೇಳಿಕೆಯ ಮೂಲಕ ಸದಾ ಸುದ್ದಿಯಲ್ಲಿ ಇರುತ್ತಾರೆ. ಅಭಿವೃದ್ಧಿಯ ಬಗ್ಗೆ ಮಾತಾಡುವುದನ್ನು ಬಿಟ್ಟು ರಾಷ್ಟçಪಿತ ಮಹಾತ್ಮಾ ಗಾಂಧಿಯನ್ನು ನಮ್ಮ ಸಂಸದರು ಅವಹೇಳನ ಮಾಡಿರುವದರಿಂದ ಈ ಜಿಲ್ಲೆಯ ಜನರಾದ ನಾವೆಲ್ಲರೂ ತಲೆತಗ್ಗಿಸಬೇಕಾಗಿz ಎಂದು ೆ ಆಕ್ರೋಶ ಹೊರಹಾಕಿದರು.
ಈ ಸಂದರ್ಬದಲ್ಲಿ ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ, ಸದಸ್ಯೆ ಲಕ್ಷಿö್ಮ ಗೊಂಡ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಆರ್.ಎಸ್. ರಾಯ್ಕರ್, ಮಾಜಿ ತಾಲೂಕ ಪಂಚಾಯತ ರಾಜು ನಾಯ್ಕ ಮಂಕಿ, ಬಾಲಚಂದ್ರ ನಾಯ್ಕ, ದಾಮೋದರ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು

error: