April 26, 2024

Bhavana Tv

Its Your Channel

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿ ಮಂಜೂರಿ ಪ್ರಕ್ರಿಯೆ ಶೀಘ್ರದಲ್ಲಿ ಜರುಗಿಸುವ ಕುರಿತು ಬೃಹತ್ ಮೆರವಣಿಗೆ ಮೂಲಕ ಸರ್ಕಾರಕ್ಕೆ ಆಗ್ರಹ.

ಜಿಲ್ಲಾ ಮತ್ತು ತಾಲೂಕು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ನಡೆದ ಪ್ರತಿಭಟನಾ ಮೆರವಣೆಗೆ ಶರಾವತಿ ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ತಹಶೀಲ್ದಾರÀ ಕಚೇರಿಗೆ ಬಂದು ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಸರಕಾರದ ಜನವಿರೋಧಿ ನೀತಿಯಾಗಿರುವ ಸದ್ರಿ ಆದೇಶವನ್ನು ರದ್ದುಪಡಿಸಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವ ಅರಣ್ಯ ಪ್ರದೇಶವನ್ನು ರದ್ದುಗೊಳಿಸಿ ಅರಣ್ಯವಾಸಿ ಮತ್ತು ಜನ ಸಾಮಾನ್ಯರಿಗೆ ಮೂಲಭೂತ ಹಕ್ಕಿನಿಂದ ವಂಚಿತವಾಗದ ರೀತಿಯಲ್ಲಿ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮೂಲಕ ಕೋರಿದ್ದಾರೆ. ಉಪ ಮತ್ತು ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಗಳು ನಮ್ಮ ಅರ್ಜಿಯನ್ನು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿಗೆ ಸಂಬAಧಿಸಿದ ನಿರ್ದಿಷ್ಟ ದಾಖಲಾತಿ ಸಾಕ್ಷ್ಯಕ್ಕೆ ಆಗ್ರಹಿಸುತ್ತಿರುವುದು ವಿಷಾದಕರ. ಇದು ಕಾನೂನಿಗೆ ವ್ಯತಿರಿಕ್ತವಾಗಿದೆ. ನಿರ್ದಿಷ್ಟ ದಾಖಲಾತಿ ಸಾಕ್ಷ್ಯದ ಬಗ್ಗೆ ಕಾನೂನಿನಲ್ಲಿ ಉಲ್ಲೇಖವಿಲ್ಲ ಎಂದು ವ್ಯಾಖ್ಯಾನಿಸುತ್ತಾ, ಅರಣ್ಯ ಹಕ್ಕು ಕಾಯಿದೆ ಕೇಂದ್ರ ಬುಡಕಟ್ಟು ಮಂತ್ರಾಲಯದ ನಿರ್ದೇಶನದಂತೆ ನಿರ್ದಿಷ್ಟ ದಾಖಲೆಗಳಿಗೆ ಒತ್ತಾಯಿಸದೇ, ಕಾನೂನು ಅಡಿಯಲ್ಲಿ ಉಲ್ಲೇಖಿಸಿರುವಂತೆ ಮೌಖಿಕ ಹಾಗೂ ಪ್ರತ್ಯಕ್ಷ್ಯ ಸಾಗುವಳಿ ಸಾಕ್ಷ್ಯ ದ ಮೇಲೆ ಮಂಜೂರಿ ವ ಸಾಗುವಳಿ ಹಕ್ಕನ್ನು ನೀಡಬೇಕು. ಅಲ್ಲದೇ, ನಿರ್ದಿಷ್ಟ ದಾಖಲಾತಿಯ ಸಾಕ್ಷ್ಯವನ್ನು ಮಂಜೂರಿ ಪ್ರಕ್ರಿಯೆಗೆ ಮಾನದಂಡ ಮಾಡಿರುವುದು ಕಾನೂನು ಬಾಹೀರ ಎಂದು ಗುಜರಾತ ಉಚ್ಛ ನ್ಯಾಯಾಲಯ ಆದೇಶವನ್ನು ನೀಡಿರುವುದನ್ನು ಉಲ್ಲೇಖಿಸಿ ತಾಲೂಕಿನಾದ್ಯಂತ ಬಂದಿರುವ ಸಹಸ್ರಾರು ಅತಿಕ್ರಮಣದಾರರು ಜಿಲ್ಲಾಧಿಕಾರಿಗಳಿಗೆ ವೈಯಕ್ತಿಕ ಮನವಿ ನೀಡಿರುವುದು ಅರಣ್ಯ ಅತಿಕ್ರಮಣದಾರರ ಇಂದಿನ ಜನಾಂದೋಲನದ ವಿಶೇಷವಾಗಿತ್ತು.
ಈ ಸಂಧರ್ಭದಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಜಿಲ್ಲಾಧ್ಯಕ್ಷರಾದ ರವೀಂದ್ರ ನಾಯ್ಕ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯ ಸುಮಾರು ೨೦,೦೦೦ ಹೆಕ್ಟೆರ್ ಪ್ರದೇ±ವನ್ನೊಳಗೊಂಡು ಭಟ್ಕಳ, ಹೊನ್ನಾವರ, ಕುಮಟಾದ ವಿವಿದ ಗ್ರಾಮಗಳನ್ನ ಸೇರ್ಪಡೆಗೊಂಡು ಹೊಸ ಯೋಜನೆಯನ್ನು ಜಾರಿಗೆ ತರುತ್ತಿದ್ದಾರೆ. ಈ ಮೂಲಕ ನಾವು ಸರ್ಕಾರಕ್ಕೆ ತಿಳಿಸುವುದೇನೆಂದರೆ ಇದು ಜನ ವೀರೋಧಿ ನೀತಿಯಾಗಿದ್ದು, ನಾವು ತೀವೃವಾದ ವಿರೋಧವನ್ನು ವ್ಯಕ್ತಪಡಿಸುತ್ತೇವೆ. ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು ಇಂದಿಗೆ ೧೨ ವರ್ಷಗಳಾಗಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ೮೫,೫೫೭ ಅರ್ಜಿಗಳು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿಯನ್ನು ಕೊಟ್ಟಿದ್ದವು. ಆದರೆ ನೀಡಿರುವ ಈ ಎಲ್ಲಾ ಅರ್ಜಿಗಳಲ್ಲಿ ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ೭೪,೨೨೦ ಅರ್ಜಿಗಳು ತಿರಸ್ಕಾರವಾಗಿದೆ. ಈ ಎಲ್ಲಾ ಅರ್ಜಿಗಳು ತಿರಸ್ಕಾರ ವಾಗಲು ಕಾರಣ ಮೂರು ತಲೆಮಾರಿನ ದಾಖಲೆಗಳನ್ನು ಕೇಳಿರುವುದು. ಆದರೆ ಯಾವುದೇ ಕಾನೂನಿನಲ್ಲಿ ನಿರ್ಧಿಷ್ಟ ದಾಖಲೆಗಳು ಸಾಕ್ಷಿಯಾಗಬೇಕೆಂದು ಎಲ್ಲಿಯೂ ಇಲ್ಲಾ ಇದನ್ನು ಕೂಡಲೇ ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವೇದಿಕೆ ತಾಲೂಕಾಧ್ಯಕ್ಷ ಚಂದ್ರಕಾAತ ಕೋಚಡೆಕರ್, ವಾಮನ ನಾಯ್ಕ, ಅನಂತ ನಾಯ್ಕ ಹೆಗ್ಗಾರ್, ವಿನಾಯಕ ನಾಯ್ಕ ಮೂಡ್ಕಣಿ, ಸುರೇಶ ಮೇಸ್ತ, ಆರ್.ಎಚ್.ನಾಯ್ಕ ಮತ್ತಿತರರು ಉಪಸ್ಥಿತರಿದ್ದರು

error: