June 20, 2024

Bhavana Tv

Its Your Channel

‘ಸಂಸದರ ಬಾಯಿಗೆ ಗೋಣಿಚೀಲ ಹೊಲಿಯುವ ದಬ್ಬಣ ಬಳಸಿ ಹೋಲಿಯಬೇಕು- ಮಾಜಿ ಶಾಸಕ ಜೆ.ಡಿ.ನಾಯ್ಕ

‘ಸಂಸದ ಅನಂತ ಕುಮಾರ ಹೆಗಡೆ ಮಹಾತ್ಮ ಗಾಂಧಿ, ಸ್ವಾತಂತ್ರö್ಯ ಹೋರಾಟಗಾರರ ಬಗೆಗಿನ ಟೀಕೆ, ಅವಹೇಳನಕಾರಿ ಹೇಳಿಕೆ ಖಂಡಿಸಿ ಭಟ್ಕಳ ಬ್ಲಾಕ ಕಾಂಗ್ರೆಸ ರಾಷ್ಟçಪತಿಗ ಮನವಿ’

ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಕೆನರಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಅವರು ಬೆಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ಬಗ್ಗೆ ಹಾಗೂ ಸ್ವಾತಂತ್ರ÷್ಯ ಹೋರಾಟಗಾರರ ಬಗ್ಗೆ ಟೀಕೆ ಮಾಡಿ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಸಂಸದ ಅನಂತ ಕುಮಾರ ಹೆಗಡೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾರದಂದು ಸಹಾಯಕ ಆಯುಕ್ತರ ಮೂಲಕ ರಾಷ್ಟçಪತಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕ್ಷೇತ್ರ ಸಂಸದ ಅನಂತಕುಮಾರ್ ಹೆಗಡೆಯವರು ಫೆಬ್ರವರಿ ೨ರಂದು ಬೆಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ಪಾಲ್ಗೊಂಡು ತಮ್ಮ ಭಾಷಣದಲ್ಲಿ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ಬಗ್ಗೆ ಹಾಗೂ ಸ್ವಾತಂತ್ರ÷್ಯ ಹೋರಾಟಗಾರರ ಬಗ್ಗೆ ಟೀಕೆ ಮಾಡಿ ಅವಹೇಳನಕಾರಿ ಹೇಳಿಕೆ ನೀಡಿ ರಾಷ್ಟçಪಿತ ಮಹಾತ್ಮಾ ಗಾಂಧೀಜಿಯವರಿಗೂ, ಸ್ವಾತಂತ್ರ÷್ಯ ಹೋರಾಟಗಾರರಿಗೆ ಅವಮಾನ ಮಾಡುವುದರ ಮೂಲಕ ನಮ್ಮ ರಾಷ್ಟçಕ್ಕೆ ಅವಮಾನ ಮಾಡಿದ್ದಾರೆ.
ಅನಂತಕುಮಾರ್ ಹೆಗಡೆಯವರು ತಮ್ಮ ಭಾಷಣದಲ್ಲಿ ರಾಷ್ಟçಪಿತ ಮಹಾತ್ಮ ಗಾಂಧೀಜಿ ಅವರದ್ದು ಬ್ರಿಟಿಷರ ಜೊತೆಗಿನ ಒಪ್ಪಂದದ ಹೋರಾಟವಾಗಿತ್ತು. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಗೆ ಹೊಡೆಯಿರಿ ಎಂಬ ಸೋಗಲಾಡಿತನದಿಂದ ಸ್ವಾತಂತ್ರ÷್ಯ ಹೋರಾಟ ಮಾಡಿದ ಗಾಂಧೀಜಿಯವರು ಒಂದೇ ಒಂದು ಬಾರಿ ಲಾಠಿ ಏಟು ತಿನ್ನುವುದರು ಸ್ವಾತಂತ್ರ÷್ಯ ಹೋರಾಟಗಾರರು ಎಂದು ಕರೆಯಿಸಿಕೊಳ್ಳುವುದು ದುರಂತ ಎಂದು ಹೇಳಿ ತಮ್ಮ ಭಾಷಣದ ಉದ್ದಕ್ಕೂ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರಿಗೆ ಅವಮಾನ ಮಾಡಿದ್ದಾರೆ.
ಮಹಾತ್ಮ ಗಾಂಧೀಜಿಯವರು ಅಹಿಂಸಾ ತತ್ವ ಹಾಗೂ ಅಸಹಕಾರ ಚಳುವಳಿಯ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ ತಂದು ಕೊಟ್ಟು ಇಡೀ ವಿಶ್ವವೇ ಒಪ್ಪುವಂತಹ ಮಾನವತಾವಾದಿಯಾಗಿ ಹೊರಹೊಮ್ಮಿ ನಮ್ಮ ರಾಷ್ಟçದ ರಾಷ್ಟçಪಿತರಿಗೆ ಎಂದೆAದೂ ಭಾರತ ಪಿತಾಮಹರಾಗಿ ನಮ್ಮ ಜನಮನದಲ್ಲಿ ಅಚ್ಚಳಿಯದೆ ಉಳಿದುಕೊಂಡಿರುತ್ತಾರೆ. ಸ್ವಾತಂತ್ರ÷್ಯ ನಂತರವೂ ಕೂಡ ಯಾವುದೇ ಅಧಿಕಾರ ಅಥವಾ ಪದವಿಗಾಗಿ ಆಸೆ ಪಡದೆ ತಮ್ಮ ಜೀವನದ ಉದ್ದಕ್ಕೂ ನಮ್ಮ ಸೇವೆಯನ್ನು ಮಾಡಿ ಹುತಾತ್ಮರ ಗುಂಡಿಗೆ ಬಲಿಯಾದ ಮಹಾನ ಮಾನವತಾವಾದಿಯಾಗಿದ್ದಾರೆ. ಇಂತಹ ಮಹಾತ್ಮರನ್ನು ಅವರೇ ತಂದುಕೊಟ್ಟ ಸ್ವತಂತ್ರ ಭಾರತದ ಸಂವಿಧಾನಬದ್ಧವಾಗಿ ಆಯ್ಕೆಯಾಗಿ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುತ್ತೇನೆಂದು ತಮ್ಮ ಮುಂದೆ ಪ್ರಮಾಣ ವಚನ ಸ್ವೀಕರಿಸಿ ಒಂದು ಸಂವಿಧಾನಿಕ ಹುದ್ದೆಯಲ್ಲಿರುವ ಸಂಸದ ಅನಂತಕುಮಾರ್ ಹೆಗಡೆಯವರು ರಾಷ್ಟçಪಿತ ಮಹಾತ್ಮ ಗಾಂಧೀಜಿಯವರನ್ನು ಅವಹೇಳನ ಮಾಡಿ ರಾಷ್ಟçಕ್ಕೂ ನಮ್ಮ ರಾಷ್ಟçದ ಜನತೆಗೂ, ಸಂವಿಧಾನಕ್ಕೂ ವಿಶೇಷವಾಗಿ ಉತ್ತರ ಕನ್ನಡ ಕ್ಷೇತ್ರದ ಜನತೆಗೆ ಅವಮಾನ ಮಾಡಿದ್ದಾರೆ.
ಇಂಥವರು ಒಬ್ಬ ಜನಪ್ರತಿನಿಧಿಯಾಗಿ ಸಂವಿಧಾನಬದ್ಧ ಹುದ್ದೆಯ ಜವಾಬ್ದಾರಿ ಹುದ್ದೆಯಾದ ಸಂಸದರ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ. ಅಷ್ಟೇ ಅಲ್ಲದೆ ಈಗಾಗಲೇ ಸಂವಿಧಾನದ ಬಗ್ಗೆ ತಮ್ಮ ಬೇಜವಾಬ್ದಾರಿ ಹೇಳಿಕೆ ಹಾಗೂ ನಡವಳಿಕೆಯಿಂದ ಈ ಹಿಂದೆ ಸಂಸತ್ತಿನಲ್ಲಿ ಕ್ಷಮೆಯಾಚಿಸಿದ್ದಾರೆ.
ಪದೇ ಪದೇ ಇಂತಹ ದೇಶದ್ರೋಹ ಹೇಳಿಕೆ ಹಾಗೂ ನಡವಳಿಕೆಯುಳ್ಳ ಸಂಸದ ಅನಂತಕುಮಾರ್ ಹೆಗಡೆಯವರು ಜವಾಬ್ದಾರಿಯುತ ಸಂಸದರ ಹುದ್ದೆಯಲ್ಲಿ ಮುಂದುವರಿಯಲು ಯೋಗ್ಯರಲ್ಲ.

ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕ್ಷೇತ್ರ ಸಂಸದ ಅನಂತಕುಮಾರ್ ಹೆಗಡೆಯವರು ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿ ಭಟ್ಕಳ ಬ್ಲಾಕ ಕಾಂಗ್ರೆಸ ಸಹಾಯಕ ಕಮಿಷನರ್ ಭಟ್ಕಳ ಅವರ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಜೆ.ಡಿ.ನಾಯ್ಕ ‘೬ ಬಾರಿ ಕ್ಷೇತ್ರದಿಂದ ಆಯ್ಕೆಗೊಂಡು ಸಂಸದರಾಗಿದ್ದು, ಇವರ ಟೀಕೆ ಟಿಪ್ಪಣಿಗೆ ಅವರ ಪಕ್ಷದಿಂದಲೇ ನೋಟಿಸ್ ನೀಡಿದ್ದಾರೆ. ಇವರ ಮಾತು ಸಂವಿಧಾನಕ್ಕೆ ಅಪಮಾನ ಮಾಡುವದರೊಂದಿಗೆ ಸ್ವಾತಂತ್ರö್ಯ ತಂದು ಕೊಟ್ಟ ನಾಯಕರಿಗೆ ಅವಮಾನ ಮಾಡಿದಂತಾಗಿದೆ. ನಾಯಕರು ಸೋಗಲಾಡಿತನದಿಂದ ಸ್ವಾತಂತ್ರö್ಯ ತಂದಿದ್ದಾರೆAಬ ಹೇಳಿಕೆ ನೀಡಿದ ಸಂಸದರ ಬಾಯಿಗೆ ಗೋಣಿ ಚೀಲ ಹೊಲಿಯುವ ದಬ್ಬಣದಿಂದ ಬಾಯಿಯನ್ನು ಹೊಲಿಯಬೇಕು. ಕ್ಷೇತ್ರಕ್ಕೆ ಒಂದು ಪೈಸೆಯೂ ಕೆಲಸ ಮಾಡದ ಇವರಿಗೆ ಪಕ್ಷದಿಂದಲು ಹೊರಗೆ ಹಾಕಿ ಸಾಂವಿಧಾನಿಕ ಹುದ್ದೆಗೆ ಅರ್ಹರಲ್ಲ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಬ್ಲಾಕ ಕಾಂಗ್ರೆಸ ಅಧ್ಯಕ್ಷ ಸಂತೋಷ ನಾಯ್ಕ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ನಾಯ್ಕ, ಕಾಂಗ್ರೆಸ್ ಪ್ರಮುಖರಾದ ಅಬ್ದುಲ್ ರಹೀಂ, ಸತೀಶ ಆಚಾರಿ, ನಾಗೇಶ ದೇವಾಡಿಗ, ಗಣಪತಿ ನಾಯ್ಕ, ಸತೀಶ ನಾಯ್ಕ ಸೇರಿದಂತೆ ಮುಂತಾದವರು ಇದ್ದರು.

error: