December 6, 2024

Bhavana Tv

Its Your Channel

ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಹೇಮಗಿರಿಯಲ್ಲಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿಯವರ ತೆಪ್ಪೋತ್ಸ

ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಹೇಮಗಿರಿಯಲ್ಲಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿಯವರ ತೆಪ್ಪೋತ್ಸ
ವವು ಹೇಮಾವತಿ ನದಿಯಲ್ಲಿ ಸಡಗರ ಸಂಭ್ರಮದಿAದ ಅದ್ದೂರಿಯಾಗಿ ನಡೆಯಿತು ….

ಮುಜರಾಯಿ ಅಧಿಕಾರಿಗಳಾದ ತಹಶೀಲ್ದಾರ್ ಎಂ.ಶಿವಮೂರ್ತಿ ಅವರು ತೆಪ್ಪದಲ್ಲಿ ವಿರಾಜಮಾನರಾಗಿದ್ದ ಕಲ್ಯಾಣ ವೆಂಕಟರಮಣಸ್ವಾಮಿಯವರ ಉತ್ಸವ ಮೂರ್ತಿಗೆ ವಿಶೇಷ ಪೂಜೆಸಲ್ಲಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು…ವಿವಿಧ ಬಣ್ಣ ಬಣ್ಣದ ವಿದ್ಯುದ್ಧೀಪಗಳು ಹಾಗೂ ವಿವಿಧ ಬಗೆಯ ಹೂವುಗಳಿಂದ ಅಲಂಕೃತವಾಗಿದ್ದ ತೆಪ್ಪವನ್ನು ದೊಡ್ಡ ದೊಡ್ಡ ಡ್ರಂಗಳನ್ನು ಬಳಸಿ ತಯಾರಿಸಲಾಗಿತ್ತು…

ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಸ್ವಾಮಿಯ ದರ್ಶನ ಪಡೆದು ತೆಪ್ಪೋತ್ಸವದ ಸೌಂದರ್ಯ ಹಾಗೂ ಸೊಬಗನ್ನು ಕಣ್ತುಂಬಿಕೊAಡರು..
ಬಾಣಬಿರುಸುಗಳು, ಹೂಕುಂಡಗಳ ಸಿಡಿತ, ಆಕಾಶಬುಟ್ಟಿಗಳ ಹಾರಾಟವು ತೆಪ್ಪೋತ್ಸವದ ಸೌಂದರ್ಯವನ್ನು ದುಪ್ಪಟ್ಟುಗೊಳಿಸಿತ್ತು. ಜಿಲ್ಲಾ ಪಂಚಾಯತಿ ಸದಸ್ಯ ರಾಮದಾಸು, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ರಾಜಶ್ವನಿರೀಕ್ಷಕಿ ಚಂದ್ರಕಲಾ ಸೇರಿದಂತೆ ಬಂಡಿಹೊಳೆ, ನಾಟನಹಳ್ಳಿ, ಕುಪ್ಪಹಳ್ಳಿ, ಬೆಳ್ಳಿಬೆಟ್ಟದಕಾವಲು, ಮಾಕವಳ್ಳಿ, ಬೀರವಳ್ಳಿ, ಅಕ್ಕಿಹೆಬ್ಬಾಳು, ಸಾಕ್ಷೀಬೀಡು ಸೇರಿದಂತೆ ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಜನರು ತೆಪ್ಪೋತ್ಸವದಲ್ಲಿ ಭಾಗವಹಿಸಿದ್ದರು…

ಒಂದು ವಾರಗಳ ಕಾಲ ಅದ್ದೂರಿಯಾಗಿ ಜರುಗಿದ ಹೇಮಗಿರಿ ದನಗಳ ಜಾತ್ರೆಯು ತೆಪ್ಪೋತ್ಸವದೊಂದಿಗೆ ಸಾಂಪ್ರದಾಯಕವಾಗಿ ಅಂತ್ಯಗೊAಡಿತು.. ಕಡ್ಲೆಪುರಿ, ಖರ್ಜೂರ, ಜಿಲೇಬಿ, ಕಲ್ಯಾಣಸೇವೆ, ಲಾಡು ವ್ಯಾಪಾರವು ಭರ್ಜರಿಯಾಗಿ ನಡೆಯಿತು…

ಯಾವುದೇ ಗಲಾಟೆ ಗದ್ದಲಗಳಿಗೆ ಅವಕಾಶವಿಲ್ಲದಂತೆ ಹೇಮಗಿರಿ ಜಾತ್ರೆಯು ಯಶಸ್ವಿಯಾಗಿ ಸಂಪನ್ನಗೊAಡ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ ಸಾರ್ವಜನಿಕರು ಹಾಗೂ ರೈತ ಬಾಂಧವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ…

error: