April 24, 2024

Bhavana Tv

Its Your Channel

ಕರೊನಾ ವೈರಸ್‌ಗೆ ತಾಲೂಕಿನ ಜನತೆ ಭಯಪಡುವ ಅಗತ್ಯವಿಲ್ಲ. ಕುಮಟಾ ತಾಲೂಕಾ ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ

ಕುಮಟಾ:
ಕರೊನಾ ವೈರಸ್‌ಗೆ ತಾಲೂಕಿನ ಜನತೆ ಭಯಪಡುವ ಅಗತ್ಯವಿಲ್ಲ. ಇಲಾಖೆಯಿಂದ ಸಾರ್ವತ್ರಿಕವಾಗಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಕುಮಟಾ ತಾಲೂಕಾ ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ತಿಳಿಸಿದರು

ಅವರು ತಾಲೂಕಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ತಾಪಂ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಕಳೆದ ವರ್ಷ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದ ಯಾಣದ ಸುತ್ತಮುತ್ತಲ ೫ ಕಿಮೀ ವ್ಯಾಪ್ತಿಯಲ್ಲಿ ನಿಯಮಾವಳಿಯಂತೆ ಮುಂಜಾಗ್ರತಾ ಲಸಿಕೆ ಕಾರ್ಯಕ್ರಮಕ್ಕೆ ತೀರಾ ಹಿನ್ನಡೆಯಾಗಿದೆ. ಗ್ರಾಮದ ಜನತೆ ಲಸಿಕೆ ಹಾಕಿಸಿಕೊಳ್ಳಲು ತಯಾರಿಲ್ಲ ಎಂದು ತಿಳಿಸಿದರು. ಕರೊನಾ ವೈರಸ್‌ಗೆ ತಾಲೂಕಿನ ಜನತೆ ಭಯಪಡುವ ಅಗತ್ಯವಿಲ್ಲ. ಇಲಾಖೆಯಿಂದ ಸಾರ್ವತ್ರಿಕವಾಗಿ ಕಟ್ಟೆಚ್ಚರ ವಹಿಸಲಾಗಿದೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ ಮೀನುಗಾರರಿಗೆ ನೀಡಲಾಗುವ ಬಡ್ಡಿ ರಹಿತ ಸಾಲ ಸೌಲಭ್ಯ ಫಲಾನುಭವಿಗಳಿಗೆ ದೊರಕುತ್ತಿಲ್ಲ. ಇಲ್ಲಿಯೂ ಸಾಲ ಕೊಡಿಸಲು ಎಜೆಂಟರು ಹುಟ್ಟಿಕೊಂಡಿದ್ದಾರೆ. ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದರು.
ಮೀನುಗಾರಿಕೆ ಸಹಾಯಕ ನಿರ್ದೇಶಕ ರವೀಂದ್ರ ತಳೇಕರ, ಫಲಾನುಭವಿಗೆ ಮಂಜೂರಾದ ಸಾಲವನ್ನು ಕೊಡಲು ಬ್ಯಾಂಕುಗಳು ನಿರಾಕರಿಸುತ್ತಿವೆ ಎಂದರು. ಪ್ರಸಕ್ತ ಸಾಲಿನಲ್ಲಿ ಈವರೆಗೆ ಮೀನುಗಾರಿಕೆ ಆವಕ ಪ್ರಮಾಣ ತೀರಾ ಕುಸಿದಿದ್ದು ನಿಯಮಬಾಹಿರ ಹಾಗೂ ಅವೈಜ್ಞಾನಿಕ ಮೀನುಗಾರಿಕೆಯೇ ಇದಕ್ಕೆ ಕಾರಣ ಎಂದರು.ಇನ್ನೂ ಮಿರ್ಜಾನದಲ್ಲಿ ಗ್ರಿಡ್ ಅಳವಡಿಸಿ ಎಂದು ಹಲವು ವರ್ಷಗಳ ಹಿಂದೆಯೇ ಪ್ರಸ್ತಾವನೆ ಕಳುಹಿಸಲಾಗಿತ್ತು. ಉತ್ತರವೇಇಲ್ಲ. ಇನ್ನೊಮ್ಮೆ ಪ್ರಸ್ತಾವನೆ ಕಳುಹಿಸಿ ಎಂದು ಹೆಸ್ಕಾಂ ಪ್ರಗತಿ ಪರಿಶೀಲನೆ ಸರದಿಯಲ್ಲಿ ಇಂಜಿನಿಯರ್ ಎಂ.ಎ.ಪಠಾಣರಿಗೆ ತಿಳಿಸಿದರು.
ಅಧ್ಯಕ್ಷೆ ವಿಜಯಾ ಪಟಗಾರ ಮಾತನಾಡಿ, ವಾಲಗಳ್ಳಿಯ ಕಡೇಕೋಡಿ ಅಂಗನವಾಡಿಗೆ ನೀರಿನ ಸೌಲಭ್ಯ ಒದಗಿಸಲು ಜನ ಮನವಿ ಮಾಡಿದ್ದಾರೆ. ಸೂಕ್ತ ಕ್ರಮಕೈಗೊಳ್ಳಿ ಎಂದು ಪ್ರಭಾರ ಸಿಡಿಪಿಓ ವಿಜಯಾ ನಾಯ್ಕರಿಗೆ ಸೂಚಿಸಿದರು.

ಗ್ರಾಮೀಣ ಕುಡಿಯುವ ನೀರು ವಿಭಾಗದ ಇಂಜಿನಿಯರ್ ರಾಘವೇಂದ್ರ ನಾಯ್ಕ, ಕಳೆದ ಸಾಲಿನಲ್ಲಿ ಕುಡಿಯುವ ನೀರು ಪೂರೈಕೆಯ ೬೦ ಕಾಮಗಾರಿಗಳನ್ನು ಕೈಗೆತ್ತಿಕೊಂಡು ೫೩ ಕಾಮಗಾರಿ ಮುಗಿಸಲಾಗಿದ್ದು ೭ ಕಾಮಗಾರಿ ಇನ್ನೂ ಬಾಕಿ ಇದೆ. ಈ ಬಾರಿ ಕೈಗೆತ್ತಿಕೊಂಡ ೬೦ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಉಳಿದಂತೆ ಸಭೆಯಲ್ಲಿ ವಿವಿಧ ಇಲಾಖೆಗಳ ಅ?ಕಾರಿಗಳು ಹಾಜರಿದ್ದು ಮಾಹಿತಿ ನೀಡಿದರು

ತೋಟಗಾರಿಕೆ ಸಹಾಯಕ ನಿರ್ದೇಶಕ ಚೇತನ ನಾಯ್ಕ ಮಾತನಾಡಿ. ವನ್ನಳ್ಳಿ ಭಾಗದಲ್ಲಿ ಈರುಳ್ಳಿ ಬೆಳೆಗೆ ರೋಗಬಾಧೆಯಾಗಿದೆ. ಈ ಬಗ್ಗೆ ಜನರಿಗೆ ಸರಿಯಾದ ತಿಳುವಳಿಕೆ ನೀಡುವ ಹಾಗೂ ತರಬೇತಿಗೊಳಿಸುವ ಅವಶ್ಯಕತೆ ಇದೆ. ಸದ್ಯದಲ್ಲೇ ತಜ್ಞರು ಬಂದು ಈರುಳ್ಳಿ ಗದ್ದೆಗೆ ಭೇಟಿ ನೀಡಿ ರೈತರಿಗೆ ಮಾಹಿತಿ ನೀಡಲಿದ್ದಾರೆ ಎಂದರು. ತಾಲೂಕಿನಲ್ಲಿ ೧೯ ಶಾಲೆಗಳಲ್ಲಿ ತಲಾ ೧೨ ಸಾವಿರ ರೂ ವೆಚ್ಚದಲ್ಲಿ ಪೌಷ್ಟಿಕತೋಟ ನಿರ್ಮಾಣ ಕಾರ್ಯ ನಡೆದಿದೆ ಎಂದರು

error: