March 30, 2023

Bhavana Tv

Its Your Channel

ಗೊರಟೆ ಪ್ರೌಢಶಾಲೆಯಲ್ಲಿ ನಡೆಯಿತು ಭಾವಪೂರ್ಣ ಮಾತೃವಂದನ ಕಾರ್ಯಕ್ರಮ

ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಮೂಡಿಸುವ ಮಾತೃವಂದನ ಕಾರ್ಯಕ್ರಮವು ಭಟ್ಕಳ ಗೊರಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಬೆಳಕೆ ಪಂಚಾಯತ್ ಸದಸ್ಯ ಮೋಹನ ನಾಯ್ಕ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಪ್ರಾರ್ಥನಾ ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ವ್ಯಕ್ತಿಯ ಬದುಕಿನಲ್ಲಿ ತಾಯಿಯ ಪಾತ್ರ ಬಹಳ ಪ್ರಮುಖ. ತಾಯಿಯ ಹೊರತಾಗಿ ಬದುಕನ್ನು ಕಲ್ಪಿಸಿಕೊಳ್ಳಲಾಗದು. ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ ಎಂಬುದು ಈ ನೆಲದ ಸಂಸ್ಕೃತಿ. ಹೆತ್ತವರ ಆಶಿರ್ವಾದ, ಹಾರೈಕೆಯಿದ್ದಲ್ಲಿ ವ್ಯಕ್ತಿಯ ಬದುಕಿನಲ್ಲಿ ನಿಶ್ಚಿತವಾಗಿ ಯಶಸ್ಸನ್ನು ಕಾಣುತ್ತಾನೆ. ಯಾವುದೇ ನಿರೀಕ್ಷೆ,ಪ್ರತಿಫಲ ಬಯಸದ,ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ತಾಯಿಯ ಋಣ ತೀರಿಸಲಾಗದು. ಅಂಥ ತಾಯಿಯ ಜೊತೆಗೆ ತಂದೆಯನ್ನೂ ಗೌರವದಿಂದ ಕಂಡು, ಅವರ ಸಂಧ್ಯಾಕಾಲದಲಿ ಪ್ರೀತಿಯಿಂದ ನೋಡಿಕೊಳ್ಳುವುದೂ ನಮ್ಮ ಆದ್ಯ ಕರ್ತವ್ಯ ಎಂದು ನುಡಿದರಲ್ಲದೇ ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸಲು ತಾಲೂಕಿಗೇ ಮಾದರಿಯಾದ ಕಾರ್ಯಕ್ರಮವನ್ನು ಆಯೋಜಿಸಿದ ಶಾಲೆಯ ಮುಖ್ಯಾಧ್ಯಾಪಕರಾದಿಯಾಗಿ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿಯವರ ಕಾರ್ಯ ನಿಜಕ್ಕೂ ಶ್ಳಾಘನೀಯ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ಡಿ.ಎಂ.ಸಿ.ಸದಸ್ಯ ಗೋವರ್ಧನ್ ನಾಯ್ಕ ಮಾತನಾಡಿ ಮಕ್ಕಳು ಸಂಸ್ಕಾರವAತರಾಗಿ ಬೆಳೆದಾಗ ಮಾತ್ರ ನಿಜವಾಗಿ ಶಿಕ್ಷಣ ಪಡೆದಂತೆ. ಗುರು ಹಿರಿಯರನ್ನ ಗೌರವಿಸುವ ಸಂಸ್ಕಾರವನ್ನು ಮೈಗುಡಿಸಿಕೊಂಡು ಅರ್ಥಪೂರ್ಣ ಬದುಕನ್ನು ಸಾಗಿಸಬೇಕೆಂದು ನುಡಿದರಲ್ಲದೇ ಇಂಥ ಅರ್ಥಪೂರ್ಣ ಕಾರ್ಯಕ್ರಮ ಸಂಘಟಿಸಿದ ಶಾಲೆಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೃಷ್ನಮೂರ್ತಿ ಭಟ್ ತಾಯಿಯ ಮಹತ್ವದ ಕುರಿತು ಮಾತನಾಡಿ ಮಾತೃವಂದನಾ ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ವಿಧಿವತ್ತಾಗಿ ಮಕ್ಕಳಿಂದ ನೆರವೇರಿಸಿದರು. ಮಕ್ಕಳು ತಮ್ಮ ತಾಯಂದಿರ ಪಾದ ಪೂಜೆ ಮಾಡಿ ಮಾತೃವಂದನೆಯನ್ನು ಸಲ್ಲಿಸಿದರು. ಮಾತೆಯಂದಿರು ಮಕ್ಕಳಿಂದ ನಮನ ಸ್ವೀಕರಿಸಿ ಮಕ್ಕಳನ್ನು ಆಶೀರ್ವದಿಸುವ ಕ್ಷಣವು ಅತ್ಯಂತ ಭಾವಪೂರ್ಣವಾಗಿತ್ತು. ವೇದಿಕೆಯಲ್ಲಿಉಪಸ್ಥಿತರಿದ್ದ ಶಾಲಾ ಮುಖ್ಯಾಧ್ಯಾಪಕ ರಾಘವೇಂದ್ರ ನಾಯ್ಕ ಮಾತೃವಂದನಾ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿ ಮಕ್ಕಳು ಶಿಕ್ಷಣದ ಜೊತೆಗೆ ಸಂಸ್ಕಾರವAತರಾಗಬೇಕು, ಹೃದಯಕ್ಕೆ ಶಿಕ್ಷಣ ನೀಡುವ ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ವಿದ್ಯಾರ್ಥಿಗಳಾದ ಪ್ರಿಯಾಂಕ, ಭರತ್ ಮತ್ತು ಅಕ್ಷತಾ ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು. ಇದೇ ಸಂದರ್ಭದಲ್ಲಿ ೨೦೧೯-೨೦ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಗೆ ಅತ್ಯಂತ ಹೆಚ್ಚು ಅಂಕ ಗಳಿಸಿದ ಲೋಹಿತ ಮಧುಕರ ನಾಯ್ಕ ಇತನನ್ನು ಪರಸ್ಕರಿಸಿ ಸನ್ಮಾನಸಿಲಾಯಿತಲ್ಲದೇ ವಿಷಯವಾರು ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಯಾ ವಿಷಯ ಶಿಕ್ಷಕರು ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ.ಸದಸ್ಯರಾದ ಮಂಜುನಾಥ, ವೆಂಕಟೇಶ್, ಶಿಕ್ಷಕರಾದ ಪ್ರತಿಮಾ, ಸಂತೋಷ್ ಹಾಗೂ ವಿದ್ಯಾರ್ಥಿಗಳ ತಾಯಂದಿರು ಉಪಸ್ಥಿತರಿದ್ದರು. ಶಾಲಾ ವಿಧ್ಯಾರ್ಥಿಗಳು ಪ್ರಾರ್ಥಿಸಿದರೆ ಶಿಕ್ಷಕಿ ನಾಗವೇಣಿ ನಾಯ್ಕ ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕಿ ಶಿಲ್ಪಾ ವಂದಿಸಿದರು. ತಾಲೂಕಿಗೇ ಮಾದರಿಯಾದ ವಿಶಿಷ್ಟ ಹಾಗೂ ಭಾವಪೂರ್ಣ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

About Post Author

error: