September 16, 2024

Bhavana Tv

Its Your Channel

ಗೋಲ್ ಇಂಟರನ್ಯಾಶನಲ್ ಪಬ್ಲಿಕ್ ಸ್ಕೂಲ್ ಮಂಕಿ. ಗೋಲ್ ಉತ್ಸವ ೨೦೨೦ ಇದೇ ಬರುವ ಫೆಬ್ರವರಿ ೬ ರಂದು

ಗೋಲ್ ಇಂಟರನ್ಯಾಶನಲ್ ಪಬ್ಲಿಕ್ ಸ್ಕೂಲ್ ಮಂಕಿ ಇವರ ವತಿಯಿಂದ ಗೋಲ್ ಉತ್ಸವ ೨೦೨೦ ಇದೇ ಬರುವ ಫೆಬ್ರವರಿ ೬ ರಂದು ನಡೆಯಲಿದೆ ಎಂದು ಡೈರಕ್ಟರ್ ದೀಪಾ ರಾವ್ ಮಾಧ್ಯಮಗೊಷ್ಟಿಯಲ್ಲಿ ತಿಳಿಸಿದರು.

ಪಟ್ಟಣದ ಖಾಸಗಿ ಹೋಟೆಲನಲ್ಲಿ ನಡೆದ ಮಾಧ್ಯಮಗೊಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಜಿಲ್ಲೆಯಲ್ಲಿಯೇ ವಿಶೇಷ ಸೌಲಭ್ಯ ಹೊಂದಿರುವ ಸಂಸ್ಥೆ ಗೋಲ್ ಸ್ಕೂಲ್ ಆಗಿದೆ. ಪ್ರತಿವರ್ಷ ಅದ್ದೂರಿಯಾಗಿ ವಾರ್ಷಿಕೊತ್ಸವ ನಡೆಸುತ್ತಿದ್ದು ಮಕ್ಕಳಲ್ಲಿರುವ ಕೌಶಲ್ಯವನ್ನು ಗುರುತಿಸಿ ಅನಾವರಣಗೊಳಿಸುವ ಉದ್ದೇಶದಿಂದ ಗೋಲ್ ಉತ್ಸವವನ್ನು ಆಯೋಜಿಸುತ್ತಾ ಬಂದಿದ್ದೇವೆ. ಮಕ್ಕಳಲ್ಲಿ ಅಡಗಿರುವ ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲದೇ ವಿದ್ಯಾರ್ಥಿಗಳ ಆತ್ಮ ವಿಶ್ವಾಸ ತುಂಬಲು ದೊಡ್ಡ ವೇದಿಕೆ ಹಾಗೂÀ ಜಗತ್ತಿನ ನೃತ್ಯ ಪ್ರಕಾರಗಳ ಅನಾವರಣ ಮತ್ತು ಮಹಿಳೆಯ ಸ್ಥಾನಮಾನ, ದೇಶಾಭಿಮಾನ, ಪೃಕೃತಿಯ ಕುರಿತ ಗೌರವ ಭಾವನೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಬೆಂಗಳೂರಿನಿAದ ಕೋರಿಯೊಗ್ರಪರ್ ಕರೆ ತಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳು ಬೇರೆ ಬೇರೆ ದೇಶಗಳ ಸಂಸ್ಕೃತಿಯನ್ನು ಅಲ್ಲಿನ ವಸ್ತç ವಿನ್ಯಾಸದೊಂದಿಗೆ ಪ್ರದರ್ಶನ ನೀಡಲಿದ್ದಾರೆ. ಈ ವರ್ಣರಂಜಿತ ಕಾರ್ಯಕ್ರಮಕ್ಕೆ ಎಲ್ಲರೂ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಕಾರ್ಯದರ್ಶಿ ಕೆ. ಗಂಗಪ್ಪ ಗೌಡ ಪಾಲ್ಗೊಳ್ಳುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ, ಎಡಿಸಿ ನಾಗರಾಜ ಸಿಂಗರೆರ, ಡಿಡಿಪಿಐ ನಾರಾಯಣ ನಾಯಕ, ಬಿಇಒ ಜಿ.ಎ.ನಾಯ್ಕ ಪಾಲ್ಗೊಳ್ಳುವರು. ಗೋಲ್ ಸಂಸ್ಥೆಯ ಚೇರಮನ್ ಎ.ಆರ್.ನಾಯಕ ಅಧ್ಯಕ್ಷತೆ ವಹಿಸುವರು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ರಮೇಶ ಯರಗಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಮಲ್ಲಯ್ಯ ಉಪಸ್ಥಿತರಿದ್ದರು.

error: