March 30, 2023

Bhavana Tv

Its Your Channel

ಹಾಡುಹಗಲೇ ರಿಯಲ್‌ ಎಸ್ಟೇಟ್ ಉದ್ಯಮಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನ: ಬೆಚ್ಚಿ ಬಿದ್ದ ಬಸ್ತಿಯ ಜನರು

ಭಟ್ಕಳ : ಕಾರನಲ್ಲಿ ಕುಳಿತು ‌ಮೊಬೈಲನಲ್ಲಿ ಮಾತನಾಡುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳು ಬಂದು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಪರಿಣಾಮ ವ್ಯಕ್ತಿಯ ಬಲಗೈ ಬರ್ಬರವಾಗಿ ಹರಿದು ಹೋಗಿದ್ದು ಹೆಚ್ಚಿನ ಚಿಕಿತ್ಸೆ ಹಿನ್ನೆಲೆ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿರುವ ಘಟನೆ ಮಂಗಳವಾರದಂದು ಸಂಜೆ ಬಸ್ತಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಟ್ಟಡ ಎದುರಿಗೆ ಹಾಡುಹಗಲೇ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿ ನಾಗಪ್ಪ ನಾಗಪ್ಪ ನಾಯ್ಕ(ಸಣ್ತಮ್ಮ) (45) ಎಂದು ತಿಳಿದು ಬಂದಿದೆ. ಮುರ್ಡೇಶ್ವರದಲ್ಲಿ ರಿಯಲ್‌ ಎಸ್ಟೇಟ್ ಉದ್ಯಮಿ ಎಂದು ತಿಳಿದು ಬಂದಿದೆ‌.
ಮಂಗಳವಾರದಂದು ತನ್ನ ಕಾರಿನಲ್ಲಿ ಬಸ್ತಿಯ ಬಳಿಯಲ್ಲಿ ಹೆದ್ದಾರಿ‌ ಪಕ್ಕದಲ್ಲಿ ಗ್ಲಾಸ್ ಹಾಕಿ ಮೊಬೈಲನಲ್ಲಿ ಮಾತನಾಡುತ್ತಿದ್ದ ವೇಳೆ ಬೈಕ್ ಮೇಲೆ ಬಂದ ಇಬ್ಬರು ವ್ಯಕ್ತಿಗಳು ಕಾರನಲ್ಲಿ ಕುಳಿತಿದ್ದ ವ್ಯಕ್ತಿಗೆ ಕಾರಿನ ಗಾಜು ಒಡೆದು ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ಕಾರು ಹಾಗೂ ರಸ್ತೆಯ ತುಂಬೆಲ್ಲ ರಕ್ತಸಿಕ್ತವಾಗಿದ್ದು, ಜನರು ಘಟನೆಯಿಂದ ಬೆಚ್ಚಿ ಬಿದ್ದಿದ್ದಾರೆ.

ಹಾಡುಹಗಲೇ ಜನದಟ್ಟಣೆಯ ಪ್ರದೇಶದಲ್ಲಿ ಚೂರಿ ಇರಿದು ಕೊಲೆಗೆ ಯತ್ನಿಸಿದ್ದು ಒಂದು ಹಂತಕ್ಕೆ ಅಕ್ಕಪಕ್ಕದ ಅಂಗಡಿಯಲ್ಲಿದ್ದ ಜನರಿಗೆ ಏನಾಗುತ್ತಿದೆ ಎಂಬುದು ತಿಳಿಯಲಿಲ್ಲವಾಗಿದ್ದು, ಹಲ್ಲೆಕೊರರಿಂದ ವ್ಯಕ್ತಿಯನ್ನು ಜನರು ತಪ್ಪಿಸಲು ಯತ್ನಿಸಿದ್ದಾದರು ಹಲ್ಲೆಕೊರರು ಜನರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿ ಚೂರಿ ಇರಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಕಾರಿನಿಂದ ಇಳಿದ ವ್ಯಕ್ತಿಯನ್ನು ಮೂರು ಸುತ್ತು ಕಾರಿನ ಸುತ್ತಲು ಓಡಾಡಿಸಿ ಹಲ್ಲೆಗೆ ಯತ್ನಿಸಿದ್ದು ಪ್ರಾಣಾಪಾಯದಿಂದ ಪರಾರಿಯಾಗಿದ್ದಾನೆ. ತಕ್ಷಣಕ್ಕೆ ಅಲ್ಲಿನ ಜನರು ಹಲ್ಲೆಗೊಳಗಾದ ವ್ಯಕ್ತಿಯನ್ನು ಸ್ಥಳಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಥಮ ಚಿಕಿತ್ಸೆ ನೀಡಿ ಭಟ್ಕಳ ಸರಕಾರಿ ಆಸ್ಪತ್ರೆಗೆ 108 ಅಂಬುಲೆನ್ಸ ಮೂಲಕ ಕರೆ ತಂದು ವ್ಯಕ್ತಿಗೆ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಹಿನ್ನೆಲೆ ಮಣಿಪಾಲ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.‌

ಘಟನೆ ನಡೆದ ಸ್ಥಳಕ್ಕೆ ಪ್ರಭಾರಿ ಡಿವೈಎಸ್ಪಿ ಅರವಿಂದ ಕರ್ಗುಜ್ಜಿ, ಮುರ್ಡೇಶ್ವರ ಠಾಣಾ ಪಿಎಸ್ಐ ಸಿಬ್ಬಂದಿಗಳು ಸ್ಥಳ ಹಾಗೂ ಕಾರು ಪರಿಶೀಲನೆ ನಡೆಸಿದ್ದಾರೆ.

ಹಲ್ಲೆಯೊಳಗಾದ ವ್ಯಕ್ತಿಯ ಬಲಗೈ ಚಾಕುವಿನಿಂದ ಇರಿದ ಪರಿಣಾಮ ಬಲವಾದ ಪೆಟ್ಟು ಬಿದ್ದಿದ್ದು ಬಸ್ತಿಯಲ್ಲಿನ ಜನರು ಈ ಘಟನೆಯಿಂದ ಕಕ್ಕಾಬಿಕ್ಕಿಯಾಗಿದ್ದಾರೆ.‌

ಘಟನೆಯ ಬಗ್ಗೆ ಹಲ್ಲೆಗೊಳಗಾದ ವ್ಯಕ್ತಿಯ ಹೇಳಿಕೆಗಾಗಿ ಮುರ್ಡೇಶ್ವರ ಪೊಲೀಸರು ಮಣಿಪಾಲ ಆಸ್ಪತ್ರೆಗೆ ತೆರಳಿ ಹೇಳಿಕೆ ಪಡೆದುಕೊಂಡಿದ್ದಾರೆ.

About Post Author

error: