ಕೆಲವು ಸಹಕಾರಿ ಸಂಘಗಳಲ್ಲಿ ಆಡಳಿತ ಮಂಡಳಿ ಹುದ್ದೆಗಾಗಿ ಭಾರೀ ತುರುಸಿನ ಚುನಾವಣೆ ನಡೆಯಿತು. ಪ್ರತಿಯೊಂದು ಮತಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿದರು. ಇತ್ತೀಚಿನ ಸಹಕಾರಿ ಕಾನೂನಿನಂತೆ ಮೂರು ಸಭೆಗೆ ಬರದಿದ್ದವರು ಮತಕ್ಕೆ ಅರ್ಹರಲ್ಲ. ಹೇಗೋ ಅವರ ಹಾಜರಿ ಹಾಕಿಸಿ, ೬ತಿಂಗಳ ಮೊದಲೇ ಮತಹಾಕುವಂತವರ ಸದಸ್ಯತ್ವದ ಹಣವನ್ನು ತೆತ್ತು ಚುನಾವಣೆಗೆ ನಿಂತವರಿದ್ದಾರೆ. ಸಹಕಾರಿ ಸಂಘದಲ್ಲಿ ಪಕ್ಷದ ಹೆಸರಿನಲ್ಲಿ ಸ್ಪರ್ಧಿಸುವಂತಿಲ್ಲ. ಬಹಿರಂಗವಾಗಿ ಶಾಸಕ, ಮಾಜಿಶಾಸಕರ ತಂಡವಾಗಿ ಚುನಾವಣೆ ನಿಂತು ಗೆದ್ದವರು ಲಕ್ಷಾಂತರ ರೂಪಾಯಿ ಜಾಹಿರಾತಿಗೆ ಸುರಿಯುತ್ತಾರೆ. ಇಷ್ಟಾಗಿಯೂ ನಂತರ ಇವರು ಮಾಡುವುದೇನು? ಜಾತಿ ತಂಡಕಟ್ಟಿ, ಗೆದ್ದವರು ಜಾತಿಯವರಿಗೂ ಸಹಾಯ ಮಾಡುವುದಿಲ್ಲ. ಶಿರ್ಸಿ ಟಿಎಸ್‌ಎಸ್‌ನಂತ ಸಂಸ್ಥೆಗಳು ರಾಷ್ಟçಮಟ್ಟದಲ್ಲಿ ಗುರುತಿಸಲ್ಪಟ್ಟಿರುವಾಗ ಕರಾವಳಿಯ ಹೆಚ್ಚಿನ ಸಹಕಾರಿ ಸಂಘಗಳು ನಿರ್ಜೀವಗೊಂಡಿವೆ. ಪಕ್ಷ, ಜಾತಿ ರಾಜಕಾರಣಕ್ಕೆ ಸಹಕಾರ ಬಲಿಯಾಗುತ್ತಿದೆ.
ಸಹಕಾರಿ ಸಂಘಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ನಡುವೆ ಪರಸ್ಪರ ವಿಶ್ವಾಸವಿದ್ದರೆ, ಒಟ್ಟಾಗಿ ದುಡಿದರೆ ಸದಸ್ಯರಿಗೂ ವಿಶ್ವಾಸ ಹುಟ್ಟುತ್ತದೆ, ಪ್ರಯೋಜನವಾಗುತ್ತದೆ. ತಾಲೂಕಿನ ಕೆಲವು ಸಹಕಾರಿ ಸಂಘಗಳಲ್ಲಿ ಹುತ್ತ ಕಟ್ಟಿದ ಬ್ರಷ್ಟಾಚಾರ, ನಿಷ್ಕಿçÃಯತೆ ಸಹಕಾರಿ ಸಂಘದ ಘನತೆ, ಗೌರವವನ್ನು ಕಡಿಮೆ ಮಾಡಿದೆ. ಸಂಘದ ಅಧ್ಯಕ್ಷ ಮಂಡಳಿಯ ನಿರ್ಲಕ್ಷö್ಯ ಅಥವಾ ಪಾಲ್ಗೊಳ್ಳುವಿಕೆ ಇಲ್ಲದೆ ಸಿಬ್ಬಂದಿಗಳು ಬ್ರಷ್ಟಾಚಾರ ಮಾಡುವುದು ಖಂಡಿತ ಸಾಧ್ಯವಿಲ್ಲ. ಸ್ವಂತ ಆಸ್ತಿಯ ಉದ್ಧಾರಕ್ಕೆ ತೋರಿದ ಕಾಳಜಿಯ ಕೆಲ ಅಂಶವನ್ನಾದರೂ ತಾವು ಪದಾಧಿಕಾರಿಗಳಾಗಿರುವ ಸಂಘಕ್ಕೆ ತೋರಿದರೆ ಅವು ತೂಕಡಿಸುವುದಿಲ್ಲ. ಹಳದೀಪುರ ಸಂಘ ಕೊಟ್ಯಾಂತರ ರೂಪಾಯಿ ಅವ್ಯವಹಾರ ಮಾಡಿದ ಪ್ರಕರಣ ಇನ್ನೂ ಮುಗಿದಿಲ್ಲ. ಅರೇಅಂಗಡಿಯ ಪ್ರಕರಣ ಒಂದು ಹಂತದಲ್ಲಿ ಮುಗಿದಿದೆ. ಹಲವಾರು ಮೇಲ್ಮನವಿಗಳು ಮತ್ತೆ ನ್ಯಾಯಾಲಯ, ಹೀಗೆ ಪ್ರಕರಣಗಳು ವಿಳಂಭವಾಗುತ್ತ ಹೋಗುತ್ತವೆ. ಈ ಮಧ್ಯೆ ಎಷ್ಟೋ ಜನ ಸಣ್ಣಪುಟ್ಟ ಉಳಿತಾಯದಾರರು ಹಾನಿಗೊಳಗಾಗುತ್ತಾರೆ. ತಾಲೂಕಾಮಟ್ಟದಲ್ಲಿ ಖ್ಯಾತಿಪಡೆದಿದ್ದ ಮಾರ್ಕೇಟಿಂಗ್ ಸೊಸೈಟಿ ಸೀಮೆಎಣ್ಣೆ ಮಾರಲು ಸೀಮಿತವಾಗಿದೆ. ಇದರ ಇತರ ಚಟುವಟಿಕೆಗಳು ನಿಂತು ಹೋಗಿವೆ. ಭೂ ಬ್ಯಾಂಕ ತಾಲೂಕಿನ ಶೇ. ೨೫ರಷ್ಟು ರೈತರಿಗೆ ನೆರವಾಗಿರಬಹುದು. ಶೇ. ೭೫ರಷ್ಟು ರೈತರು ಇನ್ನೂ ನಿಯಮಾವಳಿಯ ಕಾರಣ ಹೊರಗಿದ್ದಾರೆ.
ವರ್ಷಕ್ಕೆ ಒಂದು ಕೋಟಿ ರೂಪಾಯಿ ಹಂಚು ಉತ್ಪಾದಿಸುವ ರಾಜ್ಯದ ಮೊದಲ ಹಂಚಿನ ಕಾರ್ಖಾನೆ ಮುಚ್ಚಿಹೋಗಿದೆ. ಕತ್ತದ ಸಹಕಾರಿ ಸಂಘಗಳು ಎಂದೋ ಬಾಗಿಲು ಹಾಕಿವೆ. ಇನ್ನೂ ೫ ಗ್ರಾಮೀಣ ಸಹಕಾರಿ ಸಂಘಗಳು ಬ್ರೇಕಿಂಗ್ ನ್ಯೂಸ್ ಕೊಡಲು ಸಿದ್ಧವಾಗಿವೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಸಹಕಾರಿ ಸಂಘಗಳಿಗೆ ಹಣಕಾಸು ಒದಗಿಸುವ ಮಧ್ಯವರ್ತಿ ಬ್ಯಾಂಕ ಕಾಲಕಾಲಕ್ಕೆ ತಿದ್ದಬೇಕಾದ ಲೆಕ್ಕ ತಪಾಸಕರು ಏನು ಮಾಡುತ್ತಿದ್ದಾರೆಯೋ ಗೊತ್ತಿಲ್ಲ. ನ್ಯೂನ್ಯತೆಗಳನ್ನು ಗುರುತಿಸಿದರೆ ಮುಂದಿನ ಬಾರಿ ತಿದ್ದುಕೊಳ್ಳುತ್ತೇವೆ ಎಂದು ಆಡಳಿತ ಮಂಡಳಿ ಹೇಳುತ್ತದೆ. ಕೊನೆಗೂ ತಿದ್ದಲಾರದ ಪರಿಸ್ಥಿತಿ ಬರುತ್ತದೆ. ತುರ್ತು ತನಿಖೆ ಕೈಗೊಂಡು ವರ್ಷವರ್ಷವೂ ನಿರ್ದಾಕ್ಷಣ್ಯವಾಗಿ ಕ್ರಮಕೈಗೊಳ್ಳದೇ ನಾಲ್ಕಾರು ವರ್ಷದ ಹಗರಣ ವಾಸನೆ ಬೀರತೊಡಗಿದಾಗ ಎಚ್ಚರಾಗುವ ತನಿಖಾಧಿಕಾರಿಗಳು ರಾಜಕೀಯ ಆಶ್ರಯ ಪಡೆದಿರುತ್ತಾರೆ. ತಪ್ಪಿಸ್ಥ ಸಹಕಾರಿಗಳಿಗೂ ರಾಜಕೀಯ ಆಶ್ರಯವಿರುತ್ತದೆ. ಹೀಗಾದರೆ ಬಡ ಸದಸ್ಯನಿಗೆ ಅನ್ಯಾಯವಾಗುತ್ತದೆ.
ಶಿರ್ಸಿಯ ಟಿಎಸ್‌ಎಸ್, ಶಿರ್ಸಿ ಅರ್ಬನ್ ಬ್ಯಾಂಕ್ ರಾಷ್ಟçಮಟ್ಟದಲ್ಲಿ ಖ್ಯಾತಿ ಗಳಿಸಿರುವಾಗ, ಸೀಗೇಹಳ್ಳಿ ಶಾಂತಾರಾಮ ಹೆಗಡೆ, ಡಾ. ವಿ.ಎಸ್. ಸೋಂದೆ ಇವರಿಗೆ ಸಾಧ್ಯವಾಗಿರುವುದು ಇತರರಿಗೆ ಯಾಕೆ ಸಾಧ್ಯವಾಗುವುದಿಲ್ಲ. ಸಹಕಾರಿ ಸಂಸ್ಥೆಗಳು ಅಲಂಕಾರದ ಖುರ್ಚಿ ಅಲ್ಲ, ಮುಳ್ಳಿನ ಖುರ್ಚಿ ಎಂಬುದು ಗೊತ್ತಾದಾಗ ಮಾತ್ರ ಎಲ್ಲ ಸರಿಯಾಗುತ್ತದೆ. ಸ್ವಂತ ಆಸ್ತಿಯನ್ನು ಬೆಳೆಸುತ್ತ ಸಾರ್ವಜನಿಕ ಆಸ್ತಿಯನ್ನು ಹರಾಜುಹಾಕುವ ಸಹಕಾರಿಗಳಿಂದ ತಾಲೂಕಿನ ಸಹಕಾರಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದೆ, ಸಂಬAಧಿಸಿದವರು ಗಮನಿಸಬೇಕು. ಮರದ ಟೊಂಗೆ ಏರಿ ಕುಳಿತು ಆ ಟೊಂಗೆಯನ್ನು ಕಡಿಯುವವರ ಸಂಖ್ಯೆ ಹೆಚ್ಚುತ್ತಿದೆ.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.