September 16, 2024

Bhavana Tv

Its Your Channel

ಅಪಾಯದ ಸ್ಥಿತಿಗೆ ತಲುಪಿದ ಗರ್ಭಿಣಿ ಮತ್ತು ಮಗವನ್ನು ಕಾಪಾಡಿದ:ಡಾ. ಸವಿತಾ ಕಾಮತ

ಭಟ್ಕಳ: ಖಾಸಗಿ ವೈದ್ಯೆಯೊರ್ವರು ಮಾಡಿದ ಎಡಿವಟ್ಟಿನಿಂದ ಅಪಾಯದ ಸ್ಥಿತಿಗೆ ತಲುಪಿದ ಗರ್ಭಿಣಿ ಮತ್ತು ಮಗವನ್ನು ಭಟ್ಕಳದ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಯಶಸ್ವಿ ಶಸ್ತ್ರ ಚಿಕಿತ್ಸೆ ಕೊಡಿಸುವ ಮೂಲಕ ಅಪಾಯದಿಂದ ಮಾಡಿದ ಘಟನೆ ಭಾನುವಾರ ಬೆಳಗ್ಗಿನ ಜಾವ 3 ಗಂಟೆಗೆ ನಡೆದಿದೆ.
ಪಟ್ಟಣದ ನಿವಾಸಿಯಾಗಿರುವ ನವಮಾಸ ತುಂಬಿದ ಗರ್ಬೀಣಿ ಮಹಿಳೆಯೊರ್ವರು ಭಟ್ಕಳದ ಖಾಸಗಿ ವೈದ್ಯೆಯೊರ್ವರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಸಂಜೆ 6 ಗಂಟೆಗೆ ಹೊಟ್ಟೆನೋವಿನಿಂದ ಬಳಲುತ್ತಾ ವೈದ್ಯೆಯ ಬಳಿ ತೆರಳಿದ್ದಾರೆ. ಅವರ ಬಳಿ ನರ್ಸಿಂಗ್ ಹೋಮ್ ಇಲ್ಲದ ಕಾರಣ ಪಟ್ಟಣದ ಇನ್ನೊಂದು ಖಾಸಗಿ ನರ್ಸಿಂಗ್ ಹೋಮ್‍ಗೆ ಕಳುಹಿಸಿ ತಾನು ಅಲ್ಲೆ ಬಂದು ಹೆರಿಗೆ ಮಾಡಿಸುವದಾಗಿ ತಿಳಿಸಿದ್ದಾರೆ. 6 ಗಂಟೆಯಿಂದ ಸುಮಾರು 10 ಗಂಟೆಯವರೆಗೆ ಸಾಮಾನ್ಯ ಹೆರಿಗೆ ಮಾಡಿಸುವದಾಗಿ ಸಮಯ ವ್ಯರ್ಥ ಮಾಡಿದ್ದಾರೆ. ನಂತರ ತನ್ನ ಬಳಿ ವ್ಯವಸ್ಥೆ ಇಲ್ಲ ಕೂಡಲೆ ಶಿರಾಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಶಿರಾಲಿಯಲ್ಲಿ ಅರವಳಿಕೆ ತಜ್ಞೆ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದು ಮೊಬೈಲ್ ಕರೆಗೆ ಸ್ಪಂದಿಸಿಲ್ಲ. ರಾತ್ರಿ 2 ಗಂಟೆಯವರೆಗೆ ಸಮಯ ಹೀಗೆಯೆ ವ್ಯರ್ಥವಾಗಿದೆ. ಗರ್ಭಿಣಿ ಮತ್ತು ಹೊಟ್ಟೆಯಲ್ಲಿದ್ದ ಮಗು ಗಂಭಿರ ಸ್ಥಿತಿಗೆ ತಲುಪುತ್ತಿರುವಂತೆ ರಾತ್ರಿ 2 ಗಂಟೆಗೆ ಭಟ್ಕಳದ ಡಾ. ಸವಿತಾ ಕಾಮತ ಅವರಿಗೆ ಕರೆ ಮಾಡಲಾಗಿದೆ. ಅವರು ಸದ್ಯ ತಾನು ಭಟ್ಕಳ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ತನಗೆ ಅಲ್ಲಿ ತೆರಳಲು ಪರವಾನಿಗೆ ಇಲ್ಲ. ಮೇಲಾಧಿಕಾರಿಗಳ ಸಂದೇಶ ಬರದೆ ತಾನು ಅಲ್ಲಿ ತೆರಳುವದಾದರೂ ಹೇಗೆ ಎಂದು ಅಸಾಯಕತೆ ತೋಡಿಕೊಂಡಿದ್ದಾರೆ.
ಈ ನಡುವೆ ಗರ್ಭಿಣಿ ಮಹಿಳೆಯನ್ನು ಹೊನ್ನಾವರಕ್ಕೆ ಕರೆದುಕೊಂಡು ಹೋಗುವ ಪ್ರಯತ್ನ ನಡೆದಿದೆ. ಆದರೆ 10ರಿಂದ 15 ನಿಮಿಷದಲ್ಲಿ ಶಸ್ತ್ರ ಚಿಕಿತ್ಸೆ ನಡೆಯದಿದ್ದರೆ ಅಪಾಯ ಖಚಿತ ಎಂದು ಶಿರಾಲಿಯ ಹೆರಿಗೆ ತಜ್ಞೆ ಆತಂಕ ವ್ಯಕ್ತಪಡಿಸಿದ್ದಾರೆ. ವಿಷಯ ಶಾಸಕ ಸುನೀಲ ನಾಯ್ಕ ಗಮನಕ್ಕೆ ಬಂದಿದ್ದು ಎನಾದರೂ ತಾನಿದ್ದೇನೆ ನೀವು ಚಿಕಿತ್ಸೆ ನೀಡಿ ಎಂದು ಡಾ. ಸವಿತಾ ಕಾಮತ ಅವರನ್ನೆ ಒಪ್ಪಿಸಿ, ಅವರಿಂದ ಅರವಳಿಕೆ ಇಂಜೆಕ್ಷನ್ ನೀಡಿ ತಕ್ಷಣ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಡಾ. ಸವಿತಾ ಕಾಮತ ಬರದಿದ್ದರೆ ನಮ್ಮ ಸ್ಥಿತಿ ಚಿಂತಾಜನಕವಾಗುತ್ತಿತ್ತು ಎಂದು ಗರ್ಭಿಣಿ ಮಹಿಳೆಯ ಸಂಬಂಧಿಕರು ವೈದ್ಯೆಯನ್ನು ಅಭಿನಂದಿಸಿದ್ದಾರೆ. ಭಟ್ಕಳದ ಸರ್ಕಾರಿ ಆಸ್ಪತ್ರೆಯನ್ನು ಹಿಂದಿನಂತೆ ಸಾರ್ವಜನಿಕರ ಉಪಯೋಗಕ್ಕೆ ನೀಡಿ ಶಿರಾಲಿ ಆಸ್ಪತ್ರೆಯನ್ನು ಕರೊನಾ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಎನ್ನುವ ಆಗ್ರಹಗಳು ಸಾರ್ವಜನಿಕರಿಂದ ಕೇಳಿ ಬರಲಾರಂಭಿಸಿದೆ.

ಭಟ್ಕಳ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕರಿ ಡಾ. ಸವಿತಾ ಕಾಮತ ಅವರ ಕಳಕಳಿ ಅಭಿನಂದನಾರ್ಹ. ಶನಿವಾರ ರಾತ್ರಿಯ ಘಟನೆಯಲ್ಲಿ ಅವರು ಮಾನವೀಯತೆ ಮೆರೆದಿದ್ದು 2 ಅಮೂಲ್ಯ ಜೀವವನ್ನು ಉಳಿಸಿದ್ದಾರೆ. ಹೆರಿಗೆ ಮಾಡಿಸಿದ ಡಾ. ಶಂಶನೂರು ಅವರ ಕಾಳಜಿಯೂ ಪ್ರಶಂಶನೀಯ. ಸುನೀಲ ಬಿ. ನಾಯ್ಕ, ಶಾಸಕರು, ಭಟ್ಕಳ

error: