April 13, 2024

Bhavana Tv

Its Your Channel

೨೦೧೯-೨೦ ನೇ ಸಾಲಿನ ೫೦೫೪ ಜಿಲ್ಲಾ ಮುಖ್ಯ ರಸ್ತೆಗಳ ನವೀಕರಣ ಯೋಜನೆಯ ಅಡಿಯಲ್ಲಿ ೧೦೭.೯೨ ಲಕ್ಷ ರೂಗಳ ಕುಮಟಾ-ಹೆಗಡೆ ರಸ್ತೆಯ ಮರುಡಾಂಬರೀಕರಣ ಕಾಮಗಾರಿಗೆ ಶುಕ್ರವಾರ ಶಾಸಕ ದಿನಕರ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು,” ಸರಕಾರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೧೦ ಕೋಟಿ ರೂ ಹಣ ನೀಡಿದ್ದು, ಹೆಗಡೆ ಭಾಗದ ಸುಮಾರು ೧೨೫ ಮೀ ರಸ್ತೆ ಕಾಂಕ್ರೀಟಿಕರಣ ಹಾಗೂ ಉಳಿದ ರಸ್ತೆ ಭಾಗಕ್ಕೆ ಡಾಂಬರೀಕರಣ ಮಾಡುವ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಿದ್ದೇನೆ. ಅಲ್ಲದೇ ಈ ೧೦ ಕೋಟಿ ಹಣದಲ್ಲಿ ಕ್ಷೇತ್ರದಲ್ಲಿ ತೀರಾ ಕೆಟ್ಟುಹೋಗಿರುವ ರಸ್ತೆಯ ದುರಸ್ತಿಗೆ ನಿರ್ಧರಿಸಲಾಗಿದೆ. ಅನೇಕರು ಅಪಪ್ರಚಾರ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಏಂದೋ ಅರ್ಜಿ ನೀಡಿದ ಕೆಲಸ ಅದೆಂದೋ ಆದರೆ ನಾವೇ ಮಾಡಿಸಿದ್ದು ಎಂದು ಹೇಳಿಕೊಂಡು ಅಪಪ್ರಚಾರ ಮಾಡಲಾಗುತ್ತಿದೆ. ಯಾರೇ ಶಾಸಕರಿದ್ದರೂ ಸಹ ಸರಕಾರದಿಂದ ಹಣದ ಸದ್ವನಿಯೋಗ ಮಾಡುವ ಜವಾಬ್ದಾರಿ ಜನಪ್ರತಿನಿಧಿಗಳದ್ದು. ಇನ್ನು ಅನೇಕ ದುಸ್ತಿತಿಯಲ್ಲಿರುವ ರಸ್ತೆಗಳ ಕಾಮಗಾರಿ ಪ್ರಾರಂಭಗೊಳ್ಳಬೇಕಿದೆ. ಆದಷ್ಟು ಬೇಗ ಆ ಕೆಲಸ ಪ್ರಾರಂಭಗೊಳ್ಳುವAತೆ ನೋಡಿಕೊಳ್ಳುತ್ತೇನೆ. ಅಲ್ಲದೇ ಮಾನೀರದಿಂದ ಹಂದಿಗೋಣ ವರೆಗಿನ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಉತ್ತಮವಾಗಿ ನಡೆಯುತ್ತಿದ್ದು ವಿರೋಧಿಗಳು ಒಮ್ಮೆ ಅದನ್ನು ನೋಡಿಬರಲಿ “ಎಂದರು.

ಈ ಸಂಧರ್ಭದಲ್ಲಿ ಹಿರಿಯರಾದ ವಿನೋದ ಪ್ರಭು, ಮಂಡಲಾಧ್ಯಕ್ಷ ಹೇಮಂತ ಗಾಂವಕರ್, ಧೀರೂ ಶಾನಭಾಗ, ಮೋಹನ ಶಾನಭಾಗ, ಗ್ರಾ.ಪಂ ಅಧ್ಯಕ್ಷ ಮಂಜುನಾಥ ಪಟಗಾರ, ಚೆತೇಶ್ ಶಾನಭಾಗ, ಪುರಸಭಾ ಸದಸ್ಯರಾದ ಮೋಹಿನಿ ಗೌಡ ಹಾಗೂ ಪಲ್ಲವಿ ಮಡಿವಾಳ, ಪಿಡ್ಬ್ಲೂಡಿ ರಾಜು ಶಾನಭಾಗ, ಪವನ ಪ್ರಭು, ರಾಘು ಗೌಡ, ಯೋಗೀಶ ಪಟಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: