
ಬರ್ಗಿ : “ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ”, ಉತ್ತರಕನ್ನಡ ಶಾಖೆ ಕುಮಟಾ, ವತಿಯಿಂದ ಸರ್ಕಾರಿ ಪ್ರೌಢಶಾಲೆ ಬರ್ಗಿಯಲ್ಲಿ “ಹದಿಹರೆಯ ವಯೋಮಾನದ ಮಕ್ಕ¼ಲ್ಲಿ ಉಂಟಾಗುವ ತೊಂದರೆ ಮತ್ತು ಲೈಂಗಿಕ ಶಿಕ್ಷಣದ” ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
“ಹದಿಹರೆಯ ವಯೋಮಾನದ ಮಕ್ಕ¼ಲ್ಲಿ ಉಂಟಾಗುವ ತೊಂದರೆ ಮತ್ತು ಲೈಂಗಿಕ ಶಿಕ್ಷಣದ”ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸುವ ಮೂಲಕ ಸುಮಾರು ೨೫೦ಕ್ಕೂ ಹೆಚ್ಚಿನ ವಿದ್ಯಾರ್ಥಿUಳಿಗೆ “ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾದ ಕೋಶಾಧಿಕಾರಿಯಾದ ಶ್ರೀ.ಬಿರಣ್ಣ ನಾಯಕ್ ಉಪನ್ಯಾಸ ನೀಡಿದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾದಲ್ಲಿ ಲಭಿಸುವ ಸೇವೆಗಳ ಕುರಿತು ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾದ ಕಾರ್ಯಕ್ರಮಾಧಿಕಾರಿ ಮಿಸ್ ಮಂಜುಳಾ ಗೌಡ ಪ್ರಾಸ್ತಾವಿಕ ಮಾತನಾಡಿದರು.
ನಿಮಗೆ ಶಾರೀರಕ ಬದಲಾವಣೆಯ ಕುರಿತಾಗಿ ವಿಜ್ಞಾನದಲ್ಲಿ ಒಂದು ಪಾಠವೇ ಬಂದಿದ್ದು, ಆದರೂ ನೀವು ಇದರ ಕುರಿತು ತಿಳಿದುಕೋಳ್ಳುವುದು ತುಂಬಾ ಅವಶ್ಯಕವಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸರ್ಕಾರಿ ಪ್ರೌಢಶಾಲೆ ಬರ್ಗಿಯ ಶಿಕ್ಷಕರಾದ ಶ್ರೀ. ಪಿ.ಎನ್ ನಾಯ್ಕ ಅಧ್ಯಕ್ಷಿಯ ಭಾ಼ಷಣವನ್ನು ಮಾಡಿದರು.
ಸರ್ಕಾರಿ ಪ್ರೌಢಶಾಲೆ ಬರ್ಗಿಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.