November 9, 2024

Bhavana Tv

Its Your Channel

೯-೨-೨೦೨೦ ರಂದು ರವಿವಾರ ರಾಜ್ಯ ಮಟ್ಟದ ಸಹಯಾನ ಸಾಹಿತ್ಯೋತ್ಸವವನ್ನು ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಸಮುದಾಯ ಕರ್ನಾಟಕ, ಬೆಂಗಳೂರು, ಚಿಂತನ ಉತ್ತರ ಕನ್ನಡ ಇವರ ಸಹಯೋಗದಲ್ಲಿ

ಸಿನೆಮಾ ಹೊಸ ತಲೆಮಾರು ಎನ್ನುವ ವಿಷಯದ ಮೇಲೆ ೧೦ ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ ನಡೆಯುತ್ತಿದ್ದು ಸಂಸ್ಕೃತಿ ಚಿಂತಕ ಕೆ. ಫಣಿರಾಜ ಅವರ ಸರ್ವಾಧ್ಯಕ್ಷತೆ ಯಲ್ಲಿ ನಡೆಯಲಿದೆ. ಹಿರಿಯ ಸಂಸ್ಕೃತಿ ಚಿಂತಕರಾದ ಪ್ರೊ. ಫಣಿರಾಜ ಅವರು ಸಧ್ಯ ಮಣಿಪಾಲದ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸಿನೆಮಾ ನೋಡುಗರಾದ ಇವರು ಕರ್ನಾಟಕದ ಕೆಲವೇ ಕೆಲವು ಸಿನೆಮಾ ವಿಮರ್ಶಕರಲ್ಲಿ ಪ್ರಮುಖರು. ಕರ್ನಾಟಕದ ಜನಪರ ಚಳುವಳಿಗಳಲ್ಲಿ ಪ್ರಾರಂಭದಿAದ ತೊಡಗಿಸಿಕೊಂಡಿರುವ ಇವರು ೧೦ ಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ.
ಉದ್ಘಾಟಕರಾಗಿ ನಿರ್ದೇಶಕರಾದ ಎಂ. ಎಸ್. ಪ್ರಕಾಶ ಬಾಬು, ಅತಿಥಿಗಳಾಗಿ ಪತ್ರಕರ್ತ ಅಮ್ಮೆಂಬಳ ಆನಂದ ಉಪಸ್ತಿತರಿರುವರು.
ಅಧ್ಯಾಪಕರಾದ ಪ್ರದೀಪ ಶೆಟ್ಟಿ, ಬೈಂದೂರು ಆಶಯ ನುಡಿಯನ್ನಾಡಲಿದ್ದಾರೆ. ಆರ್. ವಿ. ಕುರಿತು ಎಂ. ಜಿ. ಹೆಗಡೆ, ಅಧ್ಯಾಪಕರು ಕುಮಟಾ ಮಾತನಾಡಲಿದ್ದಾರೆ..
ಮೊದಲ ಸಂವಾದ : ಸಿನೆಮಾ: ಸೌಂದರ್ಯ ಮೀಮಾಂಸೆಯ ಅಭಿವ್ಯಕ್ತಿ – ಅಭಯ ಸಿಂಹ ನಿರ್ದೇಶಕರು
ಎರಡನೇ ಸಂವಾದ : ಗುಂಪು ಸಂವಾದ ಸಿನಿಮಾ: ನೋಡುವ, ವಿಮರ್ಶಿಸುವ ಬಗೆ – ಕತೆಗಾರರಾದ ಟಿ. ಕೆ. ದಯಾನಂದ,
ಮೂರನೇ ಸಂವಾದ ಹೆಣ್ಣಿನ ನೆಲೆಯಲ್ಲಿ ಸಿನೆಮಾ- ಅನನ್ಯ ಕಾಸರವಳ್ಳಿ, ನಟಿ ನಿರ್ದೇಶಕಿ ಹಾಗೂ
ನಾಲ್ಕನೇ ಸಂವಾದ ಡಿಜಿಟಲ್ ಸಿನಿಮಾ ವೇದಿಕೆಯ ಹೊಸ ಸಾಧ್ಯತೆಗಳು – ವಿಶಾಖ, ದಾವಣಗೆರೆ ನಡೆಸಿಕೊಡಲಿದ್ದರೆ.

   ಸಮಾರೋಪ    ಸಮಾರಂಬದಲ್ಲಿ ಅತಿಥಿಗಳಾಗಿ  ವಿನಯಾ ಒಕ್ಕುಂದ, ಕವಯತ್ರಿ ಸಂವಾದದಲ್ಲಿ: ಮೋಹನ ಹಬ್ಬು, ಹನುಮಂತ ಹಾಲಗೇರಿ, ಕಿರಣ ನಾಯ್ಕ, ಸಿನೆಮಾ ನಟ, ಚಿನ್ಮಯ ಹೆಗಡೆ, ಗೋಪಾಲ ಹಳ್ಳೇರ, ಸಂತೋಷ ಸಂಕೊಳ್ಳಿ, ಯೋಗೀಶ ಬಂಕೇಶ್ವರ, ಎಂ ಎಚ್ ಗಣೇಶ, ಗೋವರ್ಧನ್ ನವಿಲೇಹಾಳ, ಶಂಕರ ಕೆಂಚನೂರು, ಪ್ರಿಯಾಂಕ ಮಾವಿನಕರ, ತಿಮ್ಮಪ್ಪ ಗುಲ್ವಾಡಿ ಉಪಸ್ತಿತರಿರಲಿದ್ದಾರೆ. ಸಂಜೆ ೬ ಗಂಟೆಯಿAದ : ಸಿನೆಮಾ ಪ್ರದರ್ಶನ ನಡೆಯಲಿದೆ ಎಮದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
error: